ಬಂಟ್ವಾಳ:ಕಳೆದ 112ವರ್ಷಗಳಿಂದ ಸಮಾಜದಲ್ಲಿ ಪ್ರೀತಿ ಮತ್ತು ಗೆಳೆತನ ಹಾಗೂ ಪರಸ್ಪರ ಸೌಹಾರ್ದತೆ ಮೂಡಿಸುವುದರ ಜೊತೆಗೆ ಗ್ರಾಮೀಣ ಅಭಿವೃದ್ಧಿ ಮೂಲಕ ದೂರದೃಷ್ಟಿಯ ಯೋಜನೆಗಳನ್ನು ರೂಪಿಸಿ ಪಾರದರ್ಶಕವಾಗಿ ಅನುಷ್ಠಾನಗೊಳಿಸುವಲ್ಲಿ ರೋಟರಿ ಕ್ಲಬ್ ಸಂಸ್ಥೆಯು ಜಗತ್ತಿನಲ್ಲೇ ಮಾನವೀಯತೆ ಪ್ರತೀಕವಾಗಿ ಬೆಳೆದು ಬಂದಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ಎಂ.ಎಂ.ಸುರೇಶ ಚೆಂಗಪ್ಪ ಹೇಳಿದ್ದಾರೆ.
ತಾಲ್ಲೂಕಿನ ಲೊರೆಟ್ಟೊ ಎಂಬಲ್ಲಿ ಸೋಮವಾರ ಸಂಜೆ ಏರ್ಪಡಿಸಿದ್ದ ನೂತನ ರೋಟರಿ ಕ್ಲಬ್ ಉದ್ಘಾಟನಾ ಕಾಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ಪ್ರಜೆಗಳೇ ಪ್ರಭುಗಳು ಎಂಬುದು ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಎಂದು ಹೇಳಿದ ಅವರು ಜನರಲ್ಲಿ ಪರಿಸರ ಸಂರಕ್ಷಣೆ ಮತ್ತು ಮಾನವೀಯ ಮೌಲ್ಯ ತುಂಬುವ ಪ್ರಯತ್ನ ರೋಟರಿ ಸಂಸ್ಥೆಯಿಂದ ನಡೆಯುತ್ತಿದೆ. ಈಗಾಗಲೇ ಜಗತ್ತಿನಿಂದ ಪೋಲಿಯೋ ನಿಮರ್ೂಲನೆಗೊಳಿಸುವಲ್ಲಿ ರೋಟರಿ ಸಂಸ್ಥೆ ಗಮನಾರ್ಹ ಸಾಧನೆ ಮಾಡಿದ್ದು, ವಿಶ್ವಸಂಸ್ಥೆಗೆ ಬೈಲಾ ಸಿದ್ಧಪಡಿಸುವಲ್ಲಿ ಕೂಡಾ ರೋಟರಿ ಸಂಸ್ಥೆ ಪಾತ್ರ ಇದೆ ಎಂಬುದು ನಮಗೆಲ್ಲರಿಗೂ ಹೆಮ್ಮೆಯಾಗಿದೆ ಎಂದರು.ಧರ್ಮಗುರು ಎಲಿಯಾಸ್ ಡಿಸೋಜ ಇವರು ನೂತನ ರೋಟರಿ ಕ್ಲಬ್ ಉದ್ಘಾಟಿಸಿ ಆಶೀರ್ವಚನ ನೀಡಿದರು. ಪ್ರತಿಯೊಬ್ಬರಲ್ಲಿಯೂ ಪರಸ್ಪರ ಸ್ನೇಹ ಮತ್ತು ಸೌಹಾರ್ದತೆ ಮೇಳೈಸಿದಾಗ ಮಾತ್ರ ಒಟ್ಟು ಸಮಾಜದಲ್ಲಿ ಶಾಂತಿ ಮತ್ತು ಸಮೃದ್ಧಿ ಉಂಟಾಗುತ್ತದೆ ಎಂದರು.
ಜಿಲ್ಲಾ ರೋಟರಿ ವಿಸ್ತರಣಾ ಸಮಿತಿ ಅಧ್ಯಕ್ಷ ಡಾ.ಅರವಿಂದ ಭಟ್ ಕೆ.ಜಿ., ಅಭಿವೃದ್ಧಿ ಸಮಿತಿ ಜಿಲ್ಲಾ ಸದಸ್ಯ ಸತೀಶ್ ಬೋಳಾರ, ಸಹಾಯಕ ಗವರ್ನರ್ ಎ.ಎಂ.ಕುಮಾರ್ ಮತ್ತಿತರರು ಶುಭ ಹಾರೈಸಿದರು.
ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಬಿ.ಸಂಜೀವ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗವರ್ನರ್ ವಿಶೇಷ ಪ್ರತಿನಿಧಿ ಎನ್.ಪ್ರಕಾಶ ಕಾರಂತ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ಬಂಟ್ವಾಳ ತಾಲ್ಲೂಕಿನಲ್ಲಿ ಒಟ್ಟು ಮೂರು ರೋಟರಿ ಕ್ಲಬ್ ಕ್ರಿಯಾಶೀಲವಾಗಿದೆ ಎಂದರು. ರೋಟರಿ ಕ್ಲಬ್ ನೂತನ ಅಧ್ಯಕ್ಷ ಅವಿಲ್ ಮಿನೇಜಸ್, ನೂತನ ಕಾರ್ಯದಶರ್ಿ ಪ್ರಭಾಕರ ಪ್ರಭು ಮತ್ತಿತರರು ಇದ್ದರು. ಇದೇ ವೇಳೆ ನೂತನ ಸದಸ್ಯರನ್ನು ಅಭಿನಂದಿಸಲಾಯಿತು. ಕಾರ್ಯದರ್ಶಿ ಕೆ.ನಾರಾಯಣ ಹೆಗ್ಡೆ ವಂದಿಸಿದರು.
