ಮಂಗಳೂರು: ಖಾಸಗಿ ಬಸ್ಸು ಮತ್ತು ಕಂಟೈನರ್ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಮಹಿಳೆಯೋರ್ವರು ಮೃತಪಟ್ಟು ಹಲವು ಮಂದಿ ಪ್ರಯಾಣಿಕರು ಗಾಯಗೊಂಡ ಘಟನೆ ಗುರುವಾರ ನಂತೂರು ಜಂಕ್ಷನ್ ಬಳಿ ನಡೆದಿದೆ.
ಮೃತ ಮಹಿಳೆಯನ್ನು ಕವಿತಾ (50) ಎಂದು ಗುರುತಿಸಲಾಗಿದೆ.ಸುಮಾರು 21 ಮಂದಿ ಗಾಯಗೊಂಡಿದ್ದಾರೆ. ಒರ್ವನ ಸ್ಥಿತಿ ಗಂಭೀರವಾಗಿದೆ.
ಪೋಲಿಸ್ ಮೂಲಗಳ ಪ್ರಕಾರ ಬಿಕರ್ನಕಟ್ಟೆಯಿಂದ ಹಂಪನಕಟ್ಟೆಗೆ ತೆರಳುತ್ತಿದ್ದ ಖಾಸಗಿ ಬಸ್ಸಿಗೆ ನಂತೂರು ಜಂಕ್ಷನ್ ಬಳಿ ಗುಜರಾತಿನಿಂದ ಪಂಪ್ ವೆಲ್ ಕಡೆಗೆ ಹೋಗುತ್ತಿದ್ದ ಕಂಟೈನರ್ ಒಂದು ಡಿಕ್ಕಿ ಹೊಡೆದಿದ್ದು, ಪರಿಣಾಮ ಮಹಿಳೆಯೋರ್ವುರ ಮೃತಪಟ್ಟು, ಕಂಟೈನರ್ ಡ್ರೈವರ್ ಸೇರಿದಂತೆ ಬಸ್ಸಿನ ಪ್ರಯಾಣಿಕರು ಗಾಯಗೊಂಡಿದ್ದಾರೆ.

ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



