ಸುದ್ದಿ9 ಕುಂದಾಪುರ: ಮನೆಯಲ್ಲಿ ಒಂಟಿಯಾಗಿದ್ದ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಕೈಹಾಕಿದ ಗುಜುರಿ ವ್ಯಾಪಾರಿಗೆ ಸ್ಥಳಿಯರು ಹಿಗ್ಗಾಮಗ್ಗ ಥಳಿಸಿದ ಘಟನೆ ಕುಂದಾಪುರ ತಾಲೂಕಿನ ಮಡಾಮಕ್ಕಿ ಗ್ರಾಮದ ಅಡರ್ಿಯಬೆಪ್ಪಡಿ ಎಂಬಲ್ಲಿ ನಡೆದಿದೆ.
ಪೆಟ್ಟು ತಿಂದ ಅನ್ಯಮತೀಯ ಯುವಕನನ್ನು ಕಾರ್ಕಳ ತಾಲೂಕಿನ ಮುನಿಯಾಲು ಗ್ರಾಮದ ಇಸುಬು(35) ಎಂದು ಗುರುತಿಸಲಾಗಿದೆ.
ಈತ ಯುವತಿಗೆ ಕಿರುಕುಳ ನೀಡಿ ತನ್ನ ಎಂ.80 ಬಸ್ನಲ್ಲಿ ತಪ್ಪಿಸಿಕೊಂಡಿದ್ದ
. ಯುವತಿ ಮನೆಯಲ್ಲಿ ಅಳುತ್ತಾ ಕುಳಿತಿರುವುದನ್ನು ನೋಡಿ ವಿಚಾರಿಸಿದಾಗ ಈತನ ಕಾಮುಕತನದ ಬಯಲಾಗಿದೆ. ಕೊನೆಗೆ ಮಾಂಡಿ ಸಮೀಪದ ಮಾರುಕೈ ಪ್ರದೇಶದ ಹೋಟೆಲ್ನಲ್ಲಿ ಚಹಾಕುಡಿಯುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದು ಶಂಕರನಾರಾಯಣ ಪೊಲೀಸರಿಗೆ ಒಪ್ಪಿಸಿದ್ದಾರೆ.
