ಪೊಳಲಿ: ವಿಜಯಶ್ರಿ ಮಿತ್ರ ವೃಂದ , ಧರ್ಮಜ್ಯೋತಿ ಫ್ರೆಂಡ್ಸ್ ಕ್ಲಬ್ ರಾಮಕೃಷ್ಣ ತಪೋವನ ಪೊಳಲಿ ಇದರ ಸಂಯುಕ್ತ ಆಶ್ರಯದಲ್ಲಿ ಪೊಳಲಿಯ ರಾಮಕೃಷ್ಣ ತಪೋವನದಲ್ಲಿ ಸಾಮೋಹಿಕ ವರಮಹಾಲಕ್ಷ್ಮಿ ಪೂಜೆಯನ್ನು ಸಂಬ್ರಮದಿಂದ ಆಚರಿಸಲಾಯ್ತು. ಕೋಡಿಮಜಲು ಅನಂತಪದ್ಮನಾಭ ಉಪಾದ್ಯಾಯ ವೈದಿಕ ಹಾಗೂ ಪೂಜಾ ಕಾರ್ಯಗನ್ನು ನಿರ್ವಹಿಸಿದರು. ಸುಮಾರು 300 ಕ್ಕೂ ಮಿಕ್ಕಿ ಹೆಂಗಳೆಯರು ಪೂಜಾ ಕಾರ್ಯದಲ್ಲಿ ದೇವಿಯ ಆಶೀರ್ವಾದ ಪಡೆದರು. polali varamahalakshmi 3 varamahalkshmi polali

polali varamahalakshmi 3
ಪೂಜಾ ಕಾರ್ಯಕ್ರಮದ ಬಳಿಕ ಮಾತನಾಡಿದ ಪೂಜ್ಯ ಸ್ವಾಮಿ ವಿವೇಕಚೈತನ್ಯಾನಂದ ಇತ್ತೀಚಿನ ದಿನಗಳಲ್ಲಿ ಯುವಜನತೆಗೆ ದೇವರ ಮೇಲೆ ನಂಬಿಕೆ ಕಡಿಮೆಯಾಗುತ್ತಿದ್ದು , ಕಾಟಾಚಾರದ ನಿಮಿತ್ತ ದೇವಾಲಯಕ್ಕೆ ಹೋಗುತ್ತಿರುವ ಸ್ಥಿತಿ ನಿರ್ಮಾಣವಾಗಿದೆ ಜೊತೆಗೆ ದೇವಾಲಯಗಳೂ ಸಹಾ ಒಂದು ವ್ಯಾಪಾರ ಕೇಂದ್ರದಂತಾಗಿದ್ದು ಭಕ್ತಿಯ ಲವಲೇಶವೂ ದೇವಾಲಯದಲ್ಲಿ ಕಂಡು ಬರುವುದಿಲ್ಲ ಬದಲಾಗಿ ಎಲ್ಲೆಡೆಯೂ ಕೇವಲ ಹಣವೇ ಮಾತಾನಾಡುತ್ತಿದ್ದು ಭಕ್ತಿ , ಮಾನವೀಯ ಮೌಲ್ಯಗಳೂ ಇಲ್ಲದಂತಾಗಿದೆ ಎಂದರು. ಪೂಜೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆಯನ್ನು ಸಹಾ ಏರ್ಪಡಿಸಲಾಗಿತ್ತು.

 

polali varamahalakshmi 2

*ವೀಡಿಯೋ  ನೋಡಲು  ಇಲ್ಲಿ  ಕ್ಲಿಕ್ ಕೊಡಿ.

 

By suddi9

Leave a Reply

Your email address will not be published. Required fields are marked *