ಆನಂದಾಶ್ರಮ ಸೇವಾ ಟ್ರಸ್ಟ್ (ರಿ) ಪುತ್ತೂರು, ಶ್ರೀರಾಮ ವಿದ್ಯಾಸಂಸ್ಥೆಗಳು, ಪ್ರಾಥಮಿಕಆರೋಗ್ಯಕೇಂದ್ರ ಬಾಳ್ತಿಲ ಇದರ ವತಿಯಿಂದಜಿಲ್ಲಾಅಂಧತ್ವ ನಿವಾರಣಾಸಂಸ್ಥೆ ಮಂಗಳೂರು, ಜಿಲ್ಲಾ ಸಂಚಾರಿ ನೇತ್ರಘಟಕ ಹಾಗೂ ಮಂಗಳೂರಿನ ಖ್ಯಾತಜಿಲ್ಲಾಸ್ಪತ್ರೆ ಹಾಗೂ ಕೆ.ಎಂ.ಸಿ ನೇತ್ರತಜ್ಞರತಂಡದಿಂದ ಶ್ರೀರಾಮ ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿಉಚಿತ ನೇತ್ರಚಿಕಿತ್ಸಾ ಶಿಬಿರ ನೆರವೇರಿತು.

ಕಾರ್ಯಕ್ರಮವನ್ನುಡಾ| ಗೌರಿ ಪೈ ಆನಂದಶ್ರಾಮ ಪುತ್ತೂರು ಉದ್ಘಾಟಿಸಿದರು.ಕಾರ್ಯಕ್ರಮದಅಧ್ಯಕ್ಷತೆಯನ್ನು ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ಶ್ರೀ ವಸಂತ ಮಾಧವ ಶ್ರೀಮಾನ್ ವಹಿಸಿದರು.ಕಾರ್ಯಕ್ರಮದಲ್ಲಿಡಾ| ಟೀನಾ, ಕೆ.ಎಂ.ಸಿ ಮಂಗಳೂರು, ಶ್ರೀಮತಿ ಸವಿತಾಕುಲಕರ್ಣಿಜಿಲ್ಲಾ ವೆನ್ಲಾಕ್‍ಆಸ್ಪತ್ರೆ ಮಂಗಳೂರು, ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಶ್ರೀ ರಮೇಶ್‍ಎನ್ ಉಪಸ್ಥಿತರಿದ್ದರು.
ಶ್ರೀ ಶಾಂತರಾಜ್, ನೇತ್ರಾಧಿಕಾರಿ ಬಂಟ್ವಾಳ ಸರಕಾರಿಆರೋಗ್ಯಕೇಂದ್ರಕಾರ್ಯಕ್ರಮದಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ಶ್ರೀ ಮನೋಜ್, ಸಹಶಿಕ್ಷಕರು ಸ್ವಾಗತಿಸಿ, ನಿರೂಪಿಸಿ, ಶ್ರೀ ಜಿನ್ನಪ್ಪ ಏಳ್ತಿಮಾರ್ ವಂದಿಸಿದರು.
