ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕಇಲ್ಲಿ ದಿನಾಂಕ 22.07.2017 ಶನಿವಾರದಂದು ವಿದ್ಯಾರ್ಥಿಗಳ ಮನಸ್ಸಿನ ಕಲ್ಪನಾಲಹರಿಗೆ ಬಣ್ಣತುಂಬಿ ಸೃಜನಶೀಲ ಸ್ವ-ಕಲಿಕೆಗೆ ಸಹಾಯಕವಾಗುವ ನಿಟ್ಟಿನಲ್ಲಿಆರಂಭಗೊಂಡ ಸ್ಮಾರ್ಟ್ ಬೋರ್ಡ್ ಕಲಿಕಾ ತರಗತಿಯನ್ನು ಶ್ರೀ ದಾಮೋದರ ಮಾರ್ಲರಾಷ್ಟ್ರೀಕೃತ ಬ್ಯಾಂಕಿನ ನಿವೃತ್ತಅಧಿಕಾರಿ(ಎಸ್.ಬಿ.ಐ) ಉದ್ಘಾಟಿಸಿದರು.ತದನಂತರ ವಿದ್ಯಾರ್ಥಿಗಳಲ್ಲಿ ಸಂಘಟನಾ ಕೌಶಲ ಬೆಳೆಸಲು ಮತ್ತು ಸಮಾಜಮುಖಿ ಸಂಘಟನೆಗಳಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದರಚಿಸಲಾದ ವಿವಿಧ ಸಂಘಗಳ ಉದ್ಘಾಟನೆಯನ್ನು ಶ್ರೀಗಣೇಶ್‍ಕಾಮತ್ ವೈದ್ಯರುಯೆನಪೋಯಆಸ್ಪತ್ರೆ ನೆರವೇರಿಸಿ ಮಾತನಾಡಿದಅವರು ಶಾಲೆಯ ಚಟುವಟಿಕೆಗಳ ಬಗ್ಗೆ ಸಾರ್ವಭೌಮ ಶಿಕ್ಷಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. 
ಅತಿಥಿಗಳಾಗಿ ವೇದಿಕೆಯಲ್ಲಿದ್ದ ಶ್ರೀ ಸಂತೋಷ್ ಪೈ ವೈದ್ಯರುಯೆನಪೋಯಆಸ್ಪತ್ರೆ, ನಮ್ಮದೇಶದ ಭವಿಷ್ಯ ಬಹಳ ಉತ್ತಮವಾಗಿತ್ತೆಅನ್ನೋ ಭರವಸೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಮಕ್ಕಳ ಸಂಸ್ಕಾರಯುತ ಮೌಲ್ಯಗಳನ್ನು ಕಂಡಾಗ ನನಗೆ ಬಂತುಅನ್ನೋ ಮಾತನ್ನು ವ್ಯಕ್ತಪಡಿಸಿದರು.ವೇದಿಕೆಯಲ್ಲಿ ಉಪಸ್ಥಿತರಿದ್ದ ದಾಮೋದರ ಮಾರ್ಲ ಮತ್ತು ನಾಗೇಶ್‍ಕಲ್ಲಡ್ಕ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.ವಿವೇಕಾನಂದ ವಿದ್ಯಾವರ್ಧಕ ಸಂಘದಅಧ್ಯಕ್ಷರು ಶ್ರೀರಾಮ ವಿದ್ಯಾಕೇಂದ್ರದ ಮಾರ್ಗದರ್ಶಕರಾದ ಪ್ರಭಾಕರ ಭಟ್‍ಕಲ್ಲಡ್ಕ, ವಿದ್ಯಾಕೇಂದ್ರದ ಸಮಚಾಲಕರು ವಸಂತ ಮಾಧವ ಉಪಸ್ಥಿತರಿದ್ದರು.ಶ್ರೀಮತಿ ಅನ್ನಪೂರ್ಣ ಸ್ವಾಗತಿಸಿ, ಶ್ರೀಮತಿ ರೂಪಕಲಾ ವಂದಿಸಿ, ಕುಮಾರಿ ಮೀನಾಕ್ಷಿ ನಿರೂಪಿಸಿದರು.
