ಬಂಟ್ವಾಳ:ನಿಸರ್ಗದ ಸಮತೋಲನವನ್ನು ಕಾಪಾಡುವ ಮಣ್ಣಿನ ಫಲವಂತಿಕೆಯನ್ನು ಹೆಚ್ಚಿಸುವ ಕಾಡು ಜೀವನದ ಅವಿಭಾಜ್ಯ ಅಂಗ. ನರಹರಿಪರ್ವತವನ್ನು ಮತ್ತಷ್ಟು ಹಸಿರುಗೊಳಿಸುವ ಕಾರ್ಯ ಸುತ್ತ್ಯಾರ್ಹ ಎಂದು ಬಂಟ್ವಾಳ ಸಂಚಾರಿ ಠಾಣೆಯ ಪೋಲಿಸ್ ಉಪನಿರೀಕ್ಷಕ ಚಂದ್ರಶೇಖರಯ್ಯ ಅವರು ಹೇಳಿದರು .
ರೋಟರಿ ಕ್ಲಬ್ ಬಂಟ್ವಾಳ, ಶ್ರೀ ನರಹರಿ ಸದಾಶಿವ ದೇವಾಲಯ, ಅರಣ್ಯ ಇಲಾಖೆ ಬಂಟ್ವಾಳ ವಲಯ ಇದರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಜರಗಿದ ನರಹರಿ ಪರ್ವತ ಹಸಿರು ಹೊದಿಸುವ ಅಭಿಯಾನಕ್ಕೆ ಅವರು ಬಿಲ್ವ ಪತ್ರೆ ಗಿಡ ನೆಟ್ಟು ಚಾಲನೆ ನೀಡಿದರು ಮತ್ತು ಜಾತ್ರಾಮಹೋತ್ಸವದ ಅದೃಷ್ಟ ಚೀಟಿ ಯೋಜನೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.11
ಮುಖ್ಯ ಅತಿಥಿಯಾಗಿದ್ದ ಹಿರಿಯ ಪತ್ರಕರ್ತ ಯಶು ವಿಟ್ಲ ಅವರು ನರಹರಿ ಪರ್ವತಕ್ಕೆ ಪ್ರೇಕ್ಷಣೀಯವಾಗಿ ಹೊಸ ಆಯಾಮ ನೀಡಿದ ಕೀರ್ತಿಶೇಷ ಡಾ| ಕಲ್ಲಾಜೆ ಭಾಸ್ಕರ ಮಾರ್ಲ ಅವರನ್ನು ಸ್ಮರಿಸಿದರು.
ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಸಂಜೀವ ಪೂಜಾರಿ ಅವರು ಗಿಡಮರಗಳನ್ನು ಪೂಜಿಸುವುದು ಹಸಿರು ವನವನ್ನು ನಿರ್ಮಿಸುವುದು ನಮ್ಮ ಸಂಸೃತಿ ಎಂದರು. ಬಂಟ್ವಾಳ ಸಹಾಯಕ ವಲಯ ಅರಣ್ಯ ಅಧಿಕಾರಿ ಜಿತೇಶ್ .ಪಿ ಅವರು ನರಹರಿ ಪರ್ವತದಲ್ಲಿ ನಕ್ಷತ್ರವನ್ನು ನಿರ್ಮಿಸಲು ಸಹಕಾರವನ್ನು ಅರಣ್ಯ ಇಲಾಖೆ ನೀಡುವುದು ಎಂದರು ಅರಣ್ಯ ಇಲಾಖೆ ನೀಡಿದ ನೂರಾರು ಗಿಡಗಳನ್ನು ನಡೆಸಲಾಯಿತು ದೇವಾಲಯದ ಜೀರ್ಣೋದ್ಧಾರ ಸಮತಿ ಅಧ್ಯಕ್ಷ ಡಾ| ಆತ್ಮರಂಜನ್ ರೈ ಅವರು ಉಪಸ್ಥಿತರಿದ್ದರು .
ದೇವಾಯಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ| ಪ್ರಶಾಂತ ಮಾರ್ಲ ಅವರು ಸ್ವಾಗತಿಸಿದರು ರೋಟರಿ ಕ್ಲಬ್ ಕಾರ್ಯದರ್ಶಿ ನಾರಾಯಣ ಹೆಗ್ಡೆ ವಂದಿಸಿದರು.

By suddi9

Leave a Reply

Your email address will not be published. Required fields are marked *