ಶ್ರೀ ಕ್ಷೇತ್ರ ಪಣೋಲಿಬೈಲು ಮಂಗಳೂರು ಬಿ.ಸಿ.ರೋಡ್ ದಾಟಿ ಪಾಣೆಮಂಗಳೂರು ಮೆಲ್ಕಾರುನಿಂದ ಬಲಭಾಗಕ್ಕೆ ಮಾರ್ನಬೈಲ್ ಮೂಲಕ ಎಡಭಾಗಕ್ಕೆ 4ಕಿ.ಮೀ. ದೂರದಲ್ಲಿ ನೆಲೆಯಾದಂತಹ ತುಳುನಾಡಿನ ಅತ್ಯಂತ ಕಾರಣೀಕ ಅದೇ ರೀತಿ ಪಟ್ಟೆ ಸೀರೆ ಹರಕೆ, ಅಗೆಲು ಕೋಲ ಮಲ್ಲಿಗೆ ಹೂ, ಬೆಳ್ಳಿ ಬಂಗಾರ ತೆಗೆದುಕೊಳ್ಳುವ ಸಂಪದ್ಭರಿತ ಜೋಡಿ ದೈವಗೆ ಕಲ್ಲುರ್ಟಿ ಕಲ್ಕುಡ ನೆಲೆಯಾಗಿ ಭಕ್ತರನ್ನು ಹರಸುತ್ತಿಹರು. ಸುಮಾರು 400 ವರ್ಷಗಳಿಗೂ ಹಿಂದೆ ಉಪ್ಪಿನಂಗಡಿಯ ಮಂತ್ರವಾದಿ, ವಿದ್ವಾಂಸನಾದ ವೈಲಾಯರ ಮನೆ ದೇವರಾಗಿ ಬೆಳಗಿದ ಈ ಎರಡು ಶಕ್ತಿಗಳು ಅನಂತರ ಕಲ್ಲೇಗ, ನೇರಳಕಟ್ಟೆ, ಕಡಂಬು, ಪೊಳತ್ತೂರು ಆ ಮೂರು ತದನಂತರ ಪಣೋಲಿಬೈಲಿನಲ್ಲಿ ನೆಲೆಯಾದರು. ಈ ಕ್ಷೇತ್ರದಲ್ಲಿ ನೆಲೆಯಾಗಿ ಹಗಲಿನಲ್ಲಿ ಅಗೆಲು ಭಾರಣೆ ರಾತ್ರಿಯಲ್ಲಿ ನರ್ತನಕೋಲ ಭಕ್ತರಿಂದ ಪಡೆದುಕೊಂಡು ಅಭಯವನ್ನು ಕೊಡುತ್ತಿಹಳು. ಈ ದೈವವು ಸಜಿಪ ಮಾಗಣೆಗೆ ಪ್ರಥಮವಾಗಿ ಪ್ರವೇಶವನ್ನು ಪಡೆಯುವಾಗ ಈ ಜಾಗ ಪ್ರಧಾನ ದೈವವಾಗಿ ಮಾಗಣೆಯ ದೈವವಾಗಿ ನಾಲ್ಕೈತ್ತಾಯ, ನುಡಿಯೇಳು ದೈಯಂಗುಳ, ಉಲ್ಲಾಲ್ದಿ ಅಮ್ಮ ಅಧಿಕಾರಸ್ಥರು.ಈ ದೈವಗಳ ಅಪ್ಪಣೆಯನ್ನು ಈ ರೀತಿ ಪಡೆದಳು.23844689_1690102457696247_19505726717297541_n

ಮಿತ್ತ ಮಜಲು ಜಾಗದಲ್ಲಿ ನಡಿಯೇಳು ದೈಯಂಗುಲು ದೈವಕ್ಕೆ ನೇಮ ನಡೆಯುತ್ತಿರುವಾಗ,ನಡಿಯೇಳು ದೈಯೊಂಗುಲು ದೈವದ ಪಕ್ಕದಲ್ಲಿ ನಾಲ್ಕೆತ್ತಾಯ ದೈವವು ದರ್ಶನ ಪಾತ್ರಿಯ ಮೂಲಕ ಇರುವಾಗಕಲ್ಲುರ್ಟಿಯು ಮಿತ್ತ ಮಜಲಿಗೆ ಪ್ರವೇಶವನ್ನಿಟ್ಟಳು. ನನಗೆ ಈ ಮಾಗಣೆಯಲ್ಲಿ ನೆಲೆಯಾಗಲು ಜಾಗಬೇಕೆಂದು ಮಾಗಣೆಯ ಕುಲಾಲ ವ್ಯಕ್ತಿಯ ಮೈಮೇಲೆ ಕಲ್ಲುರ್ಟಿ ದೈವವು ಆವೇಶಭರಿತಳಾಗಿ ಬಂದು ತಿಳಿಸಿದಳು. ಆ ಸಮಯದಲ್ಲಿ ಅಲ್ಲಿರುವ ಗುರಿಕಾರರ ಅಣತಿಯಂತೆ ಆವೇಶಭರಿತ ವ್ಯಕ್ತಿಯ ಮೈಮೇಲೆ ಕೈ ಹಾಕಿ ಹೊರಗೆ ದೂಡಿದರು. ಆ ಸಮಯದಲ್ಲಿ ಕೋಪಗೊಂಡ ಕಲ್ಲುರ್ಟಿ ದೈವವು ನಾನು ಯಾರೆಂದು, ನನ್ನ ಶಕ್ತಿಯನ್ನು ತೋರಿಸುತ್ತೇನೆ ಎಂದು ದೈವ ಕಲ್ಲುರ್ಟಿಯು ದೈವಂಗುಳ ದೈವದನೇಮದ ಸಿರಿಮುಡಿಗೆ ಬೆಂಕಿ ಹಾಕಿದಳು. ಅದೇ ರೀತಿ ಅದನ್ನು ನಂದಿಸಿದಳು. ನಂತರ ಸಜೀಪ ಮಾಗಣೆಯ ದೈವಗಳಿಗೂ ಕಲ್ಲುರ್ಟಿಗೂ ಒಡಂಬಡಿಕೆ ಒಪ್ಪಂದವಾಗಿ ಅಲ್ಲಿಂದ ಪಕ್ಕದಲ್ಲಿನ ಕಲ್ಲಿನಲ್ಲಿ ಕಲ್ಲುರ್ಟಿ ನೆಲೆಯಾಗಿ ಬರ್ಕೆ ಶೆಟ್ಟಿ ವಂಶಸ್ಥರನ್ನು ಕೂಡಿಕೊಂಡು ಆ ಕಲ್ಲನ್ನು ಗುಡ್ಡ ಮೂಲ್ಯನು ಹೊತ್ತುಕೊಂಡು ಪಣೋಲಿಬೈಲಿಗೆ ಈಗ ನೆಲೆಯಾದ ಜಾಗದಲ್ಲಿ ಗುಡ್ಡ ಮೂಲ್ಯನು ಆಯಾಸಗೊಂಡು ಕಲ್ಲನ್ನು ಅಲ್ಲೆ ಇಟ್ಟನು. ಸ್ವಲ್ಪ ಹೊತ್ತು ಕಳೆದ ಮೇಲೆ ಕೆಳಗೆ ಇಟ್ಟ ಕಲ್ಲು ಮೇಲೆ ಎತ್ತಲಾಗದಾಯಿತು. ಕಲ್ಲು ಅಲ್ಲೆ ಸ್ಥಿರವಾಗಿ ಅಲುಗಾಡಿಸದಾಯಿತು.ಅಂದು ಮಂಗಳವಾರ ದಿವಸ ಕಲ್ಲುರ್ಟಿ ಕಲ್ಕುಡರು ಅಲ್ಲಿ ನೆಲೆಯಾದರು.

ಅವತ್ತಿನ ದಿನವೇ ದೈವಕ್ಕೆ ಕೋಲ ಸೇವೆ ನಡೆಯಿತು, ಹಾಲು ಕುಡಿದಳು. ನಂತರ ತನ್ನ ಕಟ್ಟುಕಟ್ಟಳೆಯನ್ನು ತಿಳಿಸಿದಳು. ತನ್ನ ಅರ್ಚಕ ಕೆಲಸವನ್ನು ಗುಡ್ಡ ಮೂಲ್ಯರವರು ಮತ್ತು ಅವರ ಸಂತತಿಯಾವರು ಮಾಡಬೇಕೆಂದು, ಅಗೆಲು ಬಡಿಸುವುದು ಅಗೆಲು ಸಾಮಾನು ಬೇಯಿಸುವುದು ಈ ಸಂತತಿ ಎಂದು ತಿಳಿಸಿದಳು, ಅವಳ ಬಂಡಾರ ಗುಡ್ಡ ಮೂಲ್ಯರ ಮನೆಯ ಎದುರು ಭಾಗದ ಭಂಡಾರ ಮನೆಯಿಂದ ನೆಲೆಯಾದ ಸ್ಥಳಕ್ಕೆ ಬರುವ ಸಂಪ್ರದಾಯ ಇದೆ. ಈ ಜಾಗದ ದೈವದ ಚಾಕಿರಿ ಕೆಲಸವನ್ನುಸಾಲ್ಯಾನ್ ಗೋತ್ರದ ಗುಡ್ಡ ಮೂಲ್ಯರ ಮನೆಯ ಎದುರು ಭಾಗದ ಭಂಡಾರ ಮನೆಯಿಂದ ನೆಲೆಯಾದ ಸ್ಥಳಕ್ಕೆ ಬರುವ ಸಂಪ್ರದಾಯ ಇದೆ. ಈ ಜಾಗದ ದೈವದ ಚಾಕಿರಿ ಕೆಲಸವನ್ನು ಸಾಲ್ಯಾನ್ ಗೋತ್ರದ ಗುಡ್ಡ ಮೂಲ್ಯರ ಸಂತತಿಯವರು ಮಾಡುತ್ತಿರುವಾಗ ಅವರಿಗೆ ಸೂತಕ ಬಂದಲ್ಲಿ ಕಲ್ಲುರ್ಟಿ ದೈವದ ಸೇವೆ ನಿಲ್ಲಬಾರದೆಂದು ಗುಡ್ಡ ಮೂಲ್ಯರವರ ನೆಂಟಸ್ಥರಾದ ಗುಜರನ್ ಗೋತ್ರದವರು ದೈವದ ಅಪ್ಪಣೆ ಪ್ರಕಾರ ಮಾಡಿದರು. ಈ ದೈವವು ಈ ಜಾಗದಲ್ಲಿ ಈ ಎರಡು ಗೋತ್ರದವರಿಂದ ಪೂಜೆ ಹಾಲು ತೆಗೆದುಕೊಳ್ಳುತ್ತದೆ.1880ರಲ್ಲಿ ಗುಡ್ಡ ಮೂಲ್ಯರ ವಂಶದ ಆಸ್ತಿ ಹರಾಜು ಹಾಕುವಾಗಅದನ್ನು ಹತ್ತು ಮುಡಿ ಕೃಷ್ಣರಾಯರು ಪಡೆದರು.

ಅವರು ಆ ಆಸ್ತಿಯನ್ನು 1888ರಲ್ಲಿ ನಂದಾವರ ವೆಂಕಟೇಶ ನಾಯಕರಿಗೆ ಮಾರಾಟ ಮಾಡಿದರು. 1931ರಲ್ಲಿ ಈ ಜಾಗವನ್ನು ಕಾಂತಾಡಿಗುತ್ತು ಸಂಕಮ್ಮ ಶೆಡ್ತಿಗೆ ಮಾರಾಟವಾಯಿತು.1956ರಲ್ಲಿ ಮಂಚಿ ಗ್ರಾಮದ ಅಹಮ್ಮದ್ ಬ್ಯಾರಿಯವರು ಪಣೋಲಿಬೈಲಿನ ಜಾಗವನ್ನು ಪಡಕೊಂಡರು. ಅಹಮ್ಮದ್ ಬ್ಯಾರಿಯವರು ಈ ಜಾಗವನ್ನು ಪಡೆದ ನಂತರ ಕಲ್ಲುರ್ಟಿ ದೈವಕ್ಕೆ ಅಗೇಲು ಸೇವೆ ನಡೆಯುತ್ತಿರಲು, ದೈವಕ್ಕೆ ಅಗೇಲಿಗಾಗಿಅನ್ನ, ಕೋಳಿಪದಾರ್ಥ ಬೇಯಿಸಲು ಹಿಂದಿನಿಂದಲೂ ಅಲ್ಲಿನ ಮೂಲ್ಯನ್ನನವರು ಬಿದಿರು ಕಡಿದು ಅದನ್ನು ಕಟ್ಟಿಗೆಯಾಗಿ ಅಡಿಗೆಗೆ ಉಪಯೋಗಿಸುತ್ತಿದ್ದರು. ಅಹಮ್ಮದ್ ಬ್ಯಾರಿಯವರು ಇನ್ನು ಮುಂದೆ ಬಿದಿರು ಕಡಿಯಬಾರದು. ಅದು ನನ್ನ ಜಾಗ ಎಂದು ಬಿದಿರು ಕಡಿಯುವವರಿಗೆ ತಿಳಿಸಿದರು. ಕಂಗಾಲಾದ ಗುಡ್ಡ ಮೂಲ್ಯ ವಂಶಸ್ಥರು ಕಲ್ಲುರ್ಟಿ ದೈವದಲ್ಲಿ ದೂರು ಕೊಟ್ಟರು. ಅನಂತರ ಅಹಮ್ಮದ್ ಬ್ಯಾರಿಯು ಬಿಲ್ಡಿಂಗ್ ಕಂಟ್ರಾಕ್ಟ್ ದಾರನಾಗಿದ್ದು, ಆತನು ನಿರ್ಮಿಸಿದ ಬಹುಮಹಡಿ ಕಟ್ಟಡ ನೆಲಕ್ಕೆ ಕುಸಿದು ಬಿತ್ತು. ವ್ಯವಹಾರದಲ್ಲಿ ಆತನು ತೀರಾ ಕಷ್ಟ ನಷ್ಟಕ್ಕೊಳಗಾದನು.ತಾಂಬೂಲ ಪ್ರಶ್ನೆಯಲ್ಲಿದೈವದ ತೊಂದರೆಯೆಂದು ಮನವರಿಕೆಯಾಯಿತು.

ತದನಂತರ ದೈವದ ಹೆಸರಿನಲ್ಲಿ 9 ಸೆನ್ಸ್ ಭೂಮಿಯನ್ನು ಸರ್ವೆನಂಬ್ರ 224-2ರಲ್ಲಿ ಕಲ್ಲುರ್ಟಿ ದೈವದ ಹೆಸರಿನಲ್ಲಿ ದಾನವಾಗಿ ಬರೆದುಕೊಟ್ಟನು. ದೈವದ ಅರ್ಚಕ ಮತ್ತು ಬಡಿಸುವ ಕೆಲಸವನ್ನು ಪಕೀರ ಮೂಲ್ಯನ ಹಿರಿಯವರು, ಅವರ ಮರಣಾನಂತರ ಅವರ ಕುಟುಂಬದವರಿಂದ ದೈವದ ಅರ್ಚಕ ಕೆಲಸವನ್ನು, 1965ರಿಂದ 1974ರವರೆಗೆ ಪಕೀರ ಮೂಲ್ಯ ಅವರ ಮರಣಾನಂತರ 1988ರವರೆಗೆ ಅವರ ಮೊಮ್ಮಗ ಗಂಗಯ್ಯ ಅವರ ಮರಣಾನಂತರ ಗುಡ್ಡ ಮೂಲ್ಯರ ವಂಶದವರು. 1ನೇ ಮೂಲ್ಯನ್ನನಾಗಿ ದೈವದ ಅರ್ಚಕ ಕೆಲಸವನ್ನು ಗುಡ್ಡ ಮೂಲ್ಯ ಸ್ಂತಾನದ ಸೂತಕದಂದು ಅವರ ನೆಂಟಸ್ತರಾದ ಗುಜರನ್ ಗೋತ್ರದವರು ಅರ್ಚಕ ಕೆಲಸ ಮಾಡಬೇಕು. ಕ್ಷೇತ್ರದಲ್ಲಿ ದೈವದ ಮಧು (ಅರಿಕೆ) ಹೇಳಲು ಸಜೀಪಮೂಡದ ಬರ್ಕೆ ಶೆಟ್ಟಿ ವಂಶಜರು ಹೇಳುವ ಸಂಪ್ರದಾಯ ಹಿಂದಿನಿಂದಲೂ ನಡೆಯುತ್ತಿತ್ತು. ಪಣೋಲಿಬೈಲ್ ಕಲ್ಲುರ್ಟಿ ಕ್ಷೇತ್ರ ತುಳುನಾಡಿನ ಅತ್ಯಂತ ಶ್ರೀಮಂತ ಕ್ಷೇತ್ರ.

Tulunada Siri singara

:ಪುರುಷೋತ್ತಮ ಸುವರ್ಣ

By suddi9

Leave a Reply

Your email address will not be published. Required fields are marked *