ಬಂಟ್ವಾಳ ಪುತ್ತೂರು ತಾಲೂಕಿನ ಪಡುಮಲೆಯಲ್ಲಿ ಕೋಟಿ ಚೆನ್ನಯರ ತಾಯಿ ದೇಯಿ ಬೈದೆತಿ ಔಷದ ವನದಲ್ಲಿರುವ ಮೂರ್ತಿಯ ಜೊತೆ ಅಶ್ಲೀಲವಾಗಿ ಪೋಟೊ ಕ್ಲಿಕ್ಕಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಟ್ಟ ಆರೋಪಿ ಹನೀಫ್ ಮತ್ತು ಆತನ ಹಿಂದಿರುವ ಮತಾಂಧ ಶಕ್ತಿಗಳ ವಿರುದ್ದ ಸೂಕ್ತ ತನಿಖೆ ನಡೆಸಿ ಕಠಿನ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿ ಸಂಗಬೆಟ್ಟು ಕ್ಷೇತ್ರ ದ.ಜಿ.ಪಂ ಸದಸ್ಯ ಎಮ್.ತುಂಗಪ್ಪ ಬಂಗೇರ ನೇತೃತ್ವದಲ್ಲಿ ಬಂಟ್ವಾಳ ತಹಶೀಲ್ದಾರರ ಮೂಲಕ ಕರ್ನಾಟಕ ಸರಕಾರದ ಮುಖ್ಯ ಮಂತ್ರಿಗೆ ಮನವಿ ಸಲ್ಲಿಸಲಾಯಿತು.
ದೇಯಿ ಬೈದೆತಿ ಮೂರ್ತಿಗೆ ಅವಮಾನ ಮಾಡಿರುವುದು ಖಂಡನೀಯ. ಔಷಧ ವನಕ್ಕೆ ಸೂಕ್ತ ಭದ್ರತೆ ಒದಗಿಸಬೇಕು. ಶಾಶ್ವತ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಪ್ರಮುಖರಾದ ಎಮ್.ಪುಷ್ಪಾನಂದ, ಯೋಗೇಂದ್ರ, ಜನಾರ್ದನ ಆಚಾರ್ಯ , ಪ್ರಕಾಶ್ ಅಂಚನ್, ಸುದರ್ಶನ್ ಕುಮಾರ್, ಕರುಣೇಂದ್ರ ಪೂಜಾರಿ , ಗಣೇಶ್ ಪ್ರಭು, ಸಂಜೀವ ಪೂಜಾರಿ ಪಿಲಿಂಗಾಲು, ಸಂತೋಷ್ ರಾಯಿಬೆಟ್ಟು, ಲಕ್ಷ್ಮಣ ಗೌಡ ಮೊದಲಾದವರಿದ್ದರು.
