ಬಂಟ್ವಾಳ: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ ‘ಉಜ್ವಲ’ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ ಮತ್ತು ಸೌವ್ ಮತ್ತಿತರ ಸೌಲಭ್ಯ ನೀಡುವ ಮೂಲಕ ಹೊಗೆಮುಕ್ತ ಗ್ರಾಮ ನಿರ್ಮಾಣ ಮಾಡಬೇಕು. ಆ ಬಳಿಕ ಸಂಸದ ನಳಿನ್ ಕುಮಾರ್ ಅವರ ಸಹಕಾರದಿಂದ ‘ಹೊಗೆಮುಕ್ತ ತಾಲ್ಲೂಕು’ ನಿರ್ಮಾಣವಾಗಲಿದೆ ಎಂದು ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಹೇಳಿದ್ದಾರೆ.6btl-Rayee
ತಾಲ್ಲೂಕಿನ ರಾಯಿಯಲ್ಲಿ ಭಾನುವಾರ ಏರ್ಪಡಿಸಿದ್ದ ರಾಯಿ-ಕೊಯಿಲ ಬಿಜೆಪಿ ಗ್ರಾಮ ಸಮಿತಿ ಸಭೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ‘ಉಜ್ವಲ’ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಮಂಜೂರಾದ ಉಚಿತ ಅಡುಗೆ ಅನಿಲ ಮತ್ತು ಸೌವ್ ಸಹಿತ ಸುರಕ್ಷಾ ಪೈಪ್ ಮತ್ತಿತರ ಸೌಲಭ್ಯ ವಿತರಿಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ದಯಾನಂದ ಸಪಲ್ಯ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ವಸಂತ ಕುಮಾರ್ ಅಣ್ಣಳಿಕೆ, ಎಚ್‍ಪಿ ಗ್ಯಾಸ್ ವಿತರಕ ಪ್ರಭಾಕರ ಶೆಟ್ಟಿ, ಸಮಿತಿ ಪ್ರಮುಖರಾದ ಎಂ.ದುರ್ಗಾದಾಸ ಶೆಟ್ಟಿ, ಸಂತೋಷ್ ಕುಮಾರ್ ಬೆಟ್ಟು, ಕೆ.ಪರಮೇಶ್ವರ ಪೂಜಾರಿ, ಗ್ರಾಮ ಪಂಚಾಯಿತಿ ಸದಸ್ಯರಾದ ಪದ್ಮನಾಭ ಗೌಡ, ಕುಸುಮ, ಯಶೋಧ ಮತ್ತಿತರರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹರೀಶ ಆಚಾರ್ಯ ಸ್ವಾಗತಿಸಿ, ವಂದಿಸಿದರು.

By Suddi9

Leave a Reply

Your email address will not be published. Required fields are marked *