ಬಂಟ್ವಾಳ: ಸಾರ್ವಜನಿಕ ಶಿಕ್ಷಣ ಇಲಾಖೆ, ಡಿಎಸ್‍ಇಆರ್‍ಟಿ ಮತ್ತು ಹಾಸನ ಡಯಟ್ ಇವರ ಆಶ್ರಯದಲಿ ಹಾಸನದ ಫಿಲೋಮಿನಾ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದ ಹಾಸನ ವಿಭಾಗ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ಗಂಗೆಯ ಗೋಳು ನಾಟಕ ದ್ವಿತೀಯ ಸ್ಥಾನಗಳಿಸಿದೆ. ಪತ್ರಕರ್ತ, ರಂಗಕರ್ಮಿ ಮೌನೇಶ ವಿಶ್ವಕರ್ಮ ನಿರ್ದೇಶಿಸಿದ ಈ ನಾಟಕದಲ್ಲಿ ಶಾಲೆಯ ವಿದ್ಯಾರ್ಥಿಗಳಾದ ಜೋಲ್ಸ್ಟನ್ ಸೆರಾವೋ, ಪ್ರಣೀತ್, ಶ್ರೀಯ ಆಳ್ವ, ಸಂಜನಾ ರೈ, ವಿಂದ್ಯಾ ಕೈಂತಜೆ, ಪ್ರಣಮ್ಯ ಶೆಟ್ಟಿ , ಶ್ರೇಯಾ ,ಯಶ್ಮಿತಾ ಅಭಿನಯಿಸಿದ್ದಾರೆ. ಶಿಕ್ಷಕರಾದ ಮಂಜುಳಾ ಎಚ್.ಗೌಡ, ಸುಧಾ ಎನ್ ರಾವ್ ಮಾರ್ಗದರ್ಶನ ನೀಡಿದ್ದಾರೆ. ವಿಜೇತ ನಾಟಕತಂಡವನ್ನು ಶಾಲಾ ಸಂಚಾಲಕ ಪ್ರಹ್ಲಾದ್ ಜೆ ಶೆಟ್ಟಿ, ಆಡಳಿತಾಧಿಕಾರಿ ಸಿ.ಶ್ರೀಧರ್, ಮುಖ್ಯೋಪಾಧ್ಯಾಯರಾದ ವಿಜಯಲಕ್ಷ್ಮೀ ವಿ ಶೆಟ್ಟಿ, ಗ್ರೇಸ್ ಪಿ ಸಲ್ಡಾನ ಅಭಿನಂದಿಸಿದ್ದಾರೆ.IMG-20170922-WA0043

??????????????????????????????? IMG_1869

By suddi9

Leave a Reply

Your email address will not be published. Required fields are marked *