ಬೆಂಗಳೂರು : “ನೀವು ಕನ್ನಡ ಕಲಿಯುವುದಿಲ್ಲವೇ ?” ಎಂದು ಟ್ವಿಟ್ಟರಿನಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾಗೆ ಸೀಎಂ ಸಿದ್ದರಾಮಯ್ಯ ಟಾಂಟ್ ಕೊಟ್ಟಿದ್ದಾರೆ.ತಮಿಳುನಾಡು ಮತ್ತು ಬಂಗಾಲದಲ್ಲಿ ಪಕ್ಷದ ಸಾಮಥ್ರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಶಾ, ತಮಿಳು ಮತ್ತು ಬಂಗಾಲಿ ಕಲಿಯಲಿದ್ದಾರೆಂದು ವರದಿಗಳು ಬಂದಿರುವ ಬೆನ್ನಲ್ಲೇ ಸಿದ್ದರಾಮಯ್ಯ ಈ ಸವಾಲೆಸೆದಿದ್ದಾರೆ.ಇದೇ ವೇಳೆ ಅವರು ಸಾಮಾನ್ಯ ಮಾತುಕತೆಗಾಗುವಷ್ಟು ಅಸ್ಸಾಮಿ ಮತ್ತು ಮಣಿಪುರಿ ಭಾಷೆಯನ್ನೂ ಕಲಿಯಲು ಉತ್ಸುಕರಾಗಿದ್ದಾರೆ ಎಂದು ವರಿದಿಗಳು ಹೇಳಿವೆ.
