ಮುಂಬಯಿ: ಮಂಗಳೂರು ಆಕಾಶವಾಣಿಯ ತುಳು ವಿಭಾಗದ ಸ್ವರ ಮಂಟಮೆ ಇದರ 9ನೇ ಸಂಚಿಕೆಯ ನೇರಪ್ರಸಾರದ ಕಾರ್ಯಕ್ರಮ ಆಗಸ್ಟ್ 5ರಂದು ಬೆಳಿಗ್ಗೆ 10.30 ಗಂಟೆಗೆ ಪ್ರಸಾರವಾಗಲಿದೆ. ಕವಿ ಕುದ್ರೆಪ್ಪಾಡಿ ಜಗನ್ನಾಥ ಆಳ್ವರ `ದೇಶ ಭಕ್ತಿಗೀತೆಲ್’ ಕವನ ಸಂಕಲನ ಮತ್ತು `ಗುತ್ತುದ ಗೌರವೊ’ ಕಾದಂಬರಿ ಕೃತಿಗಳ ಅನಾವರಣ ನಡೆಯಲಿದೆ.ಕೃತಿಗಳನ್ನು ಕನ್ನಡ ಸಾಹಿತ್ಯ ಪರಿಷತ್‍ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅನಾವರಣಗೊಳಿಸಲಿದ್ದಾರೆ. `ದೇಶ ಭಕ್ತಿಗೀತೆಲ್’ ಕೃತಿಯನ್ನು ಕಾಸರಗೋಡು ಸರಕಾರಿ ಕಾಲೇಜಿನ ನಿವೃತ್ತ ಪ್ರಾದ್ಯಾಪಕ ಶ್ರೀನಾಥ ಕಾಸರಗೋಡು ಹಾಗೂ `ಗುತ್ತುದ ಗೌರವೊ’ ಕೃತಿಯ ಬಗ್ಗೆ ಕೆ.ಟಿ.ಆಳ್ವ ವಿಮರ್ಶೆ ಮಾಡಲಿರುವರು. ಕೃತಿಗಳ ಲೇಖಕ ಕುದ್ರೆಪ್ಪಾಡಿ ಜಗನ್ನಾಥ ಆಳ್ವ, ಎಂ.ಎಸ್ ಶೆಟ್ಟಿ ಸರಪಾಡಿ ಕಾವೂರು, ಎಂಆರ್‍ಪಿಎಲ್‍ನ ಹಿರಿಯ ವ್ಯವಸ್ಥಾಪಕಿ ವೀಣಾ ಟಿ.ಶೆಟ್ಟಿ, ಭಾರತ್ ಬಿಗ್‍ಸಿನೆಮಾ ಇದರ ವ್ಯವಸ್ಥಾಪಕ ಬಾಲಕೃಷ್ಣ ಶೆಟ್ಟಿ ಮತ್ತಿತರರು ಭಾಗವಹಿಸಲಿರುವರು.IMG_20170802_132534

ಲೇಖಕ ಜಗನ್ನಾಥ ಆಳ್ವ ಅವರು ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿರುವವರು. ಕತೆ, ಕವನ, ಕಾದಂಬರಿ ಅಂಕಣ ಬರಹ, ನಾಟಕಗಳನ್ನು ತುಳು-ಕನ್ನಡ ಭಾಷೆಗಳಲ್ಲಿ ಬರೆದು ಸಾಹಿತ್ಯ ಕೃಷಿ ಮಾಡುತ್ತಿದ್ದಾರೆ. ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಆಸಕ್ತ ಕೇಳುಗರು ಪಾಲ್ಗೊಳ್ಳಲು (0824-2211999), ಮೊಬೈಲ್ 8277038000ಗೆ ಕರೆ ಮಾಡಬಹುದು ತುಳು ವಿಭಾಗದ ಕಾರ್ಯಕ್ರಮ ನಿರ್ವಾಹಕರಾದ ಡಾ| ಸದಾನಂದ ಪೆರ್ಲ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ನಿಲಯದ ಕಾರ್ಯಕ್ರಮ ಮುಖ್ಯಸ್ಥರಾದ ಎಸ್.ಉಷಾಲತಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.ಬಾನುಲಿಯ ಈ ವೇದಿಕೆ `ಸ್ವರ ಮಂಟಮೆ’ ಯು ದುಂದುವೆಚ್ಚ ಪಡೆದು ಹಾರ ತುರಾಯಿಗಳಿಲ್ಲದೆ ಸರಳವಾಗಿ ನಡೆಸುವುದು ಮತ್ತು ಹೆಚ್ಚು ಜನರನ್ನು ತಲುಪುವ ಆಕಾಶವಾಣಿ ಮಾದ್ಯಮದ ಮೂಲಕ ಜನಮನಕ್ಕೆ ಮುಟ್ಟಿಸುವ ಪ್ರಯತ್ನವಾಗಿದೆ.

ಡಿ.3ರಂದು ಬೆಳಿಗ್ಗೆ 10.30ರಿಂದ 11.30 ಗಂಟೆ ವರೆಗೆ ತುಳು ಸಾಹಿತಿ ಮಹೇಂದ್ರನಾಥ ಸಾಲೆತ್ತೂರು ಅವರ `ಕಲ್ಲಕಲೆಂಬಿ’ ತುಳು ಚುಟುಕುಗಳ ಸಂಕಲನದ ಬಿಡುಗಡೆ ಕಾರ್ಯಕ್ರಮವಿದೆ. ಸಾಹಿತಿ ಡಾ| ವಾಮನ ನಂದಾವರ ಕೃತಿ ಬಿಡುಗಡೆ ಗೊಳಿಸಲಿದ್ದು ಮಂಗಳೂರು ವಿವಿಇದರ ಬ್ರಹ್ಮ ಶ್ರೀ ನಾರಾಯಣಗುರು ಅಧ್ಯಯನ ಪೀಠದ ನಿರ್ದೇಶಕ ಮುದ್ದು ಮೂಡುಬೆಳ್ಳೆ ವಿಮರ್ಶೆ ಮಾಡಲಿದ್ದಾರೆ. ಕೃತಿ ರಚನೆಕಾರ ಮಹೇಂದ್ರನಾಥ ಸಾಲೆತ್ತೂರು ಹಾಜರಿದ್ದು ಕಾರ್ಯಕ್ರಮ ವನ್ನು ಡಾ| ಸದಾನಂದ ಪೆರ್ಲ ಮತ್ತು ಸಾವಿತ್ರಿ ನಡೆಸಿ ಕೊಡಲಿದ್ದಾರೆ. ಕೇಳುಗರು ಸಂಪರ್ಕಿಸಲು (0824-2211999 ಹಾಗೂ ಮೊಬೈಲ್ ಸಂಖ್ಯೆ 8277328000 ದೂರವಾಣಿ ಸಂಪರ್ಕಿಸಬಹುದು. ಸ್ವರ ಮಂಟಮೆಯಲ್ಲಿ ಕೃತಿ ಸಿಡಿ ಬಿಡುಗಡೆಗಾಗಿ ನೀವು 9448127672 ದೂರವಾಣಿಗೆ ಸಂಪರ್ಕಿಸಿ ಸಮಗ್ರ ಮಾಹಿತಿ ಪಡೆದುಕೊಳ್ಳಬಹುದು.ತುಳು ವಿಭಾಗದಲ್ಲಿ `ಗಾಂಪಣ್ಣನ ತಿರ್ಗಾಟೊ’ ಹಾಸ್ಯಭರಿತ ಕೌಟುಂಬಿಕ ಚರ್ಚೆ ಮತ್ತು ಪ್ರತೀ ತಿಂಗಳು ತುಳುಭಾಷೆ, ಸಂಸ್ಕøತಿ ಕ್ಷೇತ್ರದಲ್ಲಿನ ಸಾಧಕರು, ಸಿನಿಮಾ, ರಂಗಭೂಮಿ ಕ್ಷೇತ್ರದ ಮಹನೀಯರು, ವಿದ್ವಾಂಸರು ಭಾಗವಹಿಸುವ `ಚಾವಡಿ ಮದಿಪು’ ಎಂಬ ವಿನೂತನ ಚರ್ಚೆ, ಸಂವಾದ ನೇರ ಫೋನ್ ಇನ್ ಕಾರ್ಯಕ್ರಮ ಮೂಡಿ ಬರಲಿದೆ. ಕಾರ್ಯಕ್ರಮ ನಿರ್ವಾಹಕರಾದ ಡಾ| ಸದಾನಂದ ಪೆರ್ಲ ಈ ವಿಭಾಗದ ನಿರ್ವಹಣೆ ಮಾಡಲಿದ್ದಾರೆ ಎಂದು ಕಾರ್ಯಕ್ರಮ ಮುಖ್ಯಸ್ಥರಾದ ಡಾ| ವಸಂತಕುಮಾರ್ ಪೆರ್ಲ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *