ಮುಂಬಯಿ: ಯುಗಪುರುಷ ಕಿನ್ನಿಗೋಳಿ ಯಕ್ಷಲಹರಿ (ರಿ.) ಸಂಸ್ಥೆಯು ಕಳೆದ ಭಾನುವಾರ ಕಿನ್ನಿಗೋಳಿಇಲ್ಲಿನ ಸಭಾಗೃಹದಲ್ಲಿ ನಡೆಸಿದ ಯಕ್ಷಗಾನ ತಾಳಮದ್ದಲೆ ಸಪ್ತಾಹ ಸಮಾರೋಪ ಕಾರ್ಯಕ್ರಮದಲ್ಲಿಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಉಡುಪಿ ಇದರ ಆಡಳಿತ ಮೊಕ್ತೇಸರ ಮನಿಫೆಲ್ಡ್ ಕೋ.ಅಪರೇಟಿವ್ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಮುಂಬಯಿ ಇದರ ಕಾರ್ಯಾಧ್ಯಕ್ಷ, ಮುಂಬಯಿ ಅಲ್ಲಿನ ಉದಾರ ದಾನಿಯಾಗಿಸರ್ವೋತ್ಕೃಷ್ಟ ಸಮಾಜ ಸೇವಕರೆಣಿಸಿದ ಕಡಂದಲೆ ಸುರೇಶ್ ಎಸ್.ಭಂಡಾರಿ ಮತ್ತು ಮೊಂಜಿನೀಸ್ ಫುಡ್ಸ್ಪ್ರೈವೇಟ್ ಲಿಮಿಟೆಡ್ ಇದರ ಉಪ ಕಾರ್ಯಾಧ್ಯಕ್ಷ, ಭಾರತ ಸರಕಾರ ಅಧೀನದ ಜನತಾ ದೂರು ಸಮಿತಿ(ಪೀಪಲ್ ಗ್ರೀವ್ಹನ್ಸ್‍ಸೆಲ್) ಇದರ ಸಂಘಟಕ, ಮಹಾರಷ್ಟ್ರ ಸರಕಾರದ ವಿಶೇಷ ಕಾರ್ಯನಿರ್ವಾಹಕಾಧಿಕಾರಿ,ಅಖಿಲ ಭಾರತ ಮಾನವ ಹಕ್ಕುಗಳ ಸಾಮಾಜಿಕ ಕಾನೂನು ಸಂಸ್ಥೆಯ ಸದಸ್ಯ ಕೇಶವ ಎನ್.ಅಂಚನ್ ಮತ್ತುಜಯರಾಮ ಎಂ.ಶೆಟ್ಟಿಅವರಿಗೆಕಲಾಪೋಷಕ ಸನ್ಮಾನ ಪ್ರದಾನಿಸಿ ಗೌರವಿಸಲಾಯಿತು.Kinnigoli (Suresh - Keshav) B

ಹಾಗೂ ಕೆ.ಶ್ರೀಪತಿ ಭಟ್ಅವರು ಸುಬ್ರಾಯ ಭಟ್ ಮುಚ್ಚೂರು ಅವರಿಗೆ ಕಲಾ ಪೋಷಕ ಸಮ್ಮಾನವನ್ನಿತ್ತುಗೌರವಿಸಿದರು. ವಿದ್ಯಾರಮೇಶ್ ಭಟ್ ಅವರಿಗೆ ಅಭಿನಂದನಾ ಗೌರವ ಪ್ರದಾನಿಸಲಾಯಿತು.ಕರ್ನಾಟಕ ಬ್ಯಾಂಕ್‍ನ ಹಿರಿಯ ಮಹಾ ಪ್ರಬಂಧಕ ರಾಘವೇಂದ್ರ ಭಟ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮಕ್ಕೆಶ್ರೀ ಕ್ಷೇತ್ರ ಕಟೀಲು ಇದರ ವೇ| ಮೂ| ಲಕ್ಷ್ಮೀನಾರಾಯಣ ಅಸ್ರಣ್ಣಅನುಗ್ರಹಿಸಿದರು. ಧರ್ಮದರ್ಶಿ ಹರಿಕೃಷ್ಣಪುನರೂರು, ಲ| ಶಾಂಭವಿ ಎಸ್.ಶೆಟ್ಟಿ, ರೊ| ಸೆವ್ರಿನ್ ಲೋಬೊ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದುಶೈಕ್ಷಣಿಕದಾನಿ ಎ.ಸುಧಾಕರ್ ನಾಯಕ್ ವಿದ್ಯಾರ್ಥಿ ವೇತನ ಪ್ರದಾನಿಸಲಾಯಿತು.ಈ ಸಂದರ್ಭದಲ್ಲಿ ಕೆ.ಭುವನಾಭಿರಾಮ ಉಡುಪ, ವಸಂತ ದೇವಾಡಿಗ, ರೊ| ಪಿ.ಸತೀಶ್ ರಾವ್, ಪ್ರೊ |ಜಗದೀಶ್ ಹೊಳ್ಳ, ಎಸ್.ಪಶುಪತಿ ಶಾಸ್ತ್ರಿ, ದೇವಪ್ರಸಾದ್ ಪುನರೂರು ಮತ್ತು ದೀಪ್ತಿ ಬಾಲಕೃಷ್ಣ ಭಟ್ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

 ವರದಿ : ರೊನಿಡಾ ಮುಂಬಯಿ

By Suddi9

Leave a Reply

Your email address will not be published. Required fields are marked *