ಬಂಟ್ವಾಳ: ಲೋಕಶಿಕ್ಷಣ ಇಲಾಖೆ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಯವರ ಕಛೇರಿ ಮಂಗಳೂರು, ಜಿಲ್ಲಾ ಸಾಕ್ಷರತಾ ಸಮಿತಿ ದ ಕ, ಜನಶಿಕ್ಷಣ ಟ್ರಸ್ಟ್ ಕಂಕನಾಡಿ, ಗ್ರಾಮ ಪಂಚಾಯತ್ ಸಜಿಪಮೂಡ ಇವರ ಜಂಟಿ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಸಜಿಪ ಮೂಡ ಇಲ್ಲಿ ಸಂಪೂರ್ಣ ಸಾಕ್ಷರತಾ ಆಂದೋಲನದ ಕುರಿತು ಪ್ರಾಥಮಿಕ ಸಮೀಕ್ಷಾದಾರರ ಒಂದು ದಿನದ ಕಾರ್ಯಾಗಾರ ನಡೆಯಿತು.

sajipa saksharathe
ಬಂಟ್ವಾಳ .ಪಂ.ಅಧ್ಯಕ್ಷ ಚಂದ್ರಾಸ ಕರ್ಕೇರ ಅವರು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಸಾಕ್ಷರತೆ ನೀಡುವುದು ಅತ್ಯಂತ ಪವಿತ್ರ ಕಾರ್ಯವಾಗಿದ್ದು, ಸಮಾಜದ ಸರ್ವರೂ ಗೌರವದಿಂದ ಬದುಕಲು ಸಾಕ್ಷರತೆ ಅತ್ಯಂತ ಅವಶ್ಯ. ಈ ಪವಿತ್ರ ಕಾರ್ಯದಲ್ಲಿ ಸಮಾಜದ ಎಲ್ಲರೂ ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕು, ಸರಕಾರವು ಏನೇ ಕಾರ್ಯಕ್ರಮ ಮಾಡಿದರೂ ಅದು ಅನಕ್ಷರಸ್ಥರಿದ್ದಾಗ ತನ್ನ ಉದ್ದೇಶ ಈಡೇರಿಸಿಕೊಳ್ಳಲು ವಿಫಲವಾಗುತ್ತದೆ. ನಾವೆಲ್ಲಾ ಸೇರಿ ಸಜಿಪ ಮೂಡ ಗ್ರಾಮವನ್ನು ಸಂಪೂರ್ಣ ಸಾಕ್ಷರಗ್ರಾಮವನ್ನಾಗಿ ಮಾಡಲು ಪಣತೊಡೋಣ ಎಂದು ಕರೆ ನೀಡಿದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಜಿ.ಪಂ.ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಮಾತನಾಡಿ, ನಮ್ಮ ಗ್ರಾಮದಲ್ಲಿ ಅನಕ್ಷರಸ್ಥರು ಇರುವುದು ನೋವಿನ ವಿಚಾರ. ಎಲ್ಲಾ ಕಡೆ ಅಭಿವೃದ್ಧಿಯತ್ತ ಸಾಗುತ್ತಿರುವಾಗ, ನಮ್ಮ ಕೆಲ ಬಾಂಧವರು ಅಕ್ಷರ ವಂಚಿತರಾಗಿರುವುದು ಚಿಂತೆಯ ವಿಚಾರ, ನಮ್ಮೆಲ್ಲಾ ಶಕ್ತಿ ಸಾಮಥ್ರ್ಯ ಬಳಸಿ ನಮ್ಮ ಗ್ರಾಮವನ್ನು ಸಂಪೂರ್ಣ ಸಾಕ್ಷರ ಗ್ರಾಮವನ್ನಾಗಿಸುವ ಕಡೆ ದೃಢ ಹೆಜ್ಜೆಯಿಡೋಣ. ನಿಮ್ಮೊಂದಿಗೆ ನಾವಿದ್ದೇವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷ ಗಣಪತಿ ಭಟ್ ಮಾತನಾಡಿ, ಆಂದೋಲನದ ಯಶಸ್ಸಿಗೆ ಸರ್ವರ ಸಹಕಾರ ಕೋರಿದರು.

ಜಿಲ್ಲೆಯ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಹಾಗೂ ಜನಶಿಕ್ಷಣ ಟ್ರಸ್ಟ್‍ನ ಕೃಷ್ಣ ಮೂಲ್ಯ ರವರು ಮಾತನಾಡಿ, ಎಲ್ಲರಲ್ಲೂ ನವ ಉತ್ಸಾಹ ತುಂಬಿದರು. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಸುಧಾಕರ ಕೆ, ಇವರು ಸಮೀಕ್ಷೆಯ ಕುರಿತು ವಿವರ, ವಿವಿಧ ತಂಡಗಳನ್ನು ರಚಿಸಿ ಸಮೀಕ್ಷೆ ಮಾಡುವ ವಿಧಾನದ ಕುರಿತು ಮನವರಿಕೆ ಮಾಡಿಸಿದರು. ಗ್ರಾಮ ಪಂಚಾಯತ್ ವ್ಯಾಪ್ತಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಸೇವಾನಿರತರು ಸ್ತ್ರೀಶಕ್ತಿ ಗುಂಪಿನ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರು, ಶಾಲಾ ಶಿಕ್ಷಕರು,ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸಮೂಹ ಸಂಪನ್ಮೂಲ ವ್ಯಕ್ತಿಗಳು ಸೂಕ್ತ ಸಲಹೆ ಸೂಚನೆ ನೀಡಿದರು. ಅಂತಿಮವಾಗಿ ಪ್ರತೀ ಗ್ರಾಮ ಪಂಚಾಯತ್ ಸದಸ್ಯರ ಮುಂದಾಳುತನದಲ್ಲಿ 20 ತಂಡಗಳನ್ನು ರಚಿಸಿ, ಆ.21 ರಂದು ಏಕ ದಿನ ಸಮೀಕ್ಷೆ ನಡೆಸುವುದೆಂದು ತೀರ್ಮಾನಿಸಲಾಯಿತು.

By Suddi9

Leave a Reply

Your email address will not be published. Required fields are marked *