ಬಂಟ್ವಾಳ: ತಾಲ್ಲೂಕಿನ ಕಳ್ಳಿಗೆ ಗ್ರಾಮದ ದೇವಂದಬೆಟ್ಟು ನಿವಾಸಿ , ಪ್ರಗತಿಪರ ಕೃಷಿಕ, ಬಂಜನ್ ಕುಟುಂಬದ ಹಿರಿಯ ಸದಸ್ಯ ಕಳ್ಳಿಗೆ ಶೇಜು ಬಂಜನ್(93) ಅಸೌಖ್ಯದಿಂದ ಶನಿವಾರ ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರಿಗೆ ಪತ್ನಿ, ನಾಲ್ವರು ಪುತ್ರರು ಮತ್ತು ಮೂವರು ಪುತ್ರಿಯರು ಇದ್ದಾರೆ. ಮೂಲತಃ ಮಂಗಳೂರಿನ ಕುಂಜತ್ತಬೈಲು ನಿವಾಸಿಯಾಗಿದ್ದ ಮೃತರು ಕಳೆದ 45 ವರ್ಷಗಳಿಂದ ಕಳ್ಳಿಗೆಯಲ್ಲಿ ನೆಲೆಸಿದ್ದರು.
ಕುಂಜತ್ತಬೈಲು ಶ್ರೀ ಮಲರಾಯ ದೈವಸ್ಥಾನದ ಮೂಲ್ಯಣ್ಣರಾಗಿ, ಕಳ್ಳಿಗೆ ಕನಪಡಿತ್ತಾಯ ದೈವಸ್ಥಾನ ತಲೆಪಟ್ಟಿ ಸಮರ್ಪಣೆ ಸಮಿತಿ ಗೌರವಾಧ್ಯಕ್ಷರಾಗಿ, ದೇವಂದಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮತ್ತು ಬ್ರಹ್ಮರಕೂಟ್ಲು ಶ್ರೀರಾಮ ಭಜನಾ ಮಂದಿರ ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಯಾಗಿ, ಉಡುಪಿ ಪಣಿಯೂರು ಬಂಜನ್ ನಾಗ ಮೂಲಸ್ಥಾನದ ಸ್ಥಾಪಕಾಧ್ಯಕ್ಷರಾಗಿ, ಪಾದೆ ಪಾವೂರು ದೈವ ಮೂಲಸ್ಥಾನ ಹಿರಿಯ ಸದಸ್ಯರಾಗಿದ್ದರು. ಇವರ ಪ್ರಗತಿಪರ ಕೃಷಿಗೆ ಉತ್ತಮ ಕೃಷಿಕ ಪ್ರಶಸ್ತಿ ದೊರೆತಿದೆ. ಮೃತರ ಅಂತ್ಯಕ್ರಿಯೆ ಶನಿವಾರ ಮಧ್ಯಾಹ್ನ ಮನೆ ಸಮೀಪದಲ್ಲಿ ನೆರವೇರಿತು.
