ಬಂಟ್ವಾಳ:ತಾಲ್ಲೂಕಿನಲ್ಲಿ ಕಳೆದ ಎರಡು ತಿಂಗಳಿನಿಂದ ನಡೆಯುತ್ತಿರುವ ಕೆಲವೊಂದು ಅಹಿತಕರ ಘಟನೆ ಮತ್ತು ದುರ್ಘಟನೆ ಮಾತ್ರವಲ್ಲದೆ ಸಾಮಾಜಿಕ ಜಾಲತಾಣ ಮೂಲಕ ಯುವಜನತೆ ಕೋಮು ಸಂಘರ್ಷ ಮತ್ತು ಡ್ರಗ್ಸ್ ಮಾಫಿಯಾ ಮತ್ತಿತರ ಚಟುವಟಿಕೆಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ಇದರಿಂದಾಗಿ ಇಂತಹ ಯುವಜನತೆಯಲ್ಲಿ ಜನಜಾಗೃತಿ ಮೂಡಿಸುವುದರ ಜೊತೆಗೆ ಅವರನ್ನು ಶಿಕ್ಷಣದ ಕಡೆಗೆ ಕೊಂಡೊಯ್ದು ಅವರಲ್ಲಿ ಪರಸ್ಪರ ಸಾಮರಸ್ಯದ ಬದುಕಿನ ಒಳಿತಿನ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಬಿ.ಸಿ.ರೋಡ್ ಮಿತ್ತಬೈಲು ಜುಮ್ಮಾ ಮಸೀದಿಯಲ್ಲಿ ಈಚೆಗೆ ಸಮಾಲೋಚನೆ ಸಭೆ ನಡೆಸಲಾಗಿದೆ.

ಈ ಸಭೆಯಲ್ಲಿ ಒಟ್ಟು 32 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಹೊಂದಿರುವ ‘ಮುಸ್ಲಿಂ ಸಮಾಜ ಬಂಟ್ವಾಳ’ ನೂತನ ಸಮಿತಿ ರಚಿಸಲಾಗಿದೆ. ಸಮಿತಿ ಗೌರವಾಧ್ಯಕ್ಷರಾಗಿ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್.ಖಾದರ್ ಬಂಟ್ವಾಳ, ಅಧ್ಯಕ್ಷರಾಗಿ ಐ.ಅಬ್ಬಾಸ್ ಕೈಕಂಬ, ಉಪಾಧ್ಯಕ್ಷರಾಗಿ ಕೆ.ಎಚ್.ಅಬೂಬಕ್ಕರ್ ತಲಪಾಡಿ, ಪಿ.ಎ.ರಹೀಂ ಕೈಕಂಬ, ಡಾ.ಅಮೀರ್ ಅಹ್ಮದ್ ತುಂಬೆ, ಪ್ರಧಾನ ಕಾರ್ಯದರ್ಶಿಯಾಗಿ ಲುಕ್ಮಾನ್ ಬಂಟ್ವಾಳ ಮತ್ತು ಮಹಮ್ಮದ್ ಇಕ್ಬಾಲ್ ಗೂಡಿನಬಳಿ, ಪತ್ರಿಕಾ ವಕ್ತಾರನಾಗಿ ಶಹುಲ್ ಹಮೀದ್ ಪರ್ಲಿ ಯಾ ಇವರು ಆಯ್ಕೆಯಾಗಿದ್ದಾರೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *