ಬಂಟ್ವಾಳ:ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಹೊಕ್ಕಾಡಿಗೋಳಿಯಲ್ಲಿ ಕಳೆದ ಶನಿವಾರ ನಡೆದ ‘ವೀರ -ವಿಕ್ರಮ’ ಜೋಡುಕರೆ ಬಯಲು ಕಂಬಳ ಗದ್ದೆ ಬಳಿ ರಾಶಿ ಬಿದ್ದ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ಸಮಿತಿ ಸದಸ್ಯರು ಬುಧವಾರ ಸಂಜೆ ಒಟ್ಟು ಸೇರಿಕೊಂಡು ಸ್ವತಃ ಕಸ ಹೆಕ್ಕಿ ಶುಚಿಗೊಳಿಸುವ ಮೂಲಕ ಗಮನ ಸೆಳೆದರು.
ಇಲ್ಲಿನ ಪ್ರಸಿದ್ಧ ಪೂಂಜ ಶ್ರೀ ಪಂಚದುಗರ್ಾಪರಮೇಶ್ವರಿ ದೇವಸ್ಥಾನ ಮತ್ತು ಹೊಕ್ಕಾಡಿಗೋಳಿ ಕಂಬಳಕ್ಕೆ ಧಾಮರ್ಿಕ ನಂಟು ಹೊಂದಿರುವ ಹಿನ್ನೆಲೆಯಲ್ಲಿ ಇದು ‘ದೇವರ ಕಂಬಳ’ ಎಂದೇ ಪ್ರಚಲಿತದಲ್ಲಿದೆ. ಇದರಿಂದಾಗಿ ಈ ಕಂಬಳಕೂಟ ಆಯೋಜಿಸಲು ಸ್ಥಳೀಯ ಐದಾರು ಮಂದಿ ಕೃಷಿಕರು ಪ್ರತೀ ವರ್ಷ ಸ್ವ ಇಚ್ಛೆಯಿಂದ ಕಂಬಳ ಸಮಿತಿಗೆ ಇಲ್ಲಿನ ವಿಶಾಲವಾದ ಗದ್ದೆ ಮತ್ತು ರಸ್ತೆ ಬಿಟ್ಟು ಕೊಡುತ್ತಿದ್ದಾರೆ.
ಈ ಬಾರಿ ಅತ್ಯಂತ ಶಿಸ್ತುಬದ್ಧ ಮತ್ತು ಅಹಿಂಸಾತ್ಮಕ ರೀತಿಯಲ್ಲಿ ಕಂಬಳ ಯಶಸ್ವಿಯಾಗಿ ನಡೆಸಲಾಗಿದ್ದು, ಇದೀಗ ಸಮಿತಿ ಪದಾಧಿಕಾರಿಗಳು ಒಟ್ಟು ಸೇರಿ ಕಂಬಳ ಗದ್ದೆ ಬಳಿ ಸುತ್ತಲೂ ರಾಶಿ ಬಿದ್ದ ಕಸ ಮತ್ತಿತರ ತ್ಯಾಜ್ಯಗಳನ್ನು ಹೆಕ್ಕುವ ಮೂಲಕ ಸ್ವಚ್ಛತಾ ಅಭಿಯಾನ ಕೈಗೊಂಡಿರುವುದಾಗಿ ಕಂಬಳ ಸಮಿತಿ ಅಧ್ಯಕ್ಷ ನೋಣಾಲುಗುತ್ತು ರಶ್ಮಿತ್ ಶೆಟ್ಟಿ ಕೈತ್ರೋಡಿ ಇವರು ತಿಳಿಸಿದ್ದಾರೆ. ಸಮಿತಿ ಗೌರವಾಧ್ಯಕ್ಷ ಸಂಜೀವ ಶೆಟ್ಟಿ ಗುಂಡ್ಯಾರು, ಆರಂಬೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಭಾಕರ ಹುಲಿಮೇರು ಮತ್ತಿತರರು ಇದ್ದರು.

