ಗುರುಪುರ : ಕುಳಾಯಿ ಹೊನ್ನಕಟ್ಟೆಯ ಕು. ಅನನ್ಯಾ ಐತಾಳ್ 2017-18ರ ಸಾಲಿನ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ಯೋಜನೆಯಡಿ ಜಿಲ್ಲಾ ಮಟ್ಟದ ಅಸಾಧಾರಣ ಪ್ರತಿಭೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾಳೆ.
ಪ್ರಶಸ್ತಿ ಪ್ರದಾನ ಸಮಾರಂಭ ನವಂಬರ್ ಒಂದರಂದು ಬೆಳಿಗ್ಗೆ 8.30ಕ್ಕೆ ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಕಟಣೆ ತಿಳಿಸಿದೆ.
ಜಯದೇವ ಐತಾಳ್ ಮತ್ತು ಸಂಧ್ಯಾ ಐತಾಳ್ ಪುತ್ರಿಯಾದ ಅನನ್ಯಾ, ಸುರತ್ಕಲ್‍ನ ಹೋಲಿ ಫ್ಯಾಮಿಲಿ ಆಂಗ್ಲ ಮಾಧ್ಯಮ ಪ್ರಢ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ. ಈಕೆ ಬಹುಮುಖಿ ಪ್ರತಿಭಾವಂತ ಕಲಾವಿದೆಯಾಗಿದ್ದು, ಭರತನಾಟ್ಯ, ಯಕ್ಷಗಾನ(ಇಂಗ್ಲಿಷ್), ಛದ್ಮವೇಷ, ಭಾಷಣದಲ್ಲಿ ಈಗಾಗಲೇ ರಾಜ್ಯ, ಜಿಲ್ಲಾ, ತಾಲೂಕು ಮಟ್ಟದ ಹಲವಾರು ಪ್ರಶಸ್ತಿ ಗಳಿಸಿದ್ದಾಳೆ.
