ಉಳ್ಳಾಲ: ಒಂದೆಡೆ ಹಚ್ಚ ಹಸಿರಿನ ಪೈರು,ಮತ್ತೊಂದೆಡೆ ಶ್ರೀ ಸೋಮೇಶ್ವರಿ ದೇವಿಯ ಸಾನಿಧ್ಯ ಇದರ ಮಧ್ಯದ ಕೆಸರುಗದ್ದೆಯಲ್ಲಿ ಮಕ್ಕಳು,ಯುವಕ,ಯುವತಿಯರು ಗದ್ದೆಯಲ್ಲಿ ಕುಣಿದು ಕುಪ್ಪಳಿಸಿ ಮಸ್ತ್ ಮಜಾಗೈದ ದೃಶ್ಯ ಜನಮನ ಸೆಳೆಯಿತು.
ಮುನ್ನೂರು ಗ್ರಾಮದ ಶ್ರೀ ಕ್ಷೇತ್ರ ಸೋಮನಾಥ ಉಳಿಯದ ವಠಾರದಲ್ಲಿ ಶ್ರೀ ಸೋಮೇಶ್ವರೀ ಮಹಿಳಾ ಮಂಡಲದ ಐದನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ” ಕೆಸರ್ ದ ಗೊಬ್ಬಲು” ಆಟೋಟ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.ಪುರುಷರು,ಮಹಿಳೆಯರು,ಮಕ್ಕಳಿಗೆ ಹಗ್ಗ-ಜಗ್ಗಾಟ, ಕಬ್ಬಡಿ,ಜಲಕಂಬುಲ,ಮಡಕೆ ಒಡೆಯುವುದು,ನಿಧಿ ಹುಡುಕಾಟ ಸೇರಿದಂತೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.ಮಕ್ಕಳು,ಯುವಕ,ಯುವತಿಯರು ಮಾತ್ರವಲ್ಲ ಮಧ್ಯ ವಯಸ್ಸಿನ ಪುರುಷರು,ಮಹಿಳೆಯರು ಕೆಸರು ಗದ್ದೆಯ ಕ್ರೀಡೆಯಲ್ಲಿ ಭಾಗವಹಿಸಿ ಮಿಂಚಿದರು. ಬೆಳಿಗ್ಗೆ ಶ್ರೀ ಸೋಮೇಶ್ವರೀ ಮಹಿಳಾ ಮಂಡಲದ ಅಧ್ಯಕ್ಷೆ ಹೇಮ.ಕೆ.ಮಂಕಿಸ್ಟ್ಯಾಂಡ್ ಆಟೋಟ ಸ್ಪರ್ಧೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಉದ್ಯಮಿ ಚಿದಾನಂದ ನಾಯ್ಕ್ ಜಪ್ಪು ,ಕತ್ತಾರ್ ಅತಿಥಿಯಾಗಿ ಭಾಗವಹಿಸಿದರು.ಶ್ರೀ ಕ್ಷೇತ್ರ ಸೋಮನಾಥ ಉಳಿಯದ ಆಡಳಿತ ಸಮಿತಿ ಗೌರವಾಧ್ಯಕ್ಷ ವಿಶ್ವನಾಥ ನಾಯ್ಕ್ ಕಲ್ಲಾಪು,ಕಾರ್ಯಾಧ್ಯಕ್ಷ ಶಿವಾನಂದ ಸೋಮನಾಥ ಉಳಿಯ, ಪ್ರ.ಕಾರ್ಯದರ್ಶಿ ಯು.ದಯಾನಂದ ನಾಯಕ್ ಮಹಿಲಕಾ ಮಂಡಳಿಯ ಉಪಾಧ್ಯಕ್ಷೆ ಯಶೋಧ ಸುಭಾಸ್ ನಗರ,ಗಾಳದ ಕೊಂಕಣಿ ಅಭ್ಯುದಯ ಸಂಘದ ಪ್ರ.ಕಾರ್ಯದರ್ಶಿ ಕೋಡಿ ಜಯ ನಾಯ್ಕ್ ಮೊದಲಾದವರಿದ್ದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಶ್ರೀ ಅರಸು,ಧೂಮಾವತಿ ಬಂಟ ದೈವ ಸ್ಥಾನದ ಮಧ್ಯಸ್ಥರಾದ ಎಸ್ .ರಾಮರಾಜನಾಯ್ಕ್,,ಗಾಳದ ಕೊಂಕಣಿ ಅಭ್ಯುದಯ ಸಂಘದ ಅಧ್ಯಕ್ಷ ನರಸಿಂಹ ನಾಯ್ಕ್,ಶ್ರೀ ಸೋಮೇಶ್ವರೀ ಸೌ.ಸ.ನಿಯಮಿತದ ಅಧ್ಯಕ್ಷ ಉಮಾನಾಥನಾಯ್ಕ್,ಉಪಾಧ್ಯಕ್ಷ ಧರ್ಮಪಾಲ್ ನಾಯ್ಕ್ ಪಂಪ್ ವೆಲ್ ವಿಜೇರಿಗೆ ಬಹುಮಾನ ವಿತರಿಸಿದರು.ಮಹಿಳಾ ಮಂಡಲದ ಅಧ್ಯಕ್ಷೆ ಹೇಮಾ.ಕೆ ಮಂಕಿಸ್ಟ್ಯಾಂಡ್ ಸಭಾಧ್ಯಕ್ಷತೆ ವಹಿಸಿದ್ದರು. ಮಹಿಳಾ ಮಂಡಲದ ಕಾರ್ಯದರ್ಶಿ ರೇಣುಕಾ ಕಲ್ಲಾಪು ಸ್ವಾಗತಿಸಿ, ವಂದಿಸಿದರು. ವೆಂಕಟೇಶ್ ಬಂಟ್ವಾಳ ನಿರೂಪಿಸಿದರು.
