ಮಂಗಳೂರು: ಸಮುದಾಯದ ನಾಯಕತ್ವ ವಹಿಸಲು ಎರಡನೆ ಹಂತದ ಯುವ ಜನಾಂಗವನ್ನು ಬೆಳೆಸಲು ಮುಂದಾಗುವಂತೆ ಉಡುಪಿ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಸಲಹೆ ನೀಡಿದ್ದಾರೆ. ಗಾಳದ ಕೊಂಕಣಿ ಸಮಾಜ ಬಾಂಧವರು ಭಾನುವಾರ ಶ್ರೀಗಳನ್ನು ಉಡುಪಿಯ ಅದಮಾರು ಮಠದಲ್ಲಿ ಭೇಟಿಯಾದ ಸಂದರ್ಭ ಅವರು ಶಿಷ್ಯವೃಂದಕ್ಕೆ ಆರ್ಶೀವರ್ಚನ ನೀಡುತ್ತಿದ್ದರು.
ನಾಯಕತ್ವದ ಗುಣಹೊಂದಿರುವ ಯುವ ಜನಾಂಗವನ್ನು ಗುರುತಿಸಿ ಅವರನ್ನು ಮುನ್ನೆಲೆಗೆ ತರುವುದರೊಂದಿಗೆ ಸಮುದಾಯದ ಬೆಳವಣಿಗೆಗೂ ಸಹಕಾರಿಯಾಗುವುದು ಎಂದ ಶ್ರೀಗಳು ಸಮುದಾಯದ ಸಂಘಸಂಸ್ಥೆಗಳ ಕಾರ್ಯಚಟುವಟಿಕೆಯ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು. 
ಶ್ರೀಕ್ಷೇತ್ರ ಸೋಮನಾಥ ಉಳಿಯದ ಆಡಳಿತ ಸಮಿತಿ ಅಧ್ಯಕ್ಷ ಜೆ.ರವೀಂದ್ರ ನಾಯ್ಕ್, ಶ್ರೀ ಅರಸು ಧೂಮಾವತಿ ಬಂಟ ದೈವಸ್ಥಾನದ ಮಧ್ಯಸ್ಥರಾದ ಎಸ್.ರಾಮರಾಜ್ ನಾಯ್ಕ್, ಗಾಳದಕೊಂಕಣಿ ಅಭ್ಯುಧಯ ಸಂಘದ ಅಧ್ಯಕ್ಷ ನರಸಿಂಹ ನಾಯ್ಕ್ ಹರೇಕಳ, ಪ್ರಧಾನ ಕಾರ್ಯದರ್ಶಿ ಕೋಡಿ ಜಯನಾಯ್ಕ್, ಶ್ರೀಸೋಮೇಶ್ವರಿ ಮಹಿಳಾ ಮಂಡಳದ ಅಧ್ಯಕ್ಷೆ ಹೇಮ ಕೆ. ಮಂಕಿಸ್ಟ್ಯಾಂಡ್ ಅವರು ಶ್ರೀಗಳೊಂದಿಗೆ ಸಂಘಗಳ ಚಟುವಟಿಕೆಗಳ ಬಗ್ಗೆ ವಿಚಾರ ವಿನಿಮಯಗೈದರು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ರಂಜನ್ ನಾಯ್ಕ್, ಮುರಳೀಧರ್ ನಾಯ್ಕ್, ವೆಂಕಟೇಶ್ ಬಂಟ್ವಾಳ, ನಾಗೇಶ್ ಕೊಡಕಲ್, ಕೋಡಿ ಲಕ್ಷ್ಮಣ ನಾಯ್ಕ್, ಪ್ರವೀಣ್ ನಾಯ್ಕ್, ಮಹೇಶ್ ಬಂಟ್ವಾಳ್, ಆಶಾ ನಾಯ್ಕ್ ಗೋರಿಗುಡ್ಡೆ, ಧನಲಕ್ಷ್ಮಿ ಎಂ., ಶಾರದ ಎಂ. ಅಸೈಗೋಳಿ, ಮೋಹಿನಿ ಶೆಟ್ಟಿಬೊಟ್ಟು ಮೊದಲಾದವರು ಇದ್ದರು.
