ಬಂಟ್ವಾಳ : ನಲಿಕೆಯವರ ಸಮಾಜ ಸೇವಾ ಸಂಘ ಇದರ 13 ನೇ ವರ್ಷದ ವಾರ್ಷಿಕೋತ್ಸವವು ವಿಟ್ಲ ಮಾದರಿ ಶಾಲಾ ಸಭಾ ಭವನದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ನಡೆದ ಶ್ರೀ ಸತ್ಯನಾರಾಯಣ ಪೂಜೆಯ ಬಳಿಕ ಸಂಘದ ಅಧ್ಯಕ್ಷ ರಮೇಶ್ ಕಡಂಬು ರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಕನ್ಯಾನ ಬಾಲೆಕೋಡಿ ಶ್ರೀ ಕಾಶಿ ಕಾಳಬೈರವೇಶ್ವರ ಶಿಲಾಂಜನ ಕ್ಷೇತ್ರದ ಶ್ರೀ ಶ್ರೀ ಶಶಿಕಾಂತಮಣಿ ಸ್ವಾಮೀಜಿ ಆಶೀರ್ವಚನ ನೀಡಿದರು.nalike

ಮುಖ್ಯ ಅತಿಥಿಗಳಾಗಿ ಮಂಗಳೂರು ರೈ ಎಸ್ಠಟಿನ ಅಶೋಕ್ ಕುಮಾರ್ ರೈ ಕೆ ಎಸ್, ಜಿಲ್ಲಾ ಪಾಣಾರ ಯಾನೆ ನಲಿಕೆಯವರ ಸಂಘದ ಕೋಶಾಧಿಕಾರಿ ಎನ್ ಕೃಷ್ಣ ಸೋಮೇಶ್ವರ, ಜಿಲ್ಲಾ ಯುವ ವೇದಿಕೆ ಅಧ್ಯಕ್ಷ ಸುಬ್ರಾಯ ಕಲ್ಮಂಜ, ಮತ್ತು ಬಂಟ್ವಾಳ ತಾಲೂಕು ಯುವ ವೇದಿಕೆ ಅಧ್ಯಕ್ಷ ರಮೇಶ್ ಕುದ್ರೆಬೆಟ್ಟು ಇವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ನಾಟಿ ವೈದ್ಯ ಸೋಮನಾಥ ಪಂಡಿತ ಅನಂತಾಡಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವನರ್ತಕ ಲೋಕಯ್ಯ ಸೇರಾ, ದೈವ ನರ್ತಕ ವೆಂಕಪ್ಪ ಪಾಣಾಜೆಕೋಡಿ ಮತ್ತು ಯಕ್ಷಗಾನ ಭಾಗವತ ಶಿವಪ್ಪ ಕೊಕ್ಕಪುಣಿ ಇವರನ್ನು ಸನ್ಮಾನಿಸಲಾಯಿತು. ಜಿ. ಎನ್ ರಾಮ ಸ್ವಾಗತಿಸಿದರು. ಸೇರಾ ಲೋಕಯ್ಯ ಪ್ರಸ್ತಾವಿಸಿದರು. ಮಹಿಳಾ ವೇದಿಕೆ ಅಧ್ಯಕ್ಷೆ ಚಿನ್ನಮ್ಮ ಟೀಚರ್ ವರದಿ ವಾಚಿಸಿದರು. ರಾಮಣ್ಣ ಪಿಲಿಂಜ ವಂದಿಸಿದರು. ನಾಗಪ್ಪ ಪಣೋಲಿ ಬೈಲು ನಿರೂಪಿಸಿದರು. ಸುಜನ್ ಅಳಿಕೆ ಸಹಕರಿಸಿದರು.

By suddi9

Leave a Reply

Your email address will not be published. Required fields are marked *