ಉರ್ವ :ತುಳು ಭಾಷೆ, ತುಳುನಾಡಿನ ಸಂಸ್ಕೃತಿ ಹಾಗೂ ಇಲ್ಲಿನ ವಿಶಿಷ್ಟ ಪರಂಪರೆಯನ್ನು ಪ್ರೀತಿಸಿ, ಪೋಷಿಸುವ ನಿಟ್ಟಿನಲ್ಲಿ ಬಂಟ ಸಮಾಜಎಲ್ಲ ಸಮುದಾಯಗಳಿಗಿಂತ ಮುಂಚೂಣಿಯಲ್ಲಿದೆಎಂದುತುಳು ಭಾಷಾ ವಿದ್ವಾಂಸ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯ ಕೆ.ಕೆ.ಪೇಜಾವರಅವರುಅಭಿಪ್ರಾಯಪಟ್ಟರು.
ಮಂಗಳೂರಿನ ಅಶೋಕನಗರ-ಉವ9 ಬಂಟರ ಸಂಘದ ವತಿಯಿಂದ ಉರ್ವಸ್ಟೋರ್ ಬಳಿಯ ಕರ್ನಾಟಕ ತುಳು ಸಾಹಿತ್ಯಅಕಾಡೆಮಿಯ ಸಿರಿಚಾವಡಿಯಲ್ಲಿ ಜು.23 ರಂದುಆಯೋಜಿಸಲಾದ `ಮರಿಯಲಡೊಂಜಿಐತಾರ”-ಆಟಿದಕೂಟದಲ್ಲಿ ವಿಶೇಷ ಉಪನ್ಯಾಸ ನೀಡಿದರು.ಆಟಿ ತಿಂಗಳು ಅನಿಷ್ಟವಲ್ಲ. ಪೂರ್ವಜರು ನಮಗೆ ಬಿಟ್ಟು ಹೋದ ಶ್ರೀಮಂತ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆಅರಿವು ಮೂಡಿಸುವಲ್ಲಿಇಂತಹ ಕಾಯ9ಕ್ರಮಗಳು ಅನುಕರಣೀಯಎಂದರು.
ಸಮಾರಂಭವನ್ನು ಉದ್ಘಾಟಿಸಿದ ಕನಾ9ಟಕ ತುಳು ಸಾಹಿತ್ಯಅಕಾಡೆಮಿಯರಿಜಿಸ್ಟ್ರಾರ್ಚಂದ್ರಹಾಸರೈಅವರು ಮಾತನಾಡಿ, ಅಕಾಡೆಮಿಯು ತುಳು ಭಾಷೆಯ ಬೆಳವಣಿಗೆಗೆ ನಿರಂತರವಾಗಿ ಶ್ರಮಿಸುತ್ತಿದ್ದು, ತುಳು ಭಾಷಾಅಧ್ಯಯನಕ್ಕೆ ವಿಶೇಷ ಪ್ರೊತ್ಸಾಹ ನೀಡುತ್ತಿದೆಎಂದರು.
ಮುಖ್ಯಅತಿಥಿಯಾಗಿ ಪಾಲ್ಗೊಂಡ ಬಂಟರಯಾನೆ ನಾಡವರ ಮಾತೃ ಸಂಘದಅಧ್ಯಕ್ಷಕೆ.ಅಜಿತ್ಕುಮಾರ್ರೈ ಮಾಲಾಡಿಅವರು `ಆಟಿದಕೂಟ’ ಹಮ್ಮಿಕೊಂಡ ಉವ9 ಬಂಟರ ಸಂಘವನ್ನು ಅಭಿನಂದಿಸಿ, ಶುಭ ಹಾರೈಸಿದರು. ಅಶೋಕನಗರ- ಉರ್ವಬಂಟರ ಸಂಘದ ಅಧ್ಯಕ್ಷ ಸದಾಶಿವ ಶೆಟ್ಟಿಸಮಾರಂಭದಅಧ್ಯಕ್ಷತೆ ವಹಿಸಿದ್ದರು.ಗೌರವಅಧ್ಯಕ್ಷ ಮೇಗಿನಮಾಲಾಡಿ ಬಾಲಕೃಷ್ಣ ಶೆಟ್ಟಿ, ಖಜಾಂಚಿ ನಾರಾಯಣ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸಂಘದಉಪಾಧ್ಯಕ್ಷರವಿ ಶೆಟ್ಟಿ ಪ್ರಸ್ತಾವನೆಗೈದು, ಸ್ವಾಗತಿಸಿದರು.ಜತೆ ಕಾಯ9ದಶಿ9 ಸತೀಶ್ ಶೆಟ್ಟಿಕೊಡಿಯಾಲ್ಬೈಲ್ ಕಾಯ9ಕ್ರಮ ನಿವ9ಹಿಸಿದರು. ಪ್ರಧಾನ ಕಾಯ9ದಶಿ9 ದೇವಿಪ್ರಸಾದ್ ಶೆಟ್ಟಿ ವಂದಿಸಿದರು.
ಈ ಸಂದರ್ಭದಲ್ಲಿ 48 ಬಗೆಯ ತುಳುನಾಡಿನ ಸಾಂಪ್ರದಾಯಿಕ ಖಾದ್ಯಗಳನ್ನು ಉಣಬಡಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಘದ ಸದಸ್ಯರ ಮಕ್ಕಳಿಂದ ವಿವಿಧ ವಿನೋದಾವಳಿ ಹಾಗೂ ಹವ್ಯಾಸಿ ಬಳಗ, ತೋಡ್ಲಮಜಲುಇವರಿಂದ `ದೇವು ಪೂಂಜ ಪ್ರತಾಪ’ಯಕ್ಷಗಾನಜರುಗಿತು.

