ಬಂಟ್ವಾಳ: ಆರ್.ಎಸ್.ಎಸ್. ಕಾರ್ಯಕರ್ತ ಅಮಾಯಕ ಶರತ್ ಮಡಿವಾಳ ಅವರ ಹತ್ಯೆಯಲ್ಲಿರುವ ಪ್ರಮುಖ ಆರೋಪಿಗಳ ಶ್ರೀಘ್ರ ಬಂಧನಮಾಡಬೇಕು, ಮತ್ತು ಆರೋಪಿಗಳ ಪತ್ತೆಗೆ ತಡೆಯೊಡ್ಡಿರುವ ಶಕ್ತಿ ಯಾರು ಅವರನ್ನು ಪತ್ತೆ ಹಚ್ಚಬೇಕು ಮತ್ತು ಇದರ ಹಿಂದೆ ಇರುವ ಜಾಲ ಯಾವುದು ಅವರಿಗೆ ಎಲ್ಲಿ ಟ್ರೈನಿಂಗ್ ಆಗಿದೆ ಎನ್ನುವುದನ್ನು ಶೀಘ್ರವಾಗಿ ಪೋಲಿಸ್ ಇಲಾಖೆ ಬಯಲಿಗೆ ತರಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದಶರ್ಿ ಸಿಟಿ ರವಿ ಹೇಳಿದರು .ಅವರು ಶರತ್ ಮಡಿವಾಳ ಅವರ ಅಂಗಡಿಗೆ ಬೇಟಿ ನೀಡಿ ಸಹೋದರಿಯ ಜೊತೆ ಮಾತನಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಇತ್ತೀಚೆಗೆ ನಡೆದ ಹಿಂದೂ ಕಾರ್ಯಕರ್ತರ ಹಲವಾರು ಕೊಲೆಗಳಿಗೂ ಶರತ್ ಮಡಿವಾಳ ಅವರ ಕೊಲೆಗೂ ಸಾಮ್ಯತೆ ಇದೆ , ಕೊಲೆ ಮಾಡಿದ ರೀತಿ ಕೂಡಾ ಒಂದೇ ರೀತಿ ಇದೆ.
ಹಾಗಾಗಿ ಕೊಲೆಗಡುಕರಿಗೆ ದೊಡ್ಡ ಮಟ್ಟದಲ್ಲಿ ತರಬೇತಿ ನೀಡಲಾಗುತ್ತಿದೆ ಎನ್ನುವುದು ಸ್ಷಷ್ಟವಾಗುತ್ತದೆ. ಎಲ್ಲಿ ತರಬೇತಿ ನೆಡೆಯುತ್ತದೆ ಯಾರು ತರಭೇತಿ ನೀಡುತ್ತಾರೆ, ಇವರ ಹಿಂದೆ ಇರುವ ಮುಖ್ಯಸ್ಥರು ಯಾರು ಇದ್ದಾರೆ, ಕಾನೂನು ಮಾಹಿತಿ ನೀಡುವವರು ಯಾರು, ಆಥರ್ಿಕ ಸಹಾಯ ಮಾಡುವವರು ಯಾರು ಇದೆಲ್ಲವನ್ನು ಬೇಧಿಸಿ ಅವರಿಗೂ ಶಿಕ್ಷೆ ಆಗಬೇಕು. ಮುಂದೆ ರಾಜ್ಯದಲ್ಲಿ ಇಂತಹ ಘಟನೆ ಮರುಕಳಿಸಿದ ರೀತಿಯಲ್ಲಿ ಪೋಲೀಸರು ಕೆಲಸ ಮಾಡಬೇಕು ಕೇವಲ ಆರೋಪಿಗಳನ್ನು ಬಂಧಿಸಿ ಕೇಸು ಮುಚ್ಚಿ ಹಾಕುವ ಕೆಲಸವನ್ನು ಪೋಲೀಸ್ ಇಲಾಖೆ ಮಾಡಬಾರದು ಎಂದು ಅವರು ಹೇಳಿದರು. ಶರತ್ ಮಡಿವಾಳ ಅವರ ಸಾವಿಗೆ ನ್ಯಾಯ ಸಿಗಬೇಕಾದರೆ ಎಲ್ಲಾ ಆರೋಪಿಗಳನ್ನು ಬಂದಿಸಿ ಅವರಿಗೆ ಶಿಕ್ಷೆ ಆಗಬೇಕಿದೆ ಎಂದರು.
