ಬಂಟ್ವಾಳ : ಸಜೀಪನಡು ಗ್ರಾಮದ ಕುಂಚಿನಡ್ಕ ಪದವಿನಲ್ಲಿ ನೀರು ತುಂಬಿದ ಕಲ್ಲುಕೋರೆಗೆ ಎಂಟರ ಹರೆಯದ ಬಾಲಕ ಬಿದ್ದು ಮ್ರತಪಟ್ಟ ಘಟನೆ ಶನಿವಾರ ಸಂಜೆ ನಡೆದಿದೆ. ಮ್ರತಪಟ್ಟ ಬಾಲಕನನ್ನು ಸ್ಥಳೀಯ ನಿವಾಸಿ 4ನೇ ತರಗತಿಯ ವಿದ್ಯಾರ್ಥಿ ಇರ್ಫಾನ್ (೮)ಎಂದು ಗುರುತಿಸಲಾಗಿದೆ.ಶಾಲೆ ಬಿಟ್ಟು ಸಹಪಾಠಿಗಳ ಜೊತೆ ಮನೆಗೆ ತೆರಳಿದಾಗ ಈಘಟನೆ ನಡೆದಿದೆ.ಕಂಚಿಚನಡ್ಕಪದವಿನಲ್ಲಿ ಅಕ್ರಮ ಕಲ್ಲುಕೋರೆ ಯಾರ್ಡ್ ನಂತಿದ್ದು, ಈಎಲ್ಲಾ ಕೋರೆಯಲ್ಲಿ ಮಳೆ ನೀರು ನಿಂತಿದೆ.
ಕೋರೆ ಹೊಂಡ ಮುಚ್ಚಬೇಕೆಂದು ಜಿಲ್ಲಾಡಳಿತ ಹಲವು ಬಾರಿ ಸೂಚನೆ ನೀಡಿದ್ದರೂ ಇಲ್ಲಿ ಮಾತ್ರ ಸಂಬಂಧಿಸಿದವರು ಕೋರೆ ಮುಚ್ಚುವ ಉಸಾಬರಿಗೆ ಹೋಗಿಲ್ಲ.ಇದೀಗ ಬಾಲಕನೊಬ್ಬ ಕೋರೆಗೆ ಬಿದ್ದು ಸಾವನ್ನಪ್ಪಿದ್ದಾನೆ.ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.

