ಮಂಗಳೂರು. ಅ.16 ರಂದು ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆಯ ಆಡಳಿತಕ್ಕೊಳಪಟ್ಟ ಎಲ್ಲಾ ಐಟಿಐ(ಕೈಗಾರಿಕಾ ತರಬೇತಿ ಕೇಂದ್ರ )ಗಳ ಮುಖ್ಯಸ್ಥರು ಹಾಗೂ ಜಿಲ್ಲಾ ಖಾಸಗಿ ಐಟಿಐ ನೌಕರರ ಸಂಘದ ಪದಾಧಿಕರಿಗಳ ವತಿಯಿಂದ ಸಂಸದ ನಳಿನ್ ಕುಮಾರ್ ಅವರ ನೇತೃತ್ವದಲ್ಲಿ ಪ್ರಸ್ತುತ ಐಟಿಐಗಳ ಅಖಿಲಭಾರತ ವೃತ್ತಿ ಪರೀಕ್ಷೆಯ ನ್ಯೂನತೆಗಳನ್ನು ಪರಿಹರಿಸುವಂತೆ ಕೋರಿ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವರಾದ ಶ್ರೀ ಅನಂತಕುಮಾರ್ ಹೆಗಡೆ ಅವರಿಗೆ ಮನವಿ ಸಲ್ಲಿಸಲಾಯಿತು. ಮನವಿಗೆ ಪೂರಕವಾಗಿ ಸ್ಪಂದಿಸಿದ ಮಾನ್ಯ ಸಚಿವರು ಎಲ್ಲಾ ಸಮಸ್ಯೆಗಳ ಬಗ್ಗೆ ವಿಚಾರಿಸಿ ಶೀಘ್ರವೇ ಪರಿಹಾರವನ್ನು ಕಲ್ಪಿಸುವುದಾಗಿ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸಂಜೀವ ಮಠಂದೂರು, ಮಂಗಳೂರು ನಗರ ಬಿಜೆಪಿ ಅಧ್ಯಕ್ಷರಾದ ವೇದವ್ಯಾಸ ಕಾಮತ್, ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು, ಎಸ್ ಡಿ ಎಂ ಐಟಿಐ ವೇಣೂರು ಪ್ರಾಂಶುಪಾಲರಾದ ಸದಾನಂದ ಪೂಜಾರಿ, ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಸಂಸ್ಥೆಯ ಆಡಳಿತಾಧಿಕಾರಿ ಗಣೇಶ್ ಭಟ್, ಎಸ್ ಡಿ ಎಂ ಐಟಿಐ, ಸಂಸೆ ಇದರ ಮುಖ್ಯಸ್ಥರಾದ ಸತೀಶ್, ಎಸ್ ಡಿ ಎಂ ಮಹಿಳಾ ಐಟಿಐ ಯ ಮುಖ್ಯಸ್ಥರಾದ ಪ್ರಕಾಶ್ ಕಾಮತ್, ಎಸ್ ಡಿ ಎಂ ಮಂಗಳಜ್ಯೋತಿ ಯ ಮುಖ್ಯಸ್ಥರಾದ ನರೇಂದ್ರ, ಶ್ರೀ ವಿಶ್ವೇಶ್ವರ ಪ್ರಸಾದ್, ಜಿಲ್ಲಾ ಖಾಸಗಿ ಐಟಿಐ ನೌಕರರ ಸಂಘದ ಪದಾಧಿಕಾರಿಗಳಾದ ಚೇತನ್ ಹಾಗೂ ಗಂಗಾಧರ್ ಇವರುಗಳು ಉಪಸ್ಥಿತರಿದ್ದರು.
