ಪೊಳಲಿ: ಬಿಲ್ಲವ ಸಮಾಜ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಸಮರ್ಪಿಸಲಿರುವ ಧ್ವಜಸ್ತಂಭ(ಕೊಡಿಮರ) ನಿರ್ಮಿಸಲು ಬಳಸಲಾಗುವ ಮರಕ್ಕೆ ನ. 19ರಂದು ಬೆಳಿಗ್ಗೆ 10 ಗಂಟೆಗೆ ಪೂಜಾ ವಿ-ವಿಧಾನಗಳು ಪೂರ್ಣಗೊಂಡ ಬಳಿಕ ಬಿ ಸಿ ರೋಡಿನಬ್ರಹ್ಮ ಶ್ರೀನಾರಾಯಣಗುರುವೃತ್ತದಿಂದ ಪೊಳಲಿಯತ್ತ ಭವ್ಯ ಮೆರವಣಿಗೆ ಹೊರಟಿತು.ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ಉಸ್ತುವಾರಿ ಸಚಿವ ರಮಾನಾಥ ರೈ, ಬಿಲ್ಲವ ಮುಖಂಡ ಕುದ್ರೋಳಿ ಕ್ಷೇತ್ರದ ರುವಾರಿಜನಾರ್ದನ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲು, ಹಾಗೂ ಪೊಳಲಿ ದೇವಸ್ಥಾನದ ಆಡಳಿತ ಮಂಡಳಿ ಪದಾಕಾರಿಗಳು, ನೂತನ ಧ್ವಜಸ್ತಂಭ ನಿರ್ಮಾಣ ಸಮಿತಿ ಅಧ್ಯಕ್ಷ ಹಾಗೂ ಪದಾಕಾರಿಗಳು, ಬಿಲ್ಲವ ಸಮಾಜದ ಮುಖಂಡರು, ರಾಜಕೀಯ ಮುಖಂಡರು, ದೇವಸ್ಥಾನದ ಅರ್ಚಕ ವರ್ಗ, ವಿವಿಧ ಸಂಘ-ಸಂಸ್ಥೆಗಳು, ಧಾರ್ಮಿಕ-ಸಾಮಾಜಿಕ ಸಂಸ್ಥೆಗಳ ಪ್ರಮುಖರು, ವಿವಿಧ ಧಾರ್ಮಿಕ ಮಂದಿರಗಳ ಸ್ವಾಮಿ ವಿವೇಕ ಚೈತನ್ಯಾನಂದ, ಗುರುಪುರ ಶ್ರೀ ರಾಜಶೇಖರಾನಂದ ಸ್ವಾಮೀಜಿ , ಮಾಣಿಲ ಮೋಹನ್ ದಾಸ್ ಸ್ವಾಮೀಜಿ ಉಪಸ್ಥಿತರಿದ್ದರು.
ಬಿ ಸಿ ರೋಡಿನಿಂದ ಅಮ್ಟಾಡಿ, ಕಲ್ಪನೆಯಾಗಿ ಸಾಗಿ ಬಂದ ಮೆರವಣಿಗೆಯಲ್ಲಿ 25,000ಕ್ಕೂ ಅಕ ಬಿಲ್ಲವ ಹಾಗೂ ಇತರ ಭಗವದ್ಭಕ್ತರು ಪಾಲ್ಗೊಂಡಿದ್ದರು. ಮೆರವಣಿಗೆಯುದ್ದಕ್ಕೂ ರಸ್ತೆ ಇಕ್ಕೆಲದಲ್ಲಿ ಭಕ್ತ ಜನರು ಶ್ರೀ ದೇವಿಗೆ ಮುಡಿಪಾಗಿಟ್ಟ ಕೊಡಿಮರಕ್ಕೆ ಭಕ್ತಿಪೂರ್ವಕ ನಮನ ಸಲ್ಲಿಸಿದ ದೃಶ್ಯಗಳು ಸಾಮಾನ್ಯವಾಗಿತ್ತು. ಬೆಳಿಗ್ಗಿನ ಹೊತ್ತು ಮೋಡ ಮುಸುಕಿದ ವಾತಾವರಣದ ಮಧ್ಯೆ ಆಗೊಮ್ಮೆ-ಈಗೊಮ್ಮೆ ಅನುಭವಕ್ಕೆ ಬಂದ ಬಿಸಿಲ ಝಳ ಲೆಕ್ಕಿಸದೆ ಮೆರವಣಿಯಲ್ಲಿ ಮುಂದುವರಿದ ಮಹಿಳೆಯರು, ಮಕ್ಕಳು, ವಯೋವೃದ್ಧರ ದಣಿವಾರಿಸಲು ಅಲ್ಲಲ್ಲಿ ಸಾರ್ವಜನಿಕರು, ಸಂಘ-ಸಂಸ್ಥೆಯವರು ಪಾನಕ, ಮೊಸರು, ನೀರಿನ ಸೇವೆ ಹಾಗೂ ಕಲ್ಪನೆಯಲ್ಲಿ ಚಾ, ತಿಂಡಿ ವ್ಯವಸ್ಥೆ ಮಾಡಿದ್ದರು.
ಮೆರವಣಿಗೆಯಲ್ಲಿ ಭಗವಧ್ವಜದಿಂದ ಸಿಂಗರಿಸಲ್ಪಟ್ಟ ನೂರಾರು ವಾಹನಗಳು ಪಾಲ್ಗೊಂಡಿದ್ದವು. ಬ್ಯಾಂಡ್, ಚೆಂಡೆ, ವಾದ್ಯ, ಕೊಂಬುಗಳ ನಿನಾದ ಮೆರವಣಿಗೆಯಲ್ಲಿದ್ದವರ ಉತ್ಸಾಹ ಹೆಚ್ಚಿಸಿತು. ವಿವಿಧ ಗೊಂಬೆ ವೇಷಗಳು, ಕೀಲು ಕುದುರೆ ಮೊದಲಾದ ತಂಡಗಳ ಕುಣಿತವು ಮೆರವಣಿಗೆಗೆ ಇನ್ನಷ್ಟು ಮೆರಗು ತಂದರೆ, ಭಜನಾ ಮಂಡಳಿಗಳು ಭಕ್ತ ಸಮೂಹವನ್ನು ಮಂತ್ರ ಮುಗ್ಧಗೊಳಿಸಿದವು. ಅಲ್ಲಲ್ಲಿ ಸುಡುಮದ್ದು ಸಿಡಿಸಿ ಮೆರವಣಿಗೆಯ ಮಹತ್ವ ಹೆಚ್ಚಿಸಿದವು. ಭಕ್ತ ಸಾಗರವನ್ನು ದಾರಿಮಧ್ಯೆ ಅಲ್ಲಲ್ಲಿ ಜಾತಿ-ಮತಬೇಧವಿಲ್ಲದೆ ಸ್ವಾಗತಿಸಿದ ದೃಶ್ಯಗಳು ಕಂಡು ಬಂತು. ಶಾಂತಿಯುತ ಮೆರವಣಿಗೆ ನಡೆಸುವಲ್ಲಿ ಬಿ ಸಿರೋಡ್ ಪೊಲೀಸರು ಸಕಲ ಬಂದೋಬಸ್ತು ಏರ್ಪಡಿಸಿದ್ದರು. ಆಂಬ್ಯುಲೆನ್ಸ್ ವ್ಯವಸ್ಥೆಗೊಳಿಸಲಾಗಿತ್ತು.
ಇತ್ತ ಪೊಳಲಿ ದೇವಸ್ಥಾನದಲ್ಲಿ ಮಧ್ಯಾಹ್ನದ ಹೊತ್ತಿಗೆ ಭಕ್ತರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂತು.
ಮೆರವಣಿಗೆ ಹಿಂದುಗಡೆಯಲ್ಲಿ ಎಸ್ ಆರ್‍ಹಿಂದೂ ಫ್ರೆಂಡ್ಸ್ಸ್ವಯಂ-ಸೇವಕರು ಸ್ವಚ್ಚತಾ ಕಾರ್ಯ ನಡೆಸುತ್ತ ಬಂದರು. ಅಲ್ಲಲ್ಲಿ ಟ್ರಾಫಿಕ್ ಜ್ಯಾಮಾದರೂ, ಮೆರವಣಿಗೆಯಲ್ಲಿದ್ದ ನೂರಾರು ಸ್ವಯಂಸೇವಕರು ತಕ್ಷಣ ಟ್ರಾಫಿಕ್ ಸುಗಮಕ್ಕೆ ಸಹಕರಿಸಿದರು. ಕಿಮೀ ಉದ್ದಕ್ಕೂ ಮುಂದುವರಿದಿದ್ದ ಮೆರವಣಿಗೆಯಲ್ಲಿ ಭಕ್ತ ಸಮೂಹದ ಉದ್ಘೋಷಗಳು ಮುಗಿಲು ಮುಟ್ಟುವಂತಿತ್ತು. ಅರ್ಚಕ ವರ್ಗದ ಮಂತ್ರೋಚ್ಚಾರಣೆಯಲ್ಲಿ ಮಂತ್ರಮುಗ್ಧವಾಗಿತ್ತು. ಮಧ್ಯಾಹ್ನ 3.30 ಗಂಟೆಗೆ ಮೆರವಣಿಗೆ ದೇವಸ್ಥಾನ ತಲುಪಿತು. ಮಧ್ಯಾಹ್ನ 2:30ಕ್ಕೆ ದೇವಸ್ಥಾನದ ವತಿಯಿಂದ ಪೂರ್ಣಕುಂಭ ಸ್ವಾಗತ ನೀಡಲಾಗಿ, ಶಾಸ್ತ್ರೋಕ್ತ ಪೂಜಾ ವಿವಿಧಾನದೊಂದಿಗೆ ಟ್ರಕ್ಕಿಂದ ಮರ ಇಳಿಸಿ, ದೇವಸ್ಥಾನಕ್ಕೆ ಸಾಗಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಸುಮಾರು 30-35 ಸಾವಿರ ಮಂದಿಗೆ ಮಹಾ ಅನ್ನಸಂತರ್ಪಣೆ ನಡೆಯಿತು.
ಬೆಳಿಗ್ಗಿನಿಂದಲೇ ಇಂದು ಮೋಡ ಕವಿದ ವಾತಾವರಣವಿದ್ದು, ಗುಡುಗು-ಮಿಂಚಿನ ಬಳಿಕ ಮಳೆ ಸುರಿಯಿತು. ಅಚ್ಚರಿಯೆಂದರೆ, ಪೊಳಲಿಗೆ ಹತ್ತಿರದ ಬಡಕಬೈಲಿಗೆ ಮೆರವಣಿಗೆ ಬರುತ್ತಲೇ ಧೋ ಎಂದು ಮಳೆ ಆರಂಭವಾಯಿತು. ಮಳೆಯಿಂದ ಒದ್ದೆಯಾದ ಭಕ್ತ ಜನರು ಮತ್ತಷ್ಟು ಪುಳಕಿತರಾದರು. ಸುಮಾರು ಒಂದು ತಾಸು ಮಳೆಯಾಗಿದ್ದು, ಇದು ಶ್ರೀ ದೇವಿಯ ಮಹಿಮೆ ಎಂದು ಜನರು ಬಗೆಬಗೆಯಾಗಿ ಮಾತನಾಡಿಕೊಂಡರು. ಮೊನ್ನೆ ಸುಳ್ಯದ ಸಂಪಾಜೆ ರಕ್ಷಿತಾರಣ್ಯ ಪ್ರದೇಶದಲ್ಲಿ ಈ ಮರ ಕತ್ತರಿಸುವಾಗಲೂ ತುಂತುರು ಮಳೆಯಾಗಿತ್ತು.
ತಂತ್ರಿಗಳಾದ ವೆಂಕಟೇಶ್ ಮತ್ತು ಸುಬ್ರಹ್ಮಣ್ಯ ತಂತ್ರಿ, ದೇವಳದ ಅರ್ಚಕರಾದ ನಾರಾಯಣ ಭಟ್ ,ರಾಮ್ ಭಟ್, ಪರಮೇಶ್ವರ ಭಟ್, ಅನಂತಪದ್ಮನಾಭ ಭಟ್,ಪದ್ಮನಾಭ ಭಟ್, ವಿಷ್ಣುಮೂರ್ತಿಭಟ್, ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಮೊಕ್ತೇಸರ ಹಾಗೂ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ತಾರನಾಥ ಆಳ್ವ ಉಳಿಪಾಡಿಗುತ್ತು, ಮೊಕ್ತೇಸರ ಚೇರ ಸೂರ್ಯನಾರಾಯಣ ರಾವ್, ರಾಜೇಶ್ ನಾಯ್ಕ್, ಮಾಜಿ ಸಚಿವ ನಾಗರಾಜ ಶೆಟ್ಟಿ, ಕೃಷ್ಣ ಕುಮಾರ್ ಪೂಂಜ, ಜೀವರಾಜ ಶೆಟ್ಟಿ ಅಮ್ಮುಂಜೆಗುತ್ತು, ದೇವುದಾಸ್ ಶೆಟ್ಟಿ, ಶೆಡ್ಡೆ ಮಂಜುನಾಥ ದೇವಾಲಯದ ವಾಸ್ತು ಶಿಲ್ಪಿ ಮಹೇಶ್ ಮುನಿಯಂಗಳ,ಕೃಷ್ಣರಾಜ ಮಾರ್ಲ, ಗಿರಿಧರ ಶೆಟ್ಟಿ, ಹಾಗೂ ಬಿಲ್ಲವ ಸಮಾಜದ ಪರವಾಗಿ ನೂತನ ಧ್ವಜಸ್ತಂಭ ನಿರ್ಮಾಣ ಸಮಿತಿ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ಗೌರವಾಧ್ಯಕ್ಷ ಮಜಿಲಗುತ್ತುರಾಮದಾಸ್ ಕೋಟ್ಯಾನ್ , ಕಾರ್ಯದರ್ಶಿ ಪುರುಷ ಸಾಲ್ಯಾನ್, ಚಂದಪ್ಪ ಅಂಚನ್ ಮಜಿಲಗುತ್ತು, ಯಶವಂತ ಕೋಟ್ಯಾನ್, ಉಮೇಶ್ ಪೂಜಾರಿ ಬಾರಿಂಜೆ, ಭುವನೇಶ್ ಪಚ್ಚಿನಡ್ಕ, ಭಾರತ್ ಬ್ಯಾಂಕ್ ನಿರ್ದೇಶಕಗಂಗಾಧರ ಪೂಜಾರಿ ಕೊಪ್ಪಲ, ಎಂ.ನಾರಾಯಣ ಪೂಜಾರಿ, ಗೋಪಾಲಕೃಷ್ಣ ಕೈಕಂಬ, ಬಳ್ಳಿ ಶೇಖರ ಪೂಜಾರಿ, ದೀಪಕ್ ಕೋಟ್ಯಾನ್, ಗಣೇಶ್ ಪೂಜಾರಿ ಕಾರ್ಯನಿರ್ವಹಣಾಕಾರಿ,ಪ್ರವೀಣ್, ತೋಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ಕಾರ್ಯ ನಿರ್ವಹಣಾಕಾರಿ ಹರಿಶ್ಚಂದ್ರ ಮೊದಲಾದ ಗಣ್ಯರಿದ್ದರು. ಗಣೇಶ್ ಶಿಪ್ಪಿಂಗ್ ಕಂಪೆನಿಯ, ದಿವಾಕರ್ ಚಲಾಯಿಸುತ್ತಿದ್ದ ಟ್ರಕ್ಕಿನಲ್ಲಿ ಮರವನ್ನಿಡಲಾಗಿತ್ತು. ತಿರುವುಗಳಲ್ಲಿ ಟ್ರಕ್ ಸುಗಮ ಸಂಚಾರಕ್ಕೆ ಕ್ರೇನ್ ಮತ್ತು ಜೆಸಿಬಿ ಬಳಸಲಾಯಿತು.
* ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

