ಬಂಟ್ವಾಳ: ಪರಶುರಾಮ ಸೃಷ್ಷಿಯ ತುಳುನಾಡಿಗೆ ತನ್ನದೆ ಆದ ಮಹತ್ವ ಇದೆ. ಧಾರ್ಮಿಕ ನಂಬಿಕೆಗಳೊಂದಿಗೆ ವೈಜ್ಞಾನಿಕ ಸತ್ಯಗಳನ್ನು ಇಲ್ಲಿನ ಜನರು ಜೀವನದಲ್ಲಿ ಅಳವಡಿಸಿ ಕೊಂಡಿದ್ದಾರೆ. ಅದಕ್ಕೆ ಆಟಿ ತಿಂಗಳಿನ ಆಚರಣೆ ಒಂದು ನಿದರ್ಶನ ಎಂದು ಚಿತ್ರ ನಿರ್ದೇಶಕ ತಮ್ಮಣ್ಣ ಶೆಟ್ಟಿ ಶಂಭುಗ ಹೇಳಿದರು.
ಆಶೀರ್ವಾದ್ ಸೇವಾ ಸಂಘ ಮತ್ತು ಆಶೀರ್ವಾದ ಮಹಿಳಾ ಸಂಘ ತುಂಬೆ ಇದರ ಆಶ್ರಯದಲ್ಲಿ ತುಂಬೆ ಮುದಲ್ಮೆಯಲ್ಲಿ ಭಾನುವಾರ ನಡೆದ 4 ನೇ ವರ್ಷದ ಆಟೊಡೊಂಜಿ ಗಮ್ಮತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಧರ್ಮ ಭೂಮಿಯಾಗಿದ್ದ ನಮ್ಮ ತುಳುನಾಡು ಇಂದು ಯುದ್ದ ಭೂಮಿಯಾಗಿದೆ. ನಮ್ಮ ಹಿರಿಯರು ಮಾಡಿದ ಸಂಸ್ಕಾರ, ಸಂಸ್ಕೃತಿಯನ್ನು ಮರೆತಿರುವುದು ಇದಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.

BTW_AUG7_3
ವೇದಿಕೆಯಲ್ಲಿ ತುಂಬೆ ಗ್ರಾ.ಪಂ. ಅಧ್ಯಕ್ಷೆ ಹೇಮಲತಾ ಜಿ. ಪೂಜಾರಿ, ಉಪಾಧ್ಯಕ್ಷ ಪ್ರವೀಣ್ ಬಿ. ತುಂಬೆ, ತಾ.ಪಂ. ಮಾಜಿ ಸದಸ್ಯ ಸೋಮಪ್ಪ ಕೋಟ್ಯನ್, ಸದಾಶಿವ ಡಿ ತುಂಬೆ, ಗ್ರಾ.ಪಂ. ಸದಸ್ಯರಾದ ಪ್ರಕಾಶ್ ಆಚಾರ್ಯ, ಶೋಭಾಲತಾ ಶೆಟ್ಟಿ, ಆತಿಕಾ ಬಾನು, ಪ್ರಮುಖರಾದ ಉಮೇಶ್ ಸುವರ್ಣ, ಸುಧಾಕರ ಕೊಟ್ಟಿಂಜ, ಸಂಘದ ಗೌರವಾಧ್ಯಕ್ಷ, ತಾ.ಪಂ.ಸದಸ್ಯ ಗಣೇಶ್ ಸುವರ್ಣ, ಅಧ್ಯಕ್ಷ ಸತೀಶ್ ಬೊಳ್ಳಾರಿ, ಮಹಿಳಾ ಸಮಿತಿಯ ಗೌರವಾಧ್ಯಕ್ಷೆ ಅನಸೂಯ ನಾಗೇಶ್, ಅಧ್ಯಕ್ಷೆ ಲಕ್ಷ್ಮಿ ಮಹೇಶ್ ಉಪಸ್ಥಿತರಿದ್ದರು.
ಸುಶಾಂತ್ ಆಚಾರ್ಯ ಸ್ವಾಗತಿಸಿ, ವಂದಿಸಿದರು. ಯೋಗೀಶ್ ಕಾರ್ಯಕ್ರಮ ನಿರೂಪಿಸಿದರು
ಬಳಿಕ ಕೆಸರು ಗದ್ದೆಯಲ್ಲಿ ವಿವಿಧ ಕ್ರೀಡಕೂಟ ನಡೆಯಿತು.
ಚಿತ್ರ: ಚಿತ್ರ ನಿರ್ದೇಶಕ ತಮ್ಮಣ್ಣ ಶೆಟ್ಟಿ ಶಂಭುಗ ಕಾರ್ಯಕ್ರಮ ಉದ್ಘಾಟಿಸಿದರು.

By Suddi9

Leave a Reply

Your email address will not be published. Required fields are marked *