ದಿನಾಂಕ 10.07.2017 ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕದ ವೇದವ್ಯಾಸ ಧ್ಯಾನಮಂದಿರದಲ್ಲಿ ಗುರುಪೂರ್ಣಿಮೆ ಉತ್ಸವವನ್ನು ಆಚರಿಸಲಾಯಿತು. ಶ್ರೀರಾಮ ಶಿಶುಮಂದಿರ ವ್ಯವಸ್ಥಾಪಕಿ ಶ್ರೀಮತಿ ಸುಧಾ ಸೂರ್ಯಭಟ್ ಗುರುಪೂರ್ಣಿಮೆಯ ಮಹತ್ವವನ್ನು ತಿಳಿಸಿಕೊಟ್ಟರು.
ವೇದಿಕೆಯಲ್ಲಿ ಹಿರಿಯರಾದ ಶ್ರೀಮತಿ ಭವಾನಿ, ಮಾತೃಭಾರತಿ ಸದಸ್ಯರಾದ ಶ್ರೀಮತಿ ಧನಲಕ್ಷ್ಮೀ, ಶ್ರೀಮತಿ ಆಶಾ, ಶ್ರೀಮತಿ ವೀಣಾ ಹಾಗೂ ಮುಖ್ಯೋಪಾಧ್ಯಾಯ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಶ್ರೀಮತಿ ಜಯಶ್ರೀ ಸ್ವಾಗತಿಸಿ, ಕು.ರೇಖಾ ವಂದಿಸಿ, ಕು.ಪೂರ್ಣಿಮಾ ಮಾತಾಜಿ ನಿರೂಪಿಸಿದರು.
