ಹೊಸದಿಲ್ಲಿ: ಲಡಾಖ್ ಗಡಿ ಭಾಗದ ಪ್ಯಾಂಗಾಂಗ್ ಲೇಕ್ ಬಳಿ ಭಾರತ-ಚೀನಾ ಸೇನಾ ಪಡೆಗಳ ನಡುವೆ ತಿಕ್ಕಾಟ ನಡೆದದ್ದು ನಿಜವೆಂದು ಒಪ್ಪಿಕೊಂಡ ಭಾರತ, ಡೋಕ್ಲಾಮ್ ಗಡಿ ಬಿಕ್ಕಟ್ಟಿನ ವಿಷಯದಲ್ಲಿ ಪರಸ್ಪರ ಸಮ್ಮತಾರ್ಹ ಪರಿಹಾರಕ್ಕೆ ಪ್ರಯತ್ನ ಮುಂದುವರೆಯಲಿದೆ ಎಂದಿದೆ.’ಆಗಸ್ಟ್ 15ರಂದು ಪ್ಯಾಂಗಾಂಗ್ ಬಳಿ ಉಭಯ ದೇಶಗಳ ಯೋಧರ ನಡುವೆ ಕಲ್ಲುತೂರಾಟದ ಅಹಿತಕರ ಘಟನೆ ನಡೆದದ್ದು ನಿಜ. ಇಂತಹ ಘಟನೆಗಳಿಂದ ಗಡಿ ಶಾಂತಿ ಇನ್ನಷ್ಟು ಕದಡುತ್ತದೆ.
ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಪ್ರಯತ್ನಿಸಲಾಗುವುದು,” ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ. ಭಾರತೀಯರ ಕುರಿತು ಚೀನಾ ಅಧಿಕೃತ ಸಂಸ್ಥೆ ಮಾಡಿದ ಜನಾಂಗೀಯ ನಿಂದೆ ಕುರಿತು ಅವರು ಖಾರವಾದ ಪ್ರತಿಕ್ರಿಯೆ ನೀಡಿದರು.
