ಬಂಟ್ವಾಳ: ಕಳೆದ 30 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಜೀಪಮೂಡ ಗ್ರಾಮದ ಹಿಂದೂ ರುದ್ರಭೂಮಿ ಗುರುವಾರ ಲೋಕಾರ್ಪಣೆಗೊಂಡಿದೆ. ಹಲವಾರು ವಿವಾದಗಳಿಗೆ ಗುರಿಯಾಗಿದ್ದ ಹಿಂದೂ ರುದ್ರಭೂಮಿ ನಿರ್ಮಾಣ ಕಾಮಗಾರಿಯನ್ನು ಸಜೀಪಮೂಡ ಗ್ರಾಪಂಚಾಯಿತಿ ಯಶಸ್ವಿಯಾಗಿ ನಿಭಾಯಿಸಿದ್ದು ಇದೀಗ ಸಾರ್ವಜನಿಕರ ಬಳಕೆಗೆ ಮುಕ್ತಗೊಂಡಿದೆ. ಆ ಮೂಲಕ ಗ್ರಾಮದ ಜನರ ಬಹುವರ್ಷಗಳ ಬೇಡಿಕೆಯೊಂದು ನನಸಾಗಿದೆ.KAR_9135

KAR_9139
ಸಜೀಪಮೂಡ ಗ್ರಾಮದ ಬಾಬ್ಲುಕೋಡಿ ಎಂಬಲ್ಲಿ ಸರ್ವೇ ಸಂಖ್ಯೆ 246.1ಎ1ರ 46 ಸೆಂಟ್ಸ್ ಜಮೀನಿನಲ್ಲಿ 6.75 ಲಕ್ಷ ಪಂಚಾಯಿತಿ ಅನುದಾನದಡಿ ಸುಸಜ್ಜಿತ ಹಿಂದೂ ರುದ್ರಭೂಮಿ ನಿರ್ಮಾಣಗೊಂಡಿದೆ. ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ದೀಪಪ್ರಜ್ವಲನೆಯ ಮೂಲಕ ಹಿಂದೂ ರುದ್ರಭೂಮಿಯನ್ನು ಲೋಕಾರ್ಪಣೆಗೊಳಿಸಿದರು. ಸ್ಥಳೀಯ ತಾಲೂಕು ಪಂಚಾಯಿತಿ ಸದಸ್ಯ ಕೆ. ಸಂಜೀವ ಪೂಜಾರಿ, ಸಜೀಪಮೂಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಣಪತಿ ಭಟ್, ಉಪಾಧ್ಯಕ್ಷೆ ಲೀನಾ ಮಿರಾಂಡ, ಪಂಚಾಯಿತಿ ಸದಸ್ಯರಾದ ವಿಶ್ವನಾಥ ಬೆಳ್ಚಾಡ, ರಮೇಶ್ ಎಂ. ಪನೋಲಿಬೈಲು, ಅಬ್ದುಲ್ ಕುಂಞ, ಅಬ್ದುಲ್ ಅಜೀಜ್ ಬಿ., ತುಮಿನಾ ಶಾಂತಿ ಡಿಸೋಜಾ, ಸರಸ್ವತಿ ಭಟ್, ಹರಿಣಾಕ್ಷಿ, ಯಮುನಾ ಕೊಟ್ಟಾರಿಪಾಲು, ಚಂಚಲಾಕ್ಷಿ, ಯಮುನಾ ಮಿತ್ತಮಜಲು, ಸಜೀಪಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನ ಕಾರ್ಯಧ್ಯಕ್ಷ ಗಿರೀಶ್‍ಪೂಜಾರಿ ಪೆರ್ವ, ಜಯಶಂಕರ ಕಾನ್ಸಲೆ, ವಿನೋದ ಕೋಮಾಲಿ, ರೋಹಿತ್ ಪಟ್ಟುಗುಡ್ಡೆ, ವಿನೋದ ಡಿಕೋಸ್ತಾ, ನವೀನ ಕಾರಾಜೆ, ಇಕ್ಬಾಲ್ ನಂದಾವರ, ಶೋಭಾಶೆಟ್ಟಿ ಬಾಬ್ಲುಕೋಡಿ ಉಪಸ್ಥಿತರಿದ್ದರು. ಗುತ್ತಿಗೆದಾರ ಶೈಲೇಶ್ ಕುಚ್ಚಿಗುಡ್ಡೆ ಸಹಕರಿಸಿದರು. ಉದ್ಘಾಟನೆಯ ಅಂಗವಾಗಿ ಭಜನೆ ಕಾರ್ಯಕ್ರಮ ನಡೆಯಿತು.

By suddi9

Leave a Reply

Your email address will not be published. Required fields are marked *