ಕೈಕಂಬ: ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾಧ್ಯಮ ಶಾಲೆ ಇಲ್ಲಿ ಗಾಂಧಿಜಯಂತಿ ಆಚರಣೆ ಜರುಗಿತು. ಭಾರತ್ ಮಾತಾ ಟ್ರಸ್ಟಿನ ಮ್ಯಾನೇಜಿಂಗ್ ಟ್ರಸ್ಟಿಯಾದ ವಾಲ್ಟರ್ ಸ್ಟೀಫನ್ ಮೆಂಡಿಸ್ ಸಂಚಾಲಕಿ ಪೋರೆನ್ಸ್ ಮೆಂಡಿಸ್ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಅನಂದಕೃಷ್ಣಕಾಮತ್, ಮುಖೋಪಾಧ್ಯಾಯ ಮಹೇಶ್ ಶೆಟ್ಟಿ ಮುಖ್ಯ ಶಿಕ್ಷಕಿ ಸ್ವರ್ಣಲತಾ ಉಪಸ್ಥಿತರಿದ್ದರು. ಪ್ರಾಸ್ತಾವಿಕ ನುಡಿಗಳನಾಡಿದ ಸಂಚಲಕಿ ನಮ್ಮ ಜೀವನದಲ್ಲಿ ಸತ್ಯ ಮತ್ತು ಅಹಿಂಸೆಗಳನ್ನು ಅಳವಡಿಸುವುದರ ಮೂಲಕ ಗಾಂಧಿಜಯಂತಿಗೆ ನಿಜವಾದ ಅರ್ಥ ಕೊಡುವ ಎಂದರು ಮುಖ್ಯ ಅತಿಥಿಗಳು ಗಾಂಧಿಜಯಂತಿಯ ಮಹತ್ವದ ಕುರಿತು ಮಾತನಾಡಿದರು. ವಿದ್ಯಾರ್ಥಿಗಳಿಂದ ಭಾಷಣ, ಸಮುಹಗಾಯನ ನಡೆಯಿತು. ನಂತರ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ರಜ್ಮಾ ಸ್ವಾಗತಿಸಿ ಶ್ರೀಲತಾ ವಾಂದಿಸಿದರು. ಅಪೇಕ್ಷ ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *