ಕೈಕಂಬ:ಸುಂಕದಕಟ್ಟೆ ಯಕ್ಷಮಿತ್ರರು ಅವರು ಶ್ರೀಅಂಬಿಕಾ ಅನ್ನಪೂರ್ಣೇಶ್ವರೀ ದೇವಸ್ಥಾನ ಸುಂಕದಕಟ್ಟೆ ಇಲ್ಲಿ ನವರಾತ್ರಿ ಉತ್ಸವ ಪ್ರಯುಕ್ತ ನಡೆಸಿಕೊಂಡು ಬರುತ್ತಿದ್ದ ಯಕ್ಷರಾಧನೆ ಕಾರ್ಯಕ್ರಮಕ್ಕೆ ಈ ಭಾರಿ ದಶಮದ ಸಂಭ್ರಮ. ಸೆ.24 ರಂದು ಭಾನುವಾರ ಮಧ್ಯಾಹ್ನ 1 ರಿಂದ 6ಗಂಟೆಯವರೆಗೆ  ಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ ” ಸತ್ಯ ಹರಿಶ್ಚಂದ್ರ” ಯಕ್ಷಗಾನ ತಾಳಮದ್ದಳೆ” ನಡೆಯಲಿದೆ.

ಭಾಗವತರಾಗಿ ಎಂ ದಿನೇಶ್ ಅಮ್ಮಣ್ಣಾಯ , ದೇವಿಪ್ರಸಾದ್ ಆಳ್ವ ತಲಪಾಡಿ, ಚೆಂಡೆ ,ಮದ್ದಳೆ  ವಿನಯ ಆಚಾರ್ಯ  ಕಡಬ , ಪ್ರಶಾಂತ್ ಶೆಟ್ಟಿ ವಗೆನಾಡು. ಅರ್ಥಧಾರಿಗಲಾಗಿ. ಗೋಪಾಲಕೃಷ್ಣ ಶಾಸ್ತ್ರಿ ಮೂಡಂಬೈಲು. ಎಂ.ಕೆ.ರಮೇಶ್ ಆಚಾರ್ಯ,. ಜಬ್ಬಾರ್ ಸಮೋ ಸಂಪಾಜೆ. ಜಯಪ್ರಕಾಶ್ ಶೆಟ್ಟಿ ಪೆರ್ಮುದೆ. ಗಣಪತಿ ಭಟ್ ಸಂಕದಗುಂಡಿ, ಸೀತರಾಮ ಕುಮಾರ್ ಕಟೀಲು, ರಮಣ್ ಆಚಾರ್ಯ ಕಾರ್ಕಳ, ಮಾಧವ ಬಂಗೇರ ಕೊಳತ್ತಮಜಲು. ಭಾಗವಹಿಸಲಿದ್ದಾರೆ.

ಸಂಜೆ 6 ರಿಂದ 9ಗಂಟೆಯವರೆಗೆ ಪೂರ್ಣಿಮಾ ಯತೀಶ್ ರೈ ನಿರ್ದೇಶನದಲ್ಲಿ “ಯಕ್ಷ- ದೃಶ್ಯ ಕಾವ್ಯ” ಕಾರ್ಯಕ್ರಮ ಮೂಡಿಬರಲಿದೆ. ಭಾಗವತರಾಗಿ ಭವ್ಯಶ್ರೀ ಕುಲ್ಕುಂದ ಹಾಗೂ ಅಮೃತಾ ಅಡಿಗ, ಚೆಂಡೆ. ಮದ್ದಳೆ:ಮುರಾರಿ ಕಡಂಬಳಿತ್ತಾಯ, ಗುರುಪ್ರಸಾದ್ ಬೊಳಿಂಜಡ್ಕ, ನಿರೂಪಣೆ ಸುಮಂಗಲಾ ರತ್ನಾಕರ್,  ಮುಮ್ಮೇಳ: ವಸುಂಧರಾ ಎಚ್. ಶೆಟ್ಟಿ, ಸಾಯಿ ಸುಮ ನಾವುಡ, ಸುಷ್ಮಾ ಮೈರ್ಪಾಡಿ, ಛಾಯಾಲಕ್ಷ್ಮೀ ಆರ್.ಕೆ. ಅಶ್ವಿನಿ ಆಚಾರ್,  ಚೈತ್ರಾ ಎಚ್ , ಕೃತಿ ವಿ. ರಾವ್,ಪ್ರತಿಷ್ಠ ರೈ, ಮೈತ್ರಿ ಭಟ್ ಮವ್ವಾರ್, ಅನುಶ್ರೀ ರಾವ್, ವೈಷ್ಣವಿ ರಾವ್, ಸಾಕ್ಷ ವೈ. ರೈ..ಜಿತಾಶ್ರೀ , ಧ್ರುವಿ ಎಚ್,ಶೆಟ್ಟಿ  ಧ್ರತಿ ಎಚ್. ಶೆಟ್ಟಿ ಶೇಜಲ್, ಸಾನ್ವಿ ಶೆಟ್ಟಿ  ಅವರುಗಳು ಪಾಲ್ಗೊಳ್ಳಲಿದ್ದಾರೆ ಎಂದು ಯಕ್ಷಮಿತ್ರರ ಸಂಘದ ಪ್ರಕಟನೆ ತಿಳಿಸಿದೆ.

By Suddi9

Leave a Reply

Your email address will not be published. Required fields are marked *