ಕೈಕಂಬ: ಶ್ರೀ ವಜ್ರದೇಹಿ ಬಳಗ ಗುರುಪುರ ಇದರ ಸಂಯೋಜನೆಯಲ್ಲಿ ಶ್ರೀ ಹನುಮ ಬಾಲಸಂರಕ್ಷಣಾ ಕೇಂದ್ರ ಗುರುಪುರ ಇದರ ವಿಸ್ತ್ರತ ಕಟ್ಟಡದ ಸಹಾಯಾರ್ಥವಾಗಿ ಮಂಗಳೂರು ಪುರಭವನದಲ್ಲಿ ಜರುಗಿದ ಪ್ರಶಾಂತ್ ಗರುಪುರ ಇವರ ಸಾರಥ್ಯದ ಗುರುದಯ ತಂಡದ ರಂಗ್‍ದ ಕಲಾವಿದೆರ್ ಗುರುಪುರ ಇದರ “ದಾಯೆ ಬದ್ಕೆರಾಪುಜಿ”..ನಾಟಕವು ಉತ್ತಮ ಪ್ರದರ್ಶನವನ್ನು ನೀಡಿ ಅಪಾರ ಸಂಖ್ಯೆಯ ಕಲಾಭಿಮಾನಿಗಳ ಮನಸ್ಸಿಗೆ ಮುದವನ್ನುಂಟುಮಾಡಿತು. ಶ್ರೀ ವಜ್ರದೇಹಿ ಬಳಗದ ಕಾರ್ಯಕ್ರಮವು ಯಶಸ್ವಿಗೊಂಡಿರುವ ಹಾಗೂ ಈ ನಾಟಕದ ಮೊತ್ತವನ್ನು ಶ್ರೀ ಹನುಮ ಬಾಲಸಂರಕ್ಷಣಾ ಕೇಂದ್ರದ ಕಟ್ಟಡಕ್ಕೆ ದೇಣಿಗೆಯಾಗಿ ನೀಡಿರುವ ಕಾರಣ ನಮ್ಮ ಎಲ್ಲಾ ಸದಸ್ಯರು ಎಲ್ಲಾ ರಂಗ್‍ದ ಕಲಾವಿದರಿಗೆ ಅಭಾರಿಯಾಗಿದ್ದೇವೆ.




