ಮಂಗಳೂರು: ದಾರುಲ್ ಅಶ್-ಅರಿಯ್ಯಾ ವಿದ್ಯಾ ಸಂಸ್ಥೆಯ ಶಿಲ್ಪಿ ಮರ್ಹೂಂ ಸುರಿಬೈಲ್ ಉಸ್ತಾದ್ರವರವ 16ನೇ ವಾರ್ಷೀಕ ಅನುಸ್ಮರಣೆ ಆಂಡ್ ನೇರ್ಚೆ ಪ್ರಯಕ್ತ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಸುಮಾರು ಸಾವಿರ ಅಧಿಕ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಯಿತು.

ಅಬ್ದುಲ್ ವಾಜಿದ್ ಹನೀಫಿ, ಅಬ್ಬಾಸ್ ಮುಸ್ಲಿಯಾರ್, ದಾರುಲ್ ಅಶ್-ಅರಿಯ್ಯಾ ಮ್ಯಾನೇಜರ್ ಅಬ್ದುಲ್ ರಶೀದ್ ಹನೀಫಿ, ಇಬ್ರಾಹೀಂ ಕಂಡಿಗ, ಎಸ್ವೈಎಸ್ ಜಿಲ್ಲಾ ಪ್ರ.ಕಾರ್ಯದರ್ಶಿ ಅಶ್ರಫ್ ಕಿನಾರ, ಎಸ್ಸೆಸ್ಸೆಫ್ ಎನ್.ಸಿ ರೋಡ್ ಶಾಖಾಧ್ಯಕ್ಷ ಕರೀಂ ಕದ್ಕಾರ್, ದಾರುಲ್ ಅಶ್-ಅರಿಯ್ಯಾ ಮುಹಲ್ಲೀಂ ಅಬ್ದುಲ್ ಅಝೀಝ್ ಮದನಿ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.
