ಬಂಟ್ವಾಳ: ಯಾವುದೇ ಒಂದು ಭಾಷೆಯು ಕೇವಲ ಸಂವಹನ ಮಾಧ್ಯವಾಗಿ ಸರ್ಕಾರದ ಅಕಾಡೆಮಿ ಮತ್ತಿತರ ಪ್ರೋತ್ಸಾಹದ ಹೊರತಾಗಿಯೂ ಒಟ್ಟು ಸಮುದಾಯಗಳ ಸಂಘಟಿತ ಪ್ರಯತ್ನ ಮತ್ತು ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಬೆಳವಣಿಗೆ ಕಾಣಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕಚೇರಿ ಆಪ್ತ ಸಹಾಯಕ, ಸಾಹಿತಿ ಚಂದ್ರಶೇಖರ ಪಾತೂರು ಹೇಳಿದ್ದಾರೆ.
ತಾಲ್ಲೂಕಿನ ಬಿ.ಸಿ.ರೋಡ್‍ನಲ್ಲಿ ಬ್ಯಾರಿ ಸಾಹಿತ್ಯ ಪರಿಷತ್ ಮತ್ತು ಅವಿಭಜಿತ ಜಿಲ್ಲಾ ದಫ್ ಎಸೋಸಿಯೇಶನ್ ವತಿಯಿಂದ ಮಂಗಳವಾರ ಸಂಜೆ ಏರ್ಪಡಿಸಿದ್ದ ಬ್ಯಾರಿ ಭಾಷಾ ದಿನಾಚರಣೆ ಮತ್ತು ಬ್ಯಾರಿ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

4btl-Beary (1)
ಬ್ಯಾರಿ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಂ. ಅಬ್ಬಾಸ್ ಆಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ಅಧ್ಯಕ್ಷೆ ಎಂ. ಪ್ರೇಮಿ ಡಿ’ಸೋಜ, ಮಂಗಳೂರು ಹಿದಾಯ ಫೌಂಡೇಶನ್ ಸಂಚಾಲಕ ಜಿ. ಮುಹಮ್ಮದ್ ಹನೀಫ್, ಬಂಟ್ವಾಳ ಕಸಾಪ ಮಾಜಿ ಅಧ್ಯಕ್ಷ ಜಯಾನಂದ ಪೆರಾಜೆ, ಉಪನ್ಯಾಸಕರಾದ ಅಬ್ದುಲ್ ರಝಾಕ್ ಅನಂತಾಡಿ, ಬಿ. ರಾಮಚಂದ್ರ ರಾವ್, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಎ. ಗೋಪಾಲ ಅಂಚನ್, ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಝಕರಿಯ್ಯಾ ಕಲ್ಲಡ್ಕ ಶುಭ ಹಾರೈಸಿದರು.
ಬಂಟ್ವಾಳ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಾಧವ ಎಸ್. ಮಾವೆ, ಮೆಸ್ಕಾಂ ಸಲಹಾ ಸಮಿತಿ ಸದಸ್ಯ ವೆಂಕಪ್ಪ ಪೂಜಾರಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಆಲ್ಬರ್ಟ್ ಮಿನೇಜಸ್, ಯುವ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಮಹೇಶ್ ನಾಯಕ್ ಖಂಡಿಗ, ಪರಿಷತ್ ಕೋಶಾಧಿಕಾರಿ ಎಸ್. ಮುಹಮ್ಮದ್ ಅಲಿ ಶಾಂತಿಂಗಡಿ, ಅಕಾಡೆಮಿ ಸದಸ್ಯ ಅಬ್ದುಲ್ ಹಮೀದ್ ಗೋಳ್ತಮಜಲು, ಪ್ರಮುಖರಾದ ಸುಲೈಮಾನ್ ಸೂರಿಕುಮೇರು, ಯೂಸುಫ್ ಕರಂದಾಡಿ, ಎ.ಕೆ.ಹಾರಿಸ್ ಮಂಚಿ, ಕೆ.ಎಸ್. ಮುಹಮ್ಮದ್ ಕಡೇಶ್ವಾಲ್ಯ, ಯೂಸುಫ್ ಬಾಂಬಿಲ, ಎ.ಎಸ್.ಶರೀಫ್ ಶಾಂತಿಅಂಗಡಿ ಮತ್ತಿತರರು ಇದ್ದರು.
ಅಕಾಡೆಮಿ ಸದಸ್ಯ ಅಬ್ದುಲ್ ಲತೀಫ್ ನೇರಳಕಟ್ಟೆ ಸ್ವಾಗತಿಸಿ, ದಫ್ ಎಸೋಸಿಯೇಶನ್ ಕಾರ್ಯದರ್ಶಿ ಪಿ.ಎಂ. ಅಶ್ರಫ್ ಪಾಣೆಮಂಗಳೂರು ವಂದಿಸಿದರು. ಪತ್ರಿಕಾ ಕಾರ್ಯದರ್ಶಿ ಫಾರೂಕ್ ಗೂಡಿನಬಳಿ ಕಾರ್ಯಕ್ರಮ ನಿರೂಪಿಸಿದರು.
ಇದೇ ವೇಳೆ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಪ್ರಕಟಗೊಂಡ ‘ಬ್ಯಾರಿ-ಕನ್ನಡ-ಇಂಗ್ಲಿಷ್ ನಿಘಂಟು’ ಪುಸ್ತಕವನ್ನು ಇಲ್ಲಿನ ಸಾರ್ವಜನಿಕ ಗ್ರಂಥಾಲಯಕ್ಕೆ ಗ್ರಂಥಪಾಲಕಿ ಲಲಿತಾ ಅವರಿಗೆ ಹಸ್ತಾಂತರಿಸಲಾಯಿತು. ಕಣ್ಣೂರು-ಕುಂಡಾಲ ಜನ್ನತುಲ್ ಉಲೂಂ ದಫ್ ತಂಡದ ವಿದ್ಯಾರ್ಥಿಗಳಿಂದ ದಫ್ ಪ್ರದರ್ಶನ ನಡೆಯಿತು.
ಬಹುಭಾಷಾ ಕವಿ ಮುಹಮ್ಮದ್ ಬಡ್ಡೂರು ಅಧ್ಯಕ್ಷತೆಯಲ್ಲಿ ನಡೆದ ಬ್ಯಾರಿ ಕವಿಗೋಷ್ಠಿಯಲ್ಲಿ ಕ್ಯಾರಿಯರ್ ಗೈಡೆನ್ಸ್ ಸಂಚಾಲಕ ಉಮರ್ ಯು.ಎಚ್. ಗೋಷ್ಠಿ ಉದ್ಘಾಟಿಸಿದರು. ಕವಿ ಅಬ್ದುಲ್ ಸತ್ತಾರ್ ಗೂಡಿನಬಳಿ, ಆಶ್ರಫ್ ಅಪೊಲೊ ಕಲ್ಲಡ್ಕ, ರಶೀದ್ ನಂದಾವರ, ಎಂ.ಪಿ. ಬಶೀರ್ ಅಹ್ಮದ್ ಬಂಟ್ವಾಳ, ಸಲೀಂ ಬೋಳಂಗಡಿ ಕವನ ವಾಚಿಸಿದರು.

By suddi9

Leave a Reply

Your email address will not be published. Required fields are marked *