ಕೈಕಂಬ : ಗ್ರಾಮೀಣ ಪ್ರದೇಶದ ರಸ್ತೆಗಳು ಉತ್ತಮವಾಗಿ ನಿರ್ಮಾಣಗೊಂಡಾಗ ಈ ಭಾಗದ ಜನತೆಗೆ ಉಪಯೋಗವಾಗಲು ಸಾಧ್ಯ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಮೊಹಿಯುದ್ದಿನ್ ಬಾವಾ ಹೇಳಿದರು. ಅವರು ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ ಮಂಜೂರಾದ 1.ಕೋಟಿ.72 ಲಕ್ಷದ 40 ಸಾವಿರ ರೂಪಾಯಿಯ ಕಾಮಗಾರಿಗೆ ಮಳಲಿಯಲ್ಲಿ ಶುಕ್ರವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಈ ರಸ್ತೆಯು ತೀರ ಅದಗೆಟ್ಟಿದ್ದು ಹೊಂಡಗಳಿಂದ ತುಂಬಿದ ರಸ್ತೆಯು ಜೋಡುತಡಮೆಯಿಂದ ಮಳಲಿ ನಾಡಜೆ ರಸ್ತೆಗೆ ಸಂಪರ್ಕವಿದ್ದ ರಸ್ತೆ ಇದಾಗಿದ್ದು ಈ ಭಾಗದ ಜನತೆಯ ಬೇಡಿಕೆಗೆ ಸಂದಿಸಿ ಕೂಡಲೇ ಕಾಮಗಾರಿಯನ್ನು ಪೂರ್ತಿಗೊಳಿಸುವುದಾಗಿ ಹೇಳಿದರು.25 vp silanyasa

25-1

25-3

ಈ ಸಂದರ್ಭದಲ್ಲಿ ಶಾಸಕರೊಂದಿಗೆ ,ದ.ಕ ಜಿಲ್ಲಾ ಪಂಚಾಯತ್ ಸದಸ್ಯರಾದ ಯು.ಪಿ ಇಬ್ರಾಹಿಂ, ತಾಲೂಕು ಪಂಚಾಯತ್ ಸದಸ್ಯರಾದ ಜಿ. ಸುನೀಲ್ , ಗಂಜಿಮಠ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ಎಂ , ಉಪಾಧ್ಯಕ್ಷ ಆರ್ ಎಸ್ ಝಾಕೀರ್, ಗುರುಪುರ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಸುರೇಂದ್ರ ಕಂಬಳಿ, ಹಿಂದುಳಿದ ವರ್ಗದ ಗುರುಪುರ ಬ್ಲಾಕ್ ಅಧ್ಯಕ್ಷ ಗಣೇಶ್ ಪೂಜಾರಿ, ಮಾ.ಜಿ.ಪಂ ಸದಸ್ಯರಾದ ಕೃಷ ಅಮೀನ್, ಮಲ್ವಿನ್ ಡಿ.ಸೋಜಾ. ಗಾ.ಪಂ. ಸದಸ್ಯರಾದ ಬೂಬ ಪೂಜಾರಿ, ದಾಮೋಧರ ಕುಲಾಲ್,ಸುನೀಲ್ ಫೆರ್ನಾಂಡಿಸ್,ನೋಣಯ ಪೂಜಾರಿ,ಅಬ್ದುಲ್ ರಝಾಕ್, ಅಬ್ದುಲ್ ಹಮೀದ್, ಸದಸ್ಯೆರಾದ ಪಾರ್ವತಿ, ಗೀತಾ, ಮಲ್ಲಿಕಾ, ಉಧ್ಯಮಿ ಚಂದ್ರಾಹಾಸ ಶೆಟ್ಟಿ , ಪದ್ಮನಾಭ ಬಲ್ಲಾಲ್, ಉದಯ ಆಳ್ವ, ಗುತ್ತಿಗೆದಾರರಾದ ಅಶೋಕ್ ಬಳಿ, ಇಂಜೀನಿಯರ್ ರಕ್ಷಿತಾ ಎಂ.,ಮತ್ತಿತ್ತರರು ಉಪಸ್ಥಿತರಿದ್ದರು.

*  ವೀಡಿಯೋ  ನೋಡಲು ಇಲ್ಲಿ  ಕ್ಲಿಕ್ ಮಾಡಿ .

By suddi9

Leave a Reply

Your email address will not be published. Required fields are marked *