ಪೊಳಲಿ : ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನಕ್ಕೆ 1958ರಲ್ಲಿ ಬಿಲ್ಲವ ಸಮಾಜ ಬಾಂಧವರು ಧ್ವಜಸ್ತಂಭ ನಿರ್ಮಿಸಿ ಅರ್ಪಿಸಿರುವುದು ಇತಿಹಾಸ. ಪ್ರಸ್ತುತ ದೇವಸ್ಥಾನ ಜೀರ್ಣೋದ್ಧಾರ ಕೆಲಸದೊಂದಿಗೆ ಶಿಥಿಲಗೊಂಡಿದ್ದ ಹಳೆ ಧ್ವಜಸ್ತಂಭ ತೆರವುಗೊಳಿಸಲಾಗಿದೆ. ಇಲ್ಲಿ ಬಿಲ್ಲವ ಸಮಾಜದವರೇ ಈ ಬಾರಿಯೂ ನೂತನ ಧ್ವಜಸ್ತಂಭ ಅರ್ಪಿಸುವ ಪುಣ್ಯ ಕಾರ್ಯಕ್ಕೆ ಕೈಗೊಂಡಿದ್ದು, ಈ ಉದ್ದೇಶಕ್ಕಾಗಿ ಮುದ್ರಿಸಲಾಗಿರುವ ವಿಜ್ಞಾಪನಾ ಪತ್ರ ಇಂದು(ಅ. 28) ದೇವಳದ ಆವರಣದಲ್ಲಿ ಬಿಡುಗಡೆಗೊಳಿಸಲಾಯಿತು.27-7

ದೇವಸ್ಥಾನಕ್ಕೆ ಧ್ವಜಸ್ತಂಭಕ್ಕೆ ಯೋಗ್ಯವೆನಿಸಿರುವ ಮರ ಈಗಾಗಲೇ ಗುರುತಿಸಲಾಗಿದೆ. ಇದನ್ನು ಕಡಿದು, ಬಿ ಸಿ ರೋಡಿನ ನಾರಾಯಣ ಗುರು ಸರ್ಕಲಿನಿಂದ ಪೊಳಲಿವರೆಗೆ ಶೋಭಾ ಯಾತ್ರೆಯಲ್ಲಿ ಸಾಗಿಸಲು ಬಿಲ್ಲವ ಸಮಾಜ ತೀರ್ಮಾನಿಸಿದೆ. ಇದಕ್ಕೆ ತಗುಲುವ ವೆಚ್ಚ ಅಂದಾಜು 50 ಲಕ್ಷ ರೂ. ಇದನ್ನು ಬಿಲ್ಲವ ಸಮಾಜ ಬಾಂಧವರ ಉದಾರ ದೇಣಿಗೆ ಮೂಲಕ ಸಂಗ್ರಹಿಸಲು `ನೂತನ ಧ್ವಜಸ್ತಂಬ ನಿರ್ಮಾಣ ಸಮಿತಿ(ಪೊಳಲಿ) ತೀರ್ಮಾನಿಸಿ ಈ ವಿಜ್ಞಾಪನಾ ಪತ್ರ ಸಿದ್ಧಪಡಿಸಿದೆ.27-2

ಹಿಂದೆ, 1958ರ ಮಾರ್ಚ್ 3 ರಂದು ಧ್ವಜಸ್ತಂಬಕ್ಕೆ ಯೋಗ್ಯವೆನಿಸಿದ ಮರವನ್ನು(24 ಕೋಲು ಉದ್ದ ಮತ್ತು 16 ಅಂಗಲು ಸುತ್ತಳತೆ) ಮೂಡಬಿದ್ರೆಯ ಚೌಟರಿಂದ ಪಡೆದು, ಅಲ್ಲಿಂದ ಪೊಳಲಿವರೆಗೆ ತರಲಾಗಿತ್ತು. ಅದೇ ತಿಂಗಳು 30ರಂದು ಬಿಲ್ಲವ ಸಮಾಜದ ಗಣ್ಯ ವ್ಯಕ್ತಿ ಅರ್ಕುಳ ಬಾಬು ಪೂಜಾರಿ ಬ್ರಹ್ಮಾರ್ಪಣೆ ಬಿಡುವುದರೊಂದಿಗೆ ದೇವಸ್ಥಾನದಲ್ಲಿ ಧ್ವಜಸ್ತಂಬ ಸ್ಥಾಪಿಸಲಾಗಿತ್ತು. ಇದರ ಕೆಳಗಡೆ ಬಿಲ್ಲವ ಸಮಾಜದ ಸೇವೆ ಎಂದು ಬರೆಯಲಾಗಿತ್ತು.27-3

ಮರದ ಬಾಬ್ತು ಅರಣ್ಯ ಇಲಾಖೆಗೆ ಸಂದಾಯವಾಗಬೇಕಾದ 21,10,601 ರೂಪಾಯಿಯನ್ನು ಸೋಮವಾರ(ಅ.30) ಬಿಲ್ಲವ ಸಮಿತಿ ದೇವಳದ ಆಡಳಿತ ಮಂಡಳಿಗೆ ಹಸ್ತಾಂತರಿಸಲಿದೆ. ಈ ಸೇವಾ ಕಾರ್ಯದಲ್ಲಿ ಬಿಲ್ಲವ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸಹಕರಿಸಬೇಕಾಗಿ ಸಮಿತಿ ಪರವಾಗಿ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ ವಿನಂತಿಕೊಂಡಿದ್ದಾರೆ.27-1

ದೇವಸ್ಥಾನದ ಪ್ರಧಾನ ಅರ್ಚಕ ಮಾಧವ ಭಟ್ ಅವರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ರಾಮದಾಸ ಕೋಟ್ಯಾನ್ ಮಜಿಲಗುತ್ತು,  ಸೇಸಪ್ಪ ಕೋಟ್ಯಾನ್ ಪಚಿನಡ್ಕ, ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್, ಪುರುಷ ಸಾಲ್ಯಾನ್ ನೆತ್ರೆಕೆರೆ, ಉಮೇಶ ಪೂಜಾರಿ ಬಾರಿಂಜೆ, ಜಯಾನಂದ ಅಂಚನ್ ಪಲ್ಲಿಪಾಡಿ, ನಾರಾಯಣ ಅಮ್ಮುಂಜೆ, ಬಳ್ಳಿ ಚಂದ್ರಶೇಖರ ಕೈಕಂಬ, ಗೋಪಾಲಕೃಷ್ಣ ಕೈಕಂಬ, ಶಂಕರ ಪೂಜಾರಿ ಬಡಕಬೈಲು,  ನಾರಾಯಣ ಎಂ ಬಡಕಬೈಲ್,  ಚಿದಾನಂದ ಗುರಿಕಾರ ನಂದ್ಯ, ರಾಜು ಕೋಟ್ಯಾನ್ ಪಲ್ಲಿಪಾಡಿ, ಯಶವಂತ ಕೋಟ್ಯಾನ್ ಪೊಳಲಿ, ಭುವನೇಶ್ ಪಚ್ಚಿನಡ್ಕ, ದೋಗು ಪೂಜಾರಿ ಮಟ್ಟಿ, ಚಂದಪ್ಪ ಅಂಚನ್ ಮಜಿಲಗುತ್ತು , ಗಣೇಶ್ ಪೂಜಾರಿ, ರಾಮಪ್ಪ ಪೂಜಾರಿ ಬಡಕಬೈಲು, ನೋಣಯ , ಚರಣ್  ಬಡಕಬೈಲು, ಸದಾಶಿವ ಕರ್ಕೇರಾ ಕಾಜಿಲ, ಮೋಹನ್ ಸಾಲಿಯಾನ್, ನವೀನ್ ಪೊಳಲಿ, ಮೋಹನ್ ಬಿಲ್ವಪತ್ರೆ, ಕರುಣಾಕರ,   ಇದ್ದರು.

By suddi9

Leave a Reply

Your email address will not be published. Required fields are marked *