ಪಾಣೆಮಂಗಳೂರು : ಆರ್ಯಭಟ ಸಾಂಸ್ಕøತಿಕ ಸಂಸ್ಥೆ ವತಿಯಿಂದ ಶ್ರೀ ರಾಘವೇಂದ್ರ ಸ್ವಾಮಿಗಳ 346ನೇ ಆರಾಧನಾ ಮಹೋತ್ಸವ ಅಂಗವಾಗಿ ಬೆಂಗಳೂರಿನ ಕುಮಾರ ಪಾರ್ಕ್ ವೆಸ್ಟ್ನ ಜಲ ಮಂಡಳಿಯ ಸಮೀಪದ ಕೋದಂಡರಾಮ ವಿದ್ಯಾರ್ಥಿ ಸೇವಾ ಸಂಘದಲ್ಲಿ ಪಾಣೆಮಂಗಳೂರಿನ ಮಂಗಳೂರು ಬಜಾರ್ ಬೀಡಿ ಹಾಗೂ ಬಜಾರ್ ಐಸ್ಕ್ರೀಂ ನ ಮಾಲಕ ಎಸ್. ಗೋಪಾಲಕೃಷ್ಣ ಆಚಾರ್ಯರಿಗೆ ಸಮಾಜ ಸೇವೆಗಾಗಿ ರಾಘವೇಂದ್ರ ಸದ್ಬಾವನಾ ಪ್ರಶಸ್ತಿ ಪ್ರಧಾನ ನಡೆಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಎನ್. ಕುಮಾರ್, ದೆಹಲಿ ದೂರದರ್ಶನ ಕೇಂದ್ರದ ವಿಶ್ರಾಂತ ಹೆಚ್ಚುವರಿ ಮಹಾ ನಿರ್ದೇಶಕ ನಾಡೋಜ ಡಾ| ಮಹೇಶ್ ಝೋಶಿ, ಸಂಗೀತ ನಿರ್ದೇಶಕ, ಖ್ಯಾತ ಗೀತ ರಚನಕಾರ ಪ್ರೇಮಕವಿ ಕೆ. ಕಲ್ಯಾಣ್, ಆರ್ಯಭಟ ಸಾಂಸ್ಕ್ರತಿಕ ಸಂಸ್ಥೆಯ ಅಧ್ಯಕ್ಷ ಡಾ| ಎಚ್.ಎಲ್.ಎನ್ ರಾವ್ ಪುತ್ತೂರು ಶ್ರೀ ಮೂಕಾಂಬಿಕಾ ನಾಟ್ಯಾಲಯದ ಭವಾನಿಶಂಕರ್ ಆಚಾರ್ಯ ಉಪಸ್ಥಿತರಿದ್ದರು.
