ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡಿನಿಂದ ಕೇರಳಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ಮೌಲ್ಯದ ಪಡಿತರ ಅಕ್ಕಿಯನ್ನು ಬಂಟ್ವಾಳ ಡಿವೈಎಸ್ಪಿ ಡಾ.ಅರುಣ್ ಕುಮಾರ್ ನೇತೃತ್ವದ ನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಶುಕ್ರವಾರ ವಶಪಡಿಸಿಕೊಂಡಿದ್ದಾರೆ.

ಇಲ್ಲಿನ ಶಾಂತಿಅಂಗಡಿ ಎಲ್‍ಐಸಿ ಕಚೇರಿ ಎದುರು ಅಕ್ರಮ ಪಡಿತರ ಅಕ್ಕಿಯನ್ನು ಒಂದು ಲಾರಿಯಿಂದ ಇತರ ಎರಡು 2 ಲಾರಿ ಮತ್ತು ರಿಕ್ಷಾ ಟೆಂಪೋಗೆ ತುಂಬಿಸುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.ಈ ವಾಹನಗಳಲ್ಲಿ 50 ಕಿಲೋ ತೂಕದ ಒಟ್ಟು 200 ಗೋಣಿ ಚೀಲದಲ್ಲಿ ಸುಮಾರು ರೂ 10 ಸಾವಿರ ಕಿಲೋ ಅಕ್ಕಿ ದೊರೆತಿದೆ. ಇದರ ಒಟ್ಟು ಮೌಲ್ಯ ರೂ 2.60 ಲಕ್ಷ ಎಂದು ಅಂದಾಜಿಸಲಾಗಿದೆ.

ಇದೇ ವೇಳೆ ಲಾರಿ ಮತ್ತಿತರ ವಾಹನ ಚಾಲಕರು ಪರಾರಿಯಾಗಿದ್ದು, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣಾಧಿಕಾರಿ ಚಂದ್ರಶೇಖರ್ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *