ಬಂಟ್ವಾಳ: ಜೀವನದ ಪ್ರತಿ ಹಂತದಲ್ಲೂ ಕೃಷ್ಣ ನಮಗೆ ಆದರ್ಶ ಪುರುಷನಾಗಿ ಕಾಣುತ್ತಾನೆ. ಕೃಷ್ಣನ ಆದರ್ಶ ಗುಣಗಳನ್ನು ಪಾಲಿಸಿದರೆ ಪ್ರತಿ ಮನೆಯೂ ನಂದಗೋಕುಲವಾಗಲಿದೆ ಎಂದು ಎಬಿವಿಪಿ ರಾಜ್ಯ ಉಪಾಧ್ಯಕ್ಷ ಕೇಶವ ಬಂಗೇರ ತಿಳಿಸಿದರು.ಕಳ್ಳಿಗೆ ಗ್ರಾಮ ವಿಕಾಸ ಪ್ರತಿಷ್ಠಾನ ಹಾಗೂ ಬಾಲಗೋಕುಲ ಸಮಿತಿ ಆಶ್ರಯದಲ್ಲಿ ಬ್ರಹ್ಮರಕೂಟ್ಲುವಿನಲ್ಲಿ ನಡೆದ 12ನೇ ವರ್ಷದ ಗೋಕುಲೋತ್ಸವದಲ್ಲಿ ಅವರು ಮಾತನಾಡಿದರು. ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ಎಲ್ಲ್ಲ ವಿದ್ಯಮಾನಗಳಿಗೆ, ರಾಜಕೀಯ ರಣತಂತ್ರ, ಚಾಣಾಕ್ಷ ನಡೆಗಳಿಗೆ ಕೃಷ್ಣನ ಜೀವನ ಚರಿತ್ರೆಯೇ ಮೂಲಾಧಾರ. ಜಗತ್ತಿನ ಎಲ್ಲ ಆಗುಹೋಗುಗಳಿಗೆ ಅವನೇ ಸೂತ್ರಧಾರ ಎಂದರು. ಕಳ್ಳಿಗೆ ಗ್ರಾಪಂ ಉಪಾಧ್ಯಕ್ಷ ಪುರುಷ ಎನ್.ಸಾಲ್ಯಾನ್ ಬಿಜೆಪಿ ಮುಖಂಡ ಉಳಿಪ್ಪಾಡಿಗುತ್ತು ರಾಜೇಶ್ ನಾೈಕ್ ಅವರಿಗೆ ಗೋಕುಲೋತ್ಸವ ಸ್ಮರಣಿಕೆ ನೀಡಿದರು.
ಕಳ್ಳಿಗೆ ಗ್ರಾಪಂ ಉಪಾಧ್ಯಕ್ಷ ಪುರುಷ ಎನ್ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು.ಬ್ರಹ್ಮರಕೂಟ್ಲು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಾಧವ ವಳವೂರು, ಶ್ರೀರಾಮ ಮಂದಿರ ಅಧ್ಯಕ್ಷ ಶಶಿಧರ್ ಬ್ರಹ್ಮರಕೂಟ್ಲು, ಕಳ್ಳಿಗೆ ಗ್ರಾಮ ವಿಕಾಸ ಪ್ರತಿಷ್ಠಾನ ಅಧ್ಯಕ್ಷ ದೇವಿಪ್ರಸಾದ್ ಎಂ.ದೇವಂದಬೆಟ್ಟು, ಸಂಯೋಜಕ ಮನೋಹರ ಕಂಜತ್ತೂರು, ಗೋಕುಲೋತ್ಸವ ಸಮಿತಿ ಅಧ್ಯಕ್ಷ ಯೋಗೀಶ್ ವಿ.ಕೆ. ದರಿಬಾಗಿಲು, ಬಾಲಗೋಕುಲ ಸಮಿತಿ ಅಧ್ಯಕ್ಷೆ ಶ್ರೀಕಲಾ ಜಾರಂದಗುಡ್ಡೆ, ಬ್ರಹ್ಮರಕೂಟ್ಲು ಶಾಲಾ ಹಳೇವಿದ್ಯಾರ್ಥಿ ಸಂಘದ ಅಧ್ಯಕ್ಷ ಯೋಗೀಶ್ ದರಿಬಾಗಿಲು, ಕಳ್ಳಿಗೆ ಪಂಚಾಯಿತಿ ಸದಸ್ಯರಾದ ಮಹೇಶ್ ಚಂದ್ರಿಗೆ, ರೇವತಿ ಮಾಡಂಗೆ, ಯಶೋದಾ ಜಾರಂದಗುಡ್ಡೆ, ತಾ.ಪಂ. ಮಾಜಿ ಸದಸ್ಯೆ ಅನಿತಾ ಮಾಧವ ವಳವೂರು, ಬಾಲಗೋಕುಲ ಮಾತಾಜಿಗಳಾದ ಭವ್ಯ ರೂಪೇಶ್, ಪ್ರಿಯದರ್ಶಿನಿ ದರಿಬಾಗಿಲು, ಮನೀಷಾ ವಳವೂರು, ಶ್ರೀಮಾನ್ ಬ್ರಿಜೇಶ್ ಉಪಸ್ಥಿತರಿದ್ದರು.
ಸಾಯಂಕಾಲ ಪೆರಿಯೋಡಿ ಬೀಡುವಿನಿಂದ ಕೃಷ್ಣರಾಧೆ, ಯಕ್ಷಗಾನ ವೇಷಧಾರಿ ಪುಟಾಣಿಗಳ ಭವ್ಯಶೋಭಾಯಾತ್ರೆ ಬ್ರಹ್ಮರಕೂಟ್ಲುವಿಗೆ ಸಾಗಿತು. ಯುವಕರು ಉತ್ಸಾಹದಿಂದ ಕುಡಿಕೆಗಳನ್ನು ಒಡೆಯುತ್ತ ಮೆರವಣಿಗೆಯಲ್ಲಿ ಸಾಗಿದರು. ನಂತರ ಕೃಷ್ಣವೇಷ, ಛದ್ಮವೇಷ ಸ್ಪರ್ಧೆ ನಡೆಯಿತು. ಇತ್ತೀಚೆಗೆ ನಡೆದ ಕಂಡದ ಗೊಬ್ಬುಲು ಕ್ರೀಡಾಕೂಟ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಂತರ ಪುಟಾಣಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.
ಕಳ್ಳಿಗೆ ಗ್ರಾಪಂ ಉಪಾಧ್ಯಕ್ಷ ಪುರುಷ ಎನ್.ಸಾಲ್ಯಾನ್ ಬಿಜೆಪಿ ಮುಖಂಡ ಉಳಿಪ್ಪಾಡಿಗುತ್ತು ರಾಜೇಶ್ ನಾೈಕ್ ಅವರಿಗೆ ಗೋಕುಲೋತ್ಸವ ಸ್ಮರಣಿಕೆ ನೀಡಿದರು. ಶ್ರೀರಾಮ ಮಂದಿರ ಅಧ್ಯಕ್ಷ ಶಶಿಧರ್ ಬ್ರಹ್ಮರಕೂಟ್ಲು, ಪ್ರದೀಪ್ ಶೆಟ್ಟಿ, ಲಕ್ಷ್ಮಣ ಕಂಜತ್ತೂರು, ಪ್ರವೀಣ್ ಕಂಜತ್ತೂರು ಮತ್ತಿತರರು ಉಪಸ್ಥಿತರಿದ್ದರು.

