ಬಂಟ್ವಾಳ: ನಿವೇಶನ ರಹಿತರಾಗಿ ಸರಕಾರಿ ಜಾಗದಲ್ಲಿ ಮನೆ ನಿರ್ಮಿಸಿ ಹಕ್ಕು ಪತ್ರ ಹೊಂದದೆ ಸರಕಾರಿ ಸವಲತ್ತುಗಳಿಂದ ವಂಚಿತರಾದವರಿಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ 94ಸಿ ಹಾಗೂ 94ಸಿಸಿ ಯೊಜನೆ ಮೂಲಕ ಹಕ್ಕುಪತ್ರ ನೀಡಿ ಬಡ ಜನತೆಯ ಸಂಕಷ್ಟ ದೂರಗೊಳಿಸಿದೆ ಎಂದು ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಹೇಳಿದರು.
ಬಂಟ್ವಾಳ ತಾ| ವಾಮದಪದವು ಕರಿಮಲೆ ರಮೇಶ್ ಪೈ ಸಭಾಂಗಣದಲ್ಲಿ ಗುರುವಾರ ಚೆನ್ನೈತ್ತೋಡಿ ಗ್ರಾ.ಪಂ. ವ್ಯಾಪ್ತಿಯಲ್ಲಿನ 94ಸಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಹಕ್ಕುಪತ್ರ ಹಾಗೂ ಇತರ ಸವಲತ್ತುಗಳನ್ನು ವಿತರಿಸಿ ಅವರು ಮಾತನಾಡಿದರು.vamadapadavu
ಬಹು ಬೇಡಿಕೆಯ 4 ಕೋ. ರೂ. ವೆಚ್ಚದ ಅಣ್ಣಳಿಕೆ-ಕರಿಮಲೆ ರಸ್ತೆ ಮತ್ತು 3.5 ಕೋ.ರೂ. ವೆಚ್ಚದ ಕಾಡಬೆಟ್ಟು-ಬಸ್ತಿಕೋಡಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ. ರಾಜ್ಯಕ್ಕೆ ಪ್ರಥಮವಾಗಿ 2.5 ಕೋ.ರೂ ವೆಚ್ಚದ ಎರಡೂವರೆ ಕಿ.ಮೀ ದೂರದ ಕೊಪ್ಪಳ-ಬುಡೋಳಿ-ದಂಡೆಗೋಳಿ ಸಂಪೂರ್ಣ ಕಾಂಕ್ರೀಟ್ ರಸ್ತೆ ,ಮೂರ್ಜೆ-ವಾಮದಪದವು ರಸ್ತೆಯಲ್ಲಿ ಉಳಿಕೆಯ ಒಂದೂವರೆ ಕಿ.ಮೀ ರಸ್ತೆ 50 ಲ.ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದರು .
ಚೆನ್ನೈತ್ತೋಡಿ ಗ್ರಾ.ಪಂ.ಅಧ್ಯಕ್ಷ ಯತೀಶ್ ಶೆಟ್ಟಿ ವಿಜಯನಗರ , ಜಿ.ಪಂ. ಸದಸ್ಯ ಬಿ. ಪದ್ಮಶೇಖರ ಜೈನ್, ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ. ಮಾಯಿಲಪ್ಪ ಸಾಲ್ಯಾನ್, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಸಿ. ಬಂಗೇರ, ತಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಆಲಿ, ಕುಕ್ಕಿಪಾಡಿ ಗ್ರಾ.ಪಂ. ಅಧ್ಯಕ್ಷ ದಿನೇಶ್ ಸುಂದರ ಶಾಂತಿ, ವಾಮದಪದವು ವಲಯ ಕಾಂಗ್ರೆಸ್ ಅಧ್ಯಕ್ಷ ಅಮ್ಮು ರೈ ಹರ್ಕಾಡಿ, ಪ್ರಗತಿಪರ ಕೃಷಿಕ ವಾಸು ಶೆಟ್ಟಿ ಕುತ್ಲೋಡಿ, ತಾ.ಪಂ. ಸದಸ್ಯರಾದ ರತ್ನಾವತಿ ಜಯರಾಮ ಶೆಟ್ಟಿ, ಪ್ರಭಾಕರ ಪ್ರಭು, ರಾಜ್ಯ ಗೇರು ನಿಗಮ ನಿರ್ದೇಶಕ ಜಗದೀಶ ಕೊಯಿಲ, ಗ್ರಾ.ಪಂ.ಉಪಾಧ್ಯಕ್ಷೆ ವಿಶಾಲಾಕ್ಷಿ, ಎಪಿಎಂಸಿ ಸದಸ್ಯೆ ಭಾರತಿ ಎಸ್. ರೈ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 264 ಫಲಾನುಭವಿಗಳಿಗೆ ಹಕ್ಕು ಪತ್ರ, 2 ಮಂದಿಗೆ ರಾಷ್ಟ್ರೀಯ ಕುಟುಂಬ ಸಹಾಯಧನ, 20 ಮಂದಿಗೆ ಅಂತಿಮ ಸಂಸ್ಕಾರ ಸಹಾಯಧನ, 115 ಮಂದಿಯ ಸಾಲಮನ್ನಾ ತಿಳಿವಳಿಕೆ ಪತ್ರ, 4 ಮಂದಿಗೆ ಗ್ಯಾಸ್ ಕಿಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ನವೀನ್ ಕುಮಾರ್, ಗ್ರಾಮಕರಣಿಕರಾದ ಪ್ರವೀಣ್, ಅನಿಲ್, ವಂದನಾ ಅವರನ್ನು ಗ್ರಾ.ಪಂ.ವತಿಯಿಂದ ಸಚಿವರು ಸಮ್ಮಾನಿಸಿದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ನವೀನಚಂದ್ರ ಶೆಟ್ಟಿ ಸ್ವಾಗತಿಸಿದರು. ಕಂದಾಯ ನಿರೀಕ್ಷಕ ನವೀನ್ ಪ್ರಸ್ತಾವಿಸಿದರು. ಪಂ.ಅ. ಅಧಿಕಾರಿ ಧರ್ಮರಾಜ್ ಫಲಾನುಭವಿಗಳ ಪಟ್ಟಿ ವಾಚಿಸಿದರು. ಪ್ರವೀಣ್ ಗಟ್ಟಿ ವಂದಿಸಿದರು. ರಾಜೀವ ಕಕ್ಯಪದವು ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *