ಸುದ್ದಿ9 ಕೈಕಂಬ :ಜಿಲ್ಲಾ ಕಂಬಳದ ವಾರ್ಷಿಕ ಮಹಾಸಭೆಯು ಭಾನುವಾರ ಆ.10ರಂದು ಮೂಡಬಿದ್ರೆ ಸಮಾಜ ಮಂದಿರದಲ್ಲಿ ನಡೆಯಿತು. ಉಭಯ ಜಿಲ್ಲೆಗಳ ಎಲ್ಲಾ ಕಂಬಳ ವ್ಯವಸ್ಥಾಪಕರು ಸ್ಪರ್ಧಾ ಕೋಣಗಳ ಯಜಮಾನರು, ತೀರ್ಪ್ ಗಾರರು , ಕಂಬಳ ಅಭಿಮಾನಿಗಳು ಎಲ್ಲಾ ವಿಭಾಗದ ಕೋಣ ಓಡಿಸುವವರು ಸಭೆಯಲ್ಲಿ ಭಾಗವಹಿಸಿದ್ದರು.
ಈ ಸಭೆಯಲ್ಲಿ 2013-14ನೇ ಸಾಲಿನ ಸರಣಿ ಪ್ರಶಸ್ತಿ ವಿಜೇತರನ್ನು ಸಮಿತಿಯ ಅಧ್ಯಕ್ಷ ಭಾಸ್ಕರ ಕೋಟ್ಯಾನ್ ಇರ್ವತ್ತೂರು, ಕಾರ್ಯದರ್ಶಿ ಸುರೇಶ ಪೂಜಾರಿ ರೆಂಜಾಳ , ಸುರೇಶ್ ಎಮ್ ಶೆಟ್ಟಿ , ಬಾರ್ಕೂರು ಶಾಂತರಾಮ ಶೆಟ್ಟಿ ಅವರುಗಳ ಉಪ ಸ್ಥಿತಿಯಲ್ಲಿ ಯುವಜನ ಮತ್ತು ಮೀನುಗಾರಿಕೆ ಸಚಿವ ಅಭಯಚಂದ್ರ ಜೈನ್ , ಸುರೇಶ್ ಜೈನ್ ಮೂಡಬಿದ್ರೆಅವರು ಕಂಬಳದ ಅತ್ಯತ್ತಮ ಶ್ರೇಷ್ಟ ವ್ಯವಸ್ಥಾಪಕ ಪ್ರಶಸ್ತಿಗಳ್ಲನ್ನು ಕಂಬಳದ ಎಲ್ಲಾ ವಿಭಾಗದ ಓಟಗಾರರಾದ ಕರಿಂಜೆ ವಿಶ್ವನಾಥ ಶೆಟ್ಟಿ, ಬೋಳದ ಗುತ್ತು ಸತೀಶ್ ಶೆಟ್ಟಿ , ಅಂಕರಜಾಲ್ ಬಿರ್ಮಣ ಶೆಟ್ಟಿ, ನಂದಳಿಕೆ ಶ್ರೀಕಾಂತ್ ಭಟ್, ಕಾಂತಾವಾರ ಗುರುಪ್ರಸಾದ್ ಕೋಟ್ಯಾನ್,ಶಿರೂರು ಗೋಪಾಲ ನಾಯಕ್ , ನೆಕ್ರೆ ಜಯಕರ ಮಡಿವಾಳ, ಹಕ್ಕೇರಿ ಸುರೇಶ್ ಎಮ್ ಶೆಟ್ಟಿ, ಮುಳಿಕಾರ್ ಅಣ್ಣಿ ದೇವಾಡಿಗ,ಇರ್ವತ್ತೂರು ಆನಂದ ಅವರುಗಳನ್ನು ಪುರಸ್ಕರಿಸಿ ಅಭಿನದಿಸಲಾಯಿತು.
