ಮೂಡಬಿದಿರೆ ; ಸಾಮಾಜಿಕ ಕಾರ್ಯಗಳಿಂದ ಸುದ್ದಿಯಲ್ಲಿರುವ ಜವನೆರ್ ಬೆದ್ರ ತಂಡವು ಮೂಡಬಿದಿರೆಯ ಶಹನಾಜ್ ಬಾನು ಎಂಬವರ ವಿದ್ಯಾಭ್ಯಾಸಕ್ಕಾಗಿ ಜವನೆರ್ ಬೆದ್ರ ಯುಎಇ ಘಟಕದ ವತಿಯಿಂದ ಸಂಗ್ರಹಿಸಲಾದ ರೂಪಾಯಿ 10000 ದ ಚೆಕ್ ಅನ್ನು ಜವನೆರ್ ಬೆದ್ರದ ಸದಸ್ಯರು ತಮ್ಮ ಕಛೆರಿಯಾದ ಕೋಟೆ ಟೂರಿಸಂ ನಲ್ಲಿ ಹಸ್ತಾಂತರಿಸಿದರು. ಜವನೆರ್ ಬೆದ್ರದ ಸಂಚಾಲಕ ಅಮರ್ ಕೋಟೆ ,ಹರಿಪ್ರಸಾದ್, ಯಶೋಧರ ಬಂಗೇರ , ಲಿಂಗಪ್ಪ ಶೆಟ್ಟಿ ,ಅವಿನಾಶ್ ಪೊಳಲಿ ಮತ್ತು ರಾಹುಲ್ ಕುಲಾಲ್ ಉಪಸ್ಥಿತರಿದ್ದರು
