ದೇಶದ ಐಕ್ಯತೆ, ಸಮಗ್ರತೆ ಮತ್ತು ಸುರಕ್ಷತೆಯನ್ನ ಸಂರಕ್ಷಿಸಲು ಶ್ರಮಿಸಿದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನಾಚರಣೆ ಪ್ರಯುಕ್ತ ವಿಟ್ಲದ ಮಾದರಿ ಶಾಲೆಯಲ್ಲಿ ಏಕತಾ ದಿನಾಚರಣೆ ಆಚರಿಸಲಾಯಿತು. `ಭಾರತದ ಪ್ರಜೆಯಾಗಿ ನಾನು ಎಂದಿಗೂ ದೇಶದ ಏಕತೆ, ಸಮಗ್ರತೆ, ಹಾಗೂ ರಕ್ಷಣೆಗಾಗಿ ಸದಾ ಸಿದ್ಧನಿರುತ್ತೇನೆ.
ದೇಶ ಭಕ್ತಿಯನ್ನು ಎಲ್ಲರಲ್ಲೂ ಮೂಡಿಸಲು ನನ್ನಿಂದಾದ ಸಹಾಯ ಮಾಡುತ್ತೇನೆ’ ಎಂಬ ಪ್ರತಿಜ್ಞಾ ವಿಧಿಯನ್ನು ಶಾಲಾ ಮುಖ್ಯ ಶಿಕ್ಷಕ ವಿಶ್ವನಾಥ ಗೌಡ ಸಹಶಿಕ್ಷಕರಿಗೆ ಮತ್ತು ಮಕ್ಕಳಿಗೆ ಬೋಧಿಸಿದರು.
