ಬಂಟ್ವಾಳ : ಕರ್ನಾಟಕ ಜೀವ ವೈವಿದ್ಯ ಮಂಡಳಿಯ ಬಂಟ್ವಾಳ ಜೀವ ವೈವಿದ್ಯ ನಿರ್ವಹಣಾ ಸಮಿತಿಯ ಜೊತೆ ವಿನಿಮಯ ಭೇಟಿ ಕಾರ್ಯಕ್ರಮವನ್ನು ಬಂಟ್ವಾಳ ತಾ.ಪಂ.ನ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೀವ ವೈವಿದ್ಯ ನಿರ್ವಹಣಾ ಸಮಿತಿಯ ಮತ್ತು ತಾ.ಪಂ.ನ ಅಧ್ಯಕ್ಷರಾದ ಕೆ.ಚಂದ್ರಹಾಸ ಕರ್ಕೇರಾ ವಹಿಸಿದ್ದರು.ಪ್ರಸ್ತಾವನೆಯನ್ನು ಕರ್ನಾಟಕ ಜೀವ ವೈವಿದ್ಯ ಮಂಡಳಿ ಸದಸ್ಯರಾದ ವೀಣಾ ಬೆಂಗಳೂರು ರವರು ಮಾಡಿದರು. 
ಕೆ.ಜಿ.ವೈ ಮಂಡಳಿಯ ಸದಸ್ಯರು ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮುಖ್ಯಸ್ಥರಾದ ಡಾ.ಜಯಶಂಕರ ಭಂಡಾರಿ ಮಾತನಾಡುತ್ತಾ ಬಂಟ್ವಾಳ ತಾಲೂಕಿನ ವ್ಯಾಪ್ತಿಯಲ್ಲಿರುವ ಜೀವವೈವಿದ್ಯಗಳು ತಾಲೂಕಿನ ಆಸ್ತಿಯಾಗಿದ್ದು ಇದರ ನಿರ್ವಹಣೆ ತಾ.ಪಂ.ನ ಜವಾಬ್ದಾರಿಯಾಗಿದೆ.ಯಾವುದೇ ಸಸ್ಯಗಳು ಮತ್ತು ಕಾಡು ಉತ್ಪತ್ತಿಗಳನ್ನು ಸಂಗ್ರಹ ಮಾಡಲು ಜೀವ ವೈವಿದ್ಯ ಮಂಡಳಿಯಿಂದ ಅನುಮತಿ ಪಡೆದು ಯಾವುದೇ ಸಸ್ಯಗಳಿಂದ ತಯಾರಿಸಿದ ಔಷದಿ ಮತ್ತು ಇತರ ಉತ್ಪನ್ನಗಳ ಮಾರಾಟದಿಂದ ಬರುವ ಆದಾಯದಿಂದ ಒಂದು ಪಾಲು ಸಮಿತಿಗೆ ನೀಡಬೇಕಾಗಿದೆ.ಸದ್ರಿ ಮೊತ್ತವನ್ನು ಜೀವ ವೈವಿದ್ಯ ನಿರ್ವಹಣೆಗೆ ಹಂಚಿಕೆ ಮಾಡಲಾಗುವುದು.
ದ.ಕ.ಜಿಲ್ಲೆಯಲ್ಲಿ ನಾಗಬನಗಳ ಮೂಲಕ ಈಗಾಗಲೇ ಸಸ್ಯಗಳ ರಕ್ಷಣೆ ಮಾಡಲಾಗಿದೆ. ಇದೇ ರೀತಿ ರಕ್ಷಣೆ ಮಾಡುವರೆ ವಾರ್ಷಿಕ ಬಜೆಟ್ ತಯಾರಿಸಿ ಮಂಡಳಿಗೆ ಸಲ್ಲಿಸಿ ದರೆ ಸಮಿತಿಯ ಅಲ್ಪ ಮೊತ್ತವನ್ನು ವಿನಿಯೋಗಿಸಲಾಗುವುದು.ಅಳಿವಂಚಿನಲ್ಲಿ ರುವ ಜೀವ ವೈವಿದ್ಯಗಳನ್ನು ದಾ ಖಲಾತಿ ಮಾಡಿ ಉಳಿಸುವಂತ ಪ್ರಯತ್ನ ಮಾಡುವಂತೆ ತಿಳಿಸಿದರು. ಬಂಟ್ವಾಳ ತಾಲೂಕು ರಾಜ್ಯದಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ಪ್ರಯತ್ನಿಸುತ್ತಿರುವುದು ಮಾದರಿ ಕಾರ್ಯಕ್ರಮವಾಗಬೇಕು ಎಂದು ತಿಳಿಸಿದರು.
ವೇದಿಕೆಯಲ್ಲಿ ತಾ.ಪಂ.ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಸದಸ್ಯರಾದ ಧನಲಕ್ಷ್ಮಿ ಸಿ.ಬಂಗೇರಾ, ತಾ.ಪಂ.ಸದಸ್ಯರಾದ ಗಾಯತ್ರಿ ರ ವೀಂದ್ರ ಸಪಲ್ಯ, ಸಾಮಾಜಿಕ ಅರಣ್ಯ ವಲಯ ಮಂಗಳೂರು ಇದರ ಉಪಸಂರಕ್ಷಣಾಧಿಕಾರಿ ಶ್ರೀನಿವಾಸ ಮೂರ್ತಿ, ಕರ್ನಾಟಕ ಜೀವ ವೈವಿದ್ಯ ಸಮಿತಿಯ ಸದಸ್ಯರಾದ ಡಾ.ಸಿ.ಜಿ.ಕುಶಾಲಪ್ಪ ಪೊನ್ನಂಪೇಟೆ, ಡಾ.ಮಹದೇವ ಮೂರ್ತಿ, ಡಾ.ನಿರಂಜನ ಮೂರ್ತಿ, ತಾ.ಪಂ.ವ್ಯವಸ್ಥಾಪಕರಾದ ಶಂಭವಿ ಎಸ್.ರಾವ್ ಉಪಸ್ಥಿತರಿದ್ದರು.
ತಾ.ಪಂ.ನ ಚಂದ್ರಾವತಿಯವರು ಸ್ವಾಗತಿಸಿದರು. ಅಶೋಕ್ ಕುಮಾರ್ ವಂದಿಸಿದರು.
