ಮಂಗಳೂರು: ಚಲನಚಿತ್ರನಟ ನಿರ್ಮಾಪಕ,ನಿರ್ದೇಶಕ ಡಾ.ರಾಜಶೇಖರ್ ಕೋಟ್ಯಾನ್ ಶೀಘ್ರದಲ್ಲೆ ಕಾಂಗ್ರೇಸ್‍ಗೆ ಸೇರ್ಪಡೆಗೊಳ್ಳಲಿದ್ದಾರೆ. ಎಂದು ಮೂಲಗಳು ತಿಳಿಸಿವೆ.ಅವರು ಕಳೆದ 22 ವರ್ಷಗಳಿಂದ ಹಲಾವಾರು ಕನ್ನಡ ತುಳು ಸಿನೀಮಗಳಲ್ಲಿ ನಟಿಸಿ ಅವರೇ ನಿರ್ಮಾಣ ಹಾಗೂ ನಿರ್ದೇಶಿಸಿ ನಟಿಸಿದ ಬ್ರಹ್ಮಶ್ರೀ ನಾರಾಯಣ ಸ್ವಾಮಿ ತುಳು ಚಿತ್ರವು 50ನೇ ಸಿನಿಮಾವಾಗಿ ಮೂಡಿ ಬಂದ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಲಭಿಸಿದೆ.
ಡಾ.ರಾಜಶೇಖರ ಕೋಟ್ಯಾನ್ ಅವರ ಸಮಾಜ ಸೇವೆಯನ್ನು ಗುರುತಿಸಿ ಮಹಾರಾಷ್ಟ್ರದ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರಿಂದ ಸನ್ಮಾನಿತರಾಗಿದ್ದರು.ಅವರ ಸಮಾಜ ಸೇವೆಗೆ ಗ್ಲೋಬಲ್ ಅಕಾಡೆಮಿ ಆಫ್ ಫೀಸ್ ಸಂಸ್ಥೆಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.ಪ್ರಸ್ತುತ ಅವರು ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಉಪಾಧ್ಯಕ್ಷರಾಗಿ ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯ್ರುಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
