ಮಂಗಳೂರು:ತುಳು ರಾಜ್ಯವಾಗಬೇಕೆಂದು ಹಲವು ವರ್ಷಗಳ ಹಿಂದೆಯೇ ಬೇಡಿಕೆಯಿದೆ. ಇದರ ಹೋರಾಟದ ಹಿಂದೆ ಅನೇಕ ತುಳು ಸಾಹಿತಿಗಳ, ಸಂಘಟನೆಗಳ ಹೋರಾಟವು ನಡೆದಿದೆ. ತುಳು ಭಾಷೆಯನ್ನು 8 ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ಹಲವು ಹೋರಾಟ ನಡೆದಿದೆ. ಆದರೆ ಇಷ್ಟರವರೆಗಿನ ಹೋರಾಟಕ್ಕೆ ರಾಜ್ಯ ಹಾಗೂ ಕೇಂದ್ರ ಸರಕಾರ ಖ್ಯಾರೆ ಅಂದಿಲ್ಲ.
ಇದಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರಕಾರವನ್ನು ಒತ್ತಾಯಿಸುವ ಸಲುವಾಗಿ ಜೈ ತುಳುನಾಡ್ (ರಿ.)ನ ಯುವಪಡೆಗಳು ಒಂದಾಗಿದ್ದು, ಒಂದು ದಿನದ ಟ್ವಿಟ್ ಅಭಿಯಾನ ನಡೆಸಲು ನಿರ್ಧರಿಸಿದೆ.
ಈಗಾಗಲೇ ಬೇಕಾದ ಪೂರ್ವ ಸಿದ್ಧತೆ ನಡೆಸಲಾಗಿದೆ. ಜೈ ತುಳುನಾಡು ರಿಜಿಸ್ಪ್ರೇಶನ್ ಆದ ತಂಡದಲ್ಲಿ 20 ಕ್ಕೂ ವಾಟ್ಸಪ್ ಗ್ರೂಪ್‍ಗಳು, 15ಕ್ಕೂ ಅಧಿಕ ಫೇಸ್ಬುಕ್ ಪೇಜ್‍ಳ ಮುಖಾಂತರ ಪ್ರಚಾರ ನಡೆಸಲಾಗಿದ್ದು, ಆಡಿಯೋ ರೆಕಾರ್ಡ್‍ಳನ್ನು ಹರಿಯಬಿಡಲಾಗುತ್ತಿದೆ.
ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆಯನ್ನು 8ನೇ ಪರಿಚ್ಛೆದಕ್ಕೆ ಸೇರ್ಪಡೆಯಾಗಬೇಕೆಂಬ ಆಗ್ರಹ ನೇಕ ದಶಕಗಳಿಂದ ಕೇಳಿ ಬರುತ್ತಿದೆ. ಆದರೆ ಆ ಹೋರಾಟಕ್ಕೆ ಇನ್ನೂ ನ್ಯಾಯ ಸಿಕ್ಕಿಲ್ಲ.
ಆ.10ರಂದು ಬೆಳಗ್ಗೆ 6 ಗಂಟೆಯಿಂದ ರಾತ್ರಿ 9ಗಂಟೆಯವರೆಗೆ ಹಕ್ಕೊತ್ತಾಯ ನಡೆಯಲಿದ್ದು, ದೇಶಾದ್ಯಂತ 15ಕ್ಕೂ ಹೆಚ್ಚಿನ ಭಾಷೆಗಳಲ್ಲಿ ಟ್ವಿಟ್ ಮಾಡಲು ಸಂಘಟಕ ಜೈ ತುಳುನಾಡು ತಂಡದ ಅಧ್ಯ ಅಶ್ವತ್ಥ್ ಹೇಳಿದ್ದಾರೆ.
ಈ ಸಂಘಟನೆಯಲ್ಲಿ ಯುವಕರೇ ಹೆಚ್ಚಾಗಿದ್ದು, ದೊಡ್ಡ ಮಟ್ಟದಲ್ಲಿ ತುಳು ಭಾಷೆ ಪ್ರಚಾರ ನಡೆಸಲಾಗುತ್ತಿದೆ. ಟ್ವಿರ್ಟ ಇಲ್ಲದವರಿಗೆ ಕೂಡಲೇ ಟ್ವಿಟರ್ ಖಾತೆ ತೆರೆಯುವಂತೆ ಸೂಚನೆ ನೀಡಲಾಗಿದೆ. ಉಡುಪಿ, ಬ್ರಹ್ಮಾವರ, ಪುತ್ತೂರು, ಮೂಲ್ಕಿ, ಬಂಟ್ವಾಳ, ಕಾರ್ಕಳ ಸೇರಿದಂತೆ ನಾನಾ ಕಡೆ ಪ್ರತ್ಯೆಕ ಗ್ರೂಪ್ ಮಾಡಿ ಪ್ರಚಾರ ನಡೆಸಲಾಗಿದ್ದು, ಕನಿಷ್ಠ 15ಸಾವಿರ ಟ್ವಿಟ್ ಮಾಡುವ ಉದ್ದೇಶ ಹೊಂದಲಾಗಿದೆ. ಇದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಣೀಡಲಾಗುತ್ತಿದ್ದು, ವಿದೇಶದಲ್ಲಿರುವ ತುಳುವರಿಗೂ ಈ ಬಗ್ಗೆ ಸಂದೇಶ ಕಳುಹಿಸಲಾಗಿದೆ. ದೇಶದ ನಾನಾ ರಾಜ್ಯಗಳಲ್ಲಿ ನೆಲೆಸಿರುವ ತುಳುವರಿಗೆ ಈ ಬಗ್ಗೆ ಸಂದೇಶ ಕಳುಹಿಸಲಾಗಿದೆ.
ಗುತ್ತಿದ್ದು, ಆಯಾಯ ರಾಜ್ಯ ಭಾಷೆಗಳ¯್ಲÉ ಕಳುಹಿಸುವಂತೆ ವಿನಂತಿ ಮಾಡಲಾಗಿದೆ. ಇದು ಮಾತ್ರವಲ್ಲದೆ ಇಂಗ್ಲಿಷï, ಮಲೆಯಾಳಂ, ಕೊಂಕಣಿ, ಬ್ಯಾರಿ, ಕುಂದಗನ್ನಡ, ಕನ್ನಡ, ತೆಲುಗು, ಹಿಂದಿ, ತಮಿಳು, ಮರಾಠಿ ಸೇರಿದಂತೆ 15ಕ್ಕೂ ಅಧಿಕ ಭಾಷೆಗಳಲ್ಲಿ ಸಂದೇಶಗಳನ್ನು ಕಳುಹಿಸಲಾಗುತ್ತಿದೆ. ಈ ಅಭಿಯಾನದಲ್ಲಿ ಎಲ್ಲರೂ ಕೈಜೋಡಿಸುವಂತೆ ಸಂದೇಶದಲ್ಲಿ ಆಗ್ರಹಿಸಲಾಗಿದೆ.
ತುಳು ಭಾಷೆ 8ನೇ ಪರಿಚ್ಛೆದಕ್ಕೆ ಸೇರ್ಪಡೆಯಾಗಬೇಕೆಂದು ಹಲವು ವರ್ಷದಿಂದ ಜನಪ್ರತಿನಿಧಿಗಳನ್ನು ಭೇಟಿಯಾಗಿ, ಮನವಿಗಳನ್ನು ಸಲ್ಲಿಸುತ್ತಲೇ ಇz್ದÁರೆ. ಆದರೂ ಪ್ರಯೋಜನವಾಗಿಲ್ಲ. ಆದರೆ ಈಗ ಟ್ವಿಟರ್ನಂತಹ ಸಾಮಾಜಿಕ ಜಾಲ ತಾಣವನ್ನು ದೇಶದ ಪ್ರಧಾನಿ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಸಿಎಂ ಸಿದ್ಧರಾಮಯ್ಯ ಬಳಕೆ ಮಾಡುತ್ತಿದ್ದು ಅದರ ಮುಖೇನವೇ ಪ್ರತಿಕ್ರಿಯೆ ನೀಡುತ್ತಿz್ದÁರೆ. ಅದಕ್ಕಾಗಿ ತುಳುವರೆಲ್ಲ ಸೇರಿ ಒಂದು ದಿನ ಟ್ವಿಟ್ ಅಭಿಯಾನ ನಡೆಸಲು ನಿರ್ಧರಿಸಿ ಆಡಳಿತ ಗಮನಸೆಳೆಯುವ ಪ್ರಯತ್ನ ಮಾಡುತ್ತಿz್ದÉವೆ ಎಂದು ಅಶ್ವತ್ಥ್ ಹೇಳುತ್ತಾರೆ.
ರಾಜಕೀಯ ವ್ಯಕ್ತಿಗಳಿಗೆ ತುಳುವಿನ ಕುರಿತಾಗಿ ಇರುವ ಮೌಢ್ಯತೆಯಿಂದ ತುಳು ರಾಜ್ಯದ ಸೃಷ್ಟಿ ಹಾಗೂ 8 ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವ ಪ್ರಕ್ರಿಯೆ ಮರೀಚಿಕೆಯಾಗಿಯೇ ಉಳಿದಿದೆ.
ಈ ಭಾಗದ ಪ್ರತಿನಿಧಿಸುವ ರಾಜಕಾರಣಿಗಳು ಭಾಷೆಯ ಬಗೆಗೆ ಅಭಿಮಾನ ಹೊಂದಿಲ್ಲದೆ ಇರುವುದು ಮತ್ತು ಈ ಕುರಿತಾಗಿ ಪಕ್ಷಬೇಧ ಮರೆತು ಒಟ್ಟಾಗಿ ರಾಜ್ಯ-ಕೇಂದ್ರದಲ್ಲಿ ಭಾಷೆಯ ಒಲವನ್ನು ವ್ಯಕ್ತಪಡಿಸುವ ಇರಾದೆಯನ್ನು ಇಷ್ಟರವರೆಗೆ ಪ್ರದರ್ಶಿಸದಿರುವುದು ತುಳು ಇನ್ನೂ ಸಂವಿಧಾನದ ಪರಿಭೇದಕ್ಕೆ ಸೇರದಿರಲು ಕಾರಣವಾಗಿದೆ.
ಇಲ್ಲಿನ ಜನರಲ್ಲಿ ಭಾಷಾಭಿಮಾನದ ಕೊರತೆಯಿದೆ. ತುಳು ಮಾತನಾಡುವವರು ಕೆಲಮಟ್ಟದವರು ಎಂಬ ಮನಸ್ಸುಗಳು ಇಲ್ಲಿವೆ. ಹಾಗೆಯೇ ತುಳುವಿನಿಂದ ಉದ್ಯೋಗ ದೊರಕುತ್ತದೆಯೇ ಎಂದು ಹೇಳುವವರಿದ್ದಾರೆ. ತುಳು ಮಾತನಾಡಲು ಹಿಂಜರಿಕೆಯುಳ್ಳ ವ್ಯಕ್ತಿಗಳು ತುಳುವನ್ನು ಎಲ್ಲಿ ಬೆಳೆಸುತ್ತಾರೆ? ತುಳು ಭಾಷೆಯ ಕುರಿತಾಗಿ ಇರುವ ಅಂದಾಭಿಮಾನವು ತುಳುವಿನ ಕಡೆಗಣನೆಗೆ ಕಾರಣವಾಗಿದೆ.
ತುಳು ಭಾಷೆಯ ಉಳಿವಿಗೆ ಹಗಲು ಋಆತ್ರಿಯೆನ್ನದೆ ದುಡಿದ ವಿವೇಕ ರೈ, ವಾಮನ ನಂದಾವರ, ಪಾಲ್ತಾಡಿ ರಾಮಕೃಷ್ಣ ಆಚಾರ್‍ರಂತಹ ವಿದ್ವಾಂಸರ ಅವಧಿಯಲ್ಲಿ ತುಳುವಿನ ಅಭೂತಪೂರ್ವ ಕೆಲಸ ನಡೆದಿದೆ. ಈ ಪ್ರಯತ್ನವಾಗಿ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ತುಳುವಿನ ಸರ್ಟಿಫಿಕೇಟ್, ಸ್ನಾತಕೋತ್ತರ ಡಿಪ್ಲೊಮ ಕೋರ್ಸುಗಳು ಭಾಷೆಯ ಹಿರಿಮೆಗೆ ಸಿಕ್ಕಿದ ಮನ್ನಣೆ ಎಂದು ತಿಳಿಯಬಹುದು.
ತುಳು ಅಕಾಡೆಮಿ ಸ್ಥಾಪಿಸಿರುವ ಫೆಲೋಶಿಪ್ ಪುಸ್ತಕಗಳ ಪ್ರಕಟಣೆ ಜನಮನ್ನಣೆ ಗಳಿಸಲು ಅಕಾಡೆಮಿ ಹಮ್ಮಿಕೊಂಡಿರುವ ಯೋಜನೆಗಳು. ಭಾಷೆ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಬೇಕಾದರೆ, ತುಳು ರಾಜ್ಯ ಸೃಷ್ಟಿಯಾಗಬೇಕಾದರೆ ಉಳಿದಿರುವುದು. ರಾಜಕೀಯ ಸಂಘಟನೆ ಮಾತ್ರ. ಈ ಭಾಗದ ರಾಜಕೀಯ ನೇತಾರರು ಪಕ್ಷಭೇದ ಮರೆತು ತುಳು ಚಳುವಳಿಯನ್ನು ಪುನರ್ ಸಂಘಟಿಸಬೇಕಾಗಿದೆ.
ಕೋಟ್
ದಕ್ಷಿಣ ಭಾರತದ ಪ್ರಾಚೀನ ಭಾಷೆಗಳಲ್ಲಿ ಒಂದಾಗಿರುವ ತುಳು ಪಂಚದ್ರಾವಿಡ ಭಾಷೆಗಳಲ್ಲಿ ಒಂದಾಗಿದೆ. ಈ ಭಾಗದ ಜನರ ಭಾಷೆ ತುಳು. ತುಳುಪದದ ನಿಷ್ಪತ್ತಿ ವಿವರಿಸುವುದು ಸುಲಭವಲ್ಲ. ತುಳು ಎಂಬ ಶಬ್ದಕ್ಕೆ ಮೃದು, ಸಾಧು ಸ್ವಭಾವ, ಶೌರ್ಯ, ಪರಾಕ್ರಮ ಮೊದಲಾದ ಅರ್ಥವಿದೆಯೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.
ಇಂಗ್ಲೀಷ್ ಭಾಷೆಯಲ್ಲಿ 500 ತುಳು ಭಾಷೆಯ ಶಬ್ಧಗಳನ್ನು ಗುರುತಿಸುವ ಪಿ.ಎಸ್.ರೈ ಅವರ ಸಂಶೋಧನೆ ಆಶ್ಚರ್ಯಕರ ಮಾಹಿತಿ ನೀಡುತ್ತದೆ. ಆದರೆ ಗ್ರಾಂಥಿಕ ಮಲಯಾಳ ಲಿಪಿಯನ್ನು ಹೊಂದುವ ಲಿಪಿಯನ್ನು “ತುಳು ಲಿಪಿ” ಎನ್ನಲಾಗಿದೆ. ಶಿವಳ್ಳಿ ಬ್ರಾಹ್ಮಣರು ತುಳುವಿನಲ್ಲಿ ಬರೆಯಲು ಹೆಚ್ಚಾಗಿ ಈ ಲಿಪಿಯನ್ನು ಉಪಯೋಗಿಸಿದ್ದರು.
