ವಾಮಂಜೂರು: ಎಸ್ ಡಿ ಎಂ ಮಂಗಳಜ್ಯೊತಿ ಸಮಗ್ರ ಶಾಲೆ ಯಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ  ಜಿಲ್ಲಾ ಮಟ್ಟದ ವಿಕಲ ಚೇತನ ಮಕ್ಕಳಿಗೆ ಸಂಸ್ಕೃತಿಕ ಉತ್ಸವ “ಕಲೊತ್ಸವ 2017”
8ರಂದು ಶುಕ್ರವಾರ  ದಿವಂಗತ ಮಾತೃ ಶ್ರೀ ರತ್ನಮ್ಮ ಹೆಗ್ಗಡೆಯವರ ಸ್ಮರಣಾರ್ಥ ಎಸ್ ಡಿ ಎಂ ಮಂಗಳಜ್ಯೊತಿ ಸಮಗ್ರ ಶಾಲೆ ವಾಮಂಜೂರು,  ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವಿಶೇಷ ಶಾಲೆಗಳಲ್ಲಿ ಕಲಿಯುತ್ತಿರುವ ವಿಕಲ ಚೇತನ ಮಕ್ಕಳಿಗೆ ಸಂಸ್ಕೃತಿಕ ಉತ್ಸವ “ಕಲೊತ್ಸವ 2017” ಕಾರ್ಯಕ್ರಮವು ಜರಗಿತು.DSC09591

DSC09553

ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ ಎಂ ಆರ್ ರವಿ, ಭಾ ಅ ಸೇ ಇವರು ಉದ್ಘಾಟಿಸಿ ಮಾತನಾಡುತ್ತಾ ಶಿಕ್ಷಣವು ಬರಿಯ ಹಣ ಮಾಡುವ ಕಲೆಯನ್ನು ಮಾತ್ರ ಕಲಿಸದೆ ಅವರಿಗೆ ಇತರರನ್ನು ಪ್ರಿತಿಸುತ್ತಾ ಬದುಕುವ ಕಲೆಯನ್ನು ಹೇಳಿಕೊಡಬೇಕು. ಸಮನ್ವಯ ಶಿಕ್ಷಣದ ಮೂಲಕ ವಿಕಲಚೇತನರನ್ನು ಸಮಜದ ಮುಖ್ಯ ವಹಿನಿಗೆ ತರುತ್ತಿರುವ ಎಸ್ ಡಿ ಎಂ ಮಂಗಳಜ್ಯೊತಿ ಸಮಗ್ರ ಶಾಲೆಯ ಕೆಲಸ ಅತಿ ಪವಿತ್ರವಾದದ್ದು ಎಂದು ನುಡಿದರು.DSC09497

DSC09562ಮುಖ್ಯ ಅತಿಥಿಯಾಗಿ ಭಾಗವಹಿಸಿದ  ವತಿಕಾ ಪೈ, ಅಧ್ಯಕ್ಷರು, ಕೆನರಾ ಚೇಂಬರ್ ಆಪ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ ಇವರು ಮಾತನಾಡಿ ಕಲೋತ್ಸವಗಳಂತಹ ಕಾರ್ಯಕ್ರಮಗಳು ದಿವ್ಯಾಂಗ ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರಹಾಕಲು ಪೂರಕವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಗವಿಕಲರ ಕಲ್ಯಾಣ ಸಂಸ್ಥೆ- ಎಸ್ ಡಿ ಎಂ ಮಂಗಳಜ್ಯೊತಿ ಸಮಗ್ರ ಶಾಲೆ ಯ ಕಾರ್ಯದರ್ಶಿಗಳಾದ ಪ್ರೋ/  ಎ ರಾಜೇಂದ್ರ ಶೆಟ್ಟಿಯವರು ವಹಿಸಿಕೊಂಡಿದ್ದರು. ವೇದಿಕೆಯಲ್ಲಿ ಎಸ್‍ಡಿ ಎಂ ಮಂಗಳಜ್ಯೊತಿ ಸಮಗ್ರ ಶಾಲೆಯ ಆಡಳಿತಾಧಿಕಾರಿ ಗಣೇಶ್ ಭ್‍ಟ್ ವಿ, ಪ್ರಾಥಮಿಕ ವಿಭಾಗದ ಮುಖ್ಯಸ್ಥೆ  ಮಾರ್ಯಟ್ ಮಸ್ಕರೇನಸ್ , ಐಟಿಐ ವಿಭಾಗದ ಪ್ರಾಂಶುಪಾಲರಾದ ನರೇಂದ್ರ ಉಪಸ್ಥಿತರಿದ್ದರು. ಪ್ರೌಢ ಶಾಲಾ ವಿಭಾಗದ ಮುಖ್ಯಸ್ಥ  ಆಶೋಕ್ ಕುಮಾರ್ ಅವರು ಸ್ವಾಗತಿಸಿದರೆ, ವಾಕ್ ಶ್ರವಣ ವಿಭಾಗದ ಮುಖ್ಯಸ್ಥ ಗುರುಪ್ರಸಾದ್ ವಂದಿಸಿದರು.  ರಮೇಶ್ ಆಚಾರ್ ಕಾರ್ಯಕ್ರಮ ನಿರೂಪಿಸಿದರು.ಉಭಯ ಜಿಲ್ಲೆಗಳ ವಿಶೇಷ ಮಕ್ಕಳ ಶಾಲೆಗಳಿಂದ ಬಂದು ಭಾಗವಹಿಸಿದ ನೂರಕ್ಕೂ ಹೆಚ್ಚಿನ ಮಕ್ಕಳು ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದರು.

By Suddi9

Leave a Reply

Your email address will not be published. Required fields are marked *