ಬಂಟ್ವಾಳ: ಯಡಿಯೂರಪ್ಪ ನೇತೃತ್ವದಲ್ಲಿ ಬಿಸಿರೊಡಿನ ಲ್ಲಿ ನಡೆಯುವ ಬಿಜೆಪಿ ನವಕರ್ನಾಟಕ ಪರಿವರ್ತನಾ ಯಾತ್ರೆ ಯ ಪೂರ್ವಭಾವಿ ಸಭೆ ಬಿಸಿರೊಡಿನ ಬಿಜೆಪಿ ಕಚೇರಿಯ ಲ್ಲಿ ನಡೆಯಿತು. ಸಭೆಯಲ್ಲಿ ಯಾತ್ರೆ ಯ ಉಶಸ್ವಿಗೆ ಬೇಕಾದ ರೂಪುರೇಷೆ ಗಳನ್ನು ಸಿದ್ಧಪಡಿಸಲಾಯಿತು.ಸುಮಾರು ೩೫ ಸಾವಿರಕ್ಕೂ ಮಿಕ್ಕಿ ಕಾರ್ಯಕರ್ತರು ಯಾತ್ರೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಕಾರ್ಯಕ್ರಮದ ವಿವಿದ ಜವಬ್ದಾರಿ ಗಳನ್ನು ನಿರ್ವಹಿಸಲು ವಿವಿಧ ಸಮಿತಿ ಗಳನ್ನು ರಚಿಸಲಾಯಿತು.
ನ.೧೧ ರಂದು ಬೆಳಿಗ್ಗೆ ೧೦ ಘಂಟೆ ಗೆ ಯಡಿಯೂರಪ್ಪ ನೇತ್ರತ್ವದ ಪರಿವರ್ತನಾ ಯಾತ್ರೆಯನ್ನು ಪುಂಜಾಲಕಟ್ಟೆಯಲ್ಲಿ ಸ್ವಾಗತಿಸಿ ಬಳಿಕ ಕಾವಲಕಟ್ಟೆ ವಗ್ಗ ಮಾರ್ಗವಾಗಿ ಬಿಸಿರೊಡಿನ ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರದ ಬಳಿಯಲ್ಲಿ ಸಭೆ ನಡೆಯಲಿದೆ ಎಂದು ಸಭೆಯಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಪ್ರಮುಖ ರಾದ ರಾಜೇಶ್ ನಾಯಕ್ ಉಳಿಪ್ಪಾಡಿ ಗುತ್ತು. ರುಕ್ಮಯ ಪೂಜಾರಿ ದೇವದಾಸ ಶೆಟ್ಟಿ. ಬ್ರಿಜೇಶ್ ಚೌಟ. ಸುಲೋಚನ ಜಿ.ಕೆ.ಭಟ್. ರಾಮ್ ದಾಸ್ ಬಂಟ್ವಾಳ. ಮೋನಪ್ಪ ದೇವಸ್ಯ ಮತ್ತಿತರು ಉಪಸ್ಥಿತರಿದ್ದರು

